ಸಾರಾಂಶ
ಕುಮಟಾ ಪಟ್ಟಣದ ಮಣಕಿ ಮೈದಾನದಲ್ಲಿ ಅ. ೩೦ರಿಂದ ನ. ೩ರ ವರೆಗೆ ೫ ದಿನಗಳ ಕಾಲ ೮ನೇ ವರ್ಷದ ಕುಮಟಾ ವೈಭವ ನಡೆಯಲಿದೆ ಎಂದು ತಾಂಡವ ಕಲಾನಿಕೇತನದ ಅಧ್ಯಕ್ಷ ಮಂಜುನಾಥ ಲಿಂಗಪ್ಪ ನಾಯ್ಕ ತಿಳಿಸಿದ್ದಾರೆ.
ಕುಮಟಾ: ಪಟ್ಟಣದ ಮಣಕಿ ಮೈದಾನದಲ್ಲಿ ಅ. ೩೦ರಿಂದ ನ. ೩ರ ವರೆಗೆ ೫ ದಿನಗಳ ಕಾಲ ಪೂರ್ವ ನಿಯೋಜಿತವಾದ ೮ನೇ ವರ್ಷದ ಕುಮಟಾ ವೈಭವ ನಡೆಯಲಿದ್ದು ಸ್ಥಳೀಯ ನೆಲ, ಜಲ, ಸಂಸ್ಕೃತಿ, ನಾಡು-ನುಡಿಯನ್ನು ಬಿಂಬಿಸುವ ಕಾರ್ಯಕ್ರಮಗಳೊಟ್ಟಿಗೆ ಪ್ರತಿನಿತ್ಯ ಮನೋರಂಜನೆಯ ರಸದೌತಣ ನೀಡಲಿದೆ ಎಂದು ತಾಂಡವ ಕಲಾನಿಕೇತನದ ಅಧ್ಯಕ್ಷ ಮಂಜುನಾಥ ಲಿಂಗಪ್ಪ ನಾಯ್ಕ ತಿಳಿಸಿದ್ದಾರೆ.
ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ಸ್ಥಳೀಯ ಕಲಾವಿದರಿಂದ ಪ್ರತಿನಿತ್ಯ ಸ್ಥಳೀಯ ಕಲೆ- ಸಂಸ್ಕೃತಿಯ ಕಾರ್ಯಕ್ರಮಗಳು, ಅ. ೩೦ರಂದು ಗಾಯಕ ಗುರುಕಿರಣ ತಂಡದಿಂದ ವಿಶೇಷ ಕಾರ್ಯಕ್ರಮ, ಸ್ಥಳೀಯ ಕಾರ್ಯಕ್ರಮದಲ್ಲಿ ನವರಸ ಶಿವ ಭರತನಾಟ್ಯ, ಅ. ೩೧ರಂದು ಗಂಗಾಧರ ಹಳದೀಪುರ ತಂಡದಿಂದ ಕೊಳಲು, ಸ್ಯಾಕ್ಸೋಫೋನ್ ವಾದನ, ಸಂವೇದನ ಹೊನ್ನಾವರ ತಂಡದಿಂದ ಭರತನಾಟ್ಯ, ಹೆಸರಾಂತ ಆ್ಯಂಕರ್ ಅನುಶ್ರೀ, ಗಾಯಕಿ ಜೋಗಿ ನಮಿತಾ ತಂಡದಿಂದ ವಿಶೇಷ ಕಾರ್ಯಕ್ರಮ, ನ. ೧ರಂದು ರಾಜ್ಯೋತ್ಸವ ನಿಮಿತ್ತ ನಾಡು ನುಡಿಯ ಸಂಗೀತ ನೃತ್ಯ, ಬಸವ ವಾಹಿನಿಯಿಂದ ಗಾನನಾಟ್ಯ ರಸಧಾರೆ, ನ. ೨ರಂದು ಸ್ಥಳೀಯ ಕಾರ್ಯಕ್ರಮಗಳ ಬಳಿಕ ಮೂರು ಮುತ್ತು ತಂಡದಿಂದ ಹಾಸ್ಯ ನಾಟಕ, ನ. ೩ರಂದು ಸ್ಥಳೀಯ ಕಾರ್ಯಕ್ರಮಗಳಲ್ಲಿ ನೃತ್ಯ ಪ್ರದರ್ಶನ, ವಿಶೇಷ ಕಾರ್ಯಕ್ರಮದಲ್ಲಿ ಯುವ ಜನತೆಗಾಗಿಯೇ ಡಿ.ಜೆ. ಕ್ರಾಸ್ ಸ್ಟಾರ್, ಎಲ್‌ಇಡಿ ಡ್ಯಾನ್ಸರ್ಸ್, ರ‍್ಯಾಪರ್ ವಿರಾಜ್ ತಂಡಗಳಿಂದ ಕಾರ್ಯಕ್ರಮ ಪ್ರಸ್ತುತಿ ಇರಲಿದೆ.ಕಾರ್ಯಕ್ರಮವನ್ನು ಉಪಸಭಾಪತಿ ರುದ್ರಪ್ಪ ಲಮಾಣಿ ಉದ್ಘಾಟಿಸಲಿದ್ದು, ವಿಶೇಷ ಆಹ್ವಾನಿತರಾಗಿ ಶಾಸಕ ದಿನಕರ ಶೆಟ್ಟಿ ಪಾಲ್ಗೊಳ್ಳಲಿದ್ದಾರೆ. ಸಭಾ ಕಾರ್ಯಕ್ರಮಕ್ಕೆ ಮುನ್ನ ನೆಲ ಜಲ, ಸಂಸ್ಕೃತಿ ಹಾಗೂ ಅಭಿವೃದ್ಧಿಯ ಕುರಿತು ಆಹ್ವಾನಿತ ತಜ್ಞರ ಮೂಲಕ ಚರ್ಚೆ ನಡೆಯಲಿದೆ. ಉಳಿದಂತೆ ಈ ಬಾರಿ ವಿಭಿನ್ನವಾದ ಅಮ್ಯೂಸ್‌ಮೆಂಟ್‌ಗಳು, ಆಹಾರ, ಖಾದಿ, ಕರಕುಶಲ, ಮುಂತಾದವುಗಳ ಮೇಳವೂ ಇರಲಿದೆ. ಸಾಧಕರಿಗೆ ಸನ್ಮಾನಿಸಲಾಗುವುದು ಎಂದು ಮಂಜುನಾಥ ಲಿಂಗಪ್ಪ ನಾಯ್ಕ ವಿವರಿಸಿದರು.
ಇದೇ ವೇಳೆ ಕಾರ್ಯಕ್ರಮದ ಆಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಲಾಯಿತು. ಮಂಜುನಾಥ ನಾಯ್ಕ, ಹರೀಶ ನಾಯ್ಕ, ಲಂಬೋದರ ನಾಯ್ಕ, ರವಿ ಶೇಟ್, ಯಶವಂತ ನಾಯ್ಕ, ಮಂಜುನಾಥ ನಾಯ್ಕ, ಮಹೇಶ ಕರ್ಕಿಕರ, ವಿಕಾಸ ನಾಯ್ಕ, ಕೃಷ್ಣ ಪಟಗಾರ, ಮಂಜುನಾಥ ಭಂಡಾರಿ, ಮೋಹನ ಆಚಾರಿ, ಸಚಿನ್ ನಾಯ್ಕ, ಜಗದೀಶ ನಾಯ್ಕ, ಗಣಪತಿ ಗುನಗಾ, ಮಂಜುನಾಥ ಭಟ್ ಇತರರು ಇದ್ದರು.;Resize=(128,128))
;Resize=(128,128))
;Resize=(128,128))