ಜಿಲ್ಲೆಯ ನಾಲ್ವರು ಪತ್ರಕರ್ತರಿಗೆ ಪ್ರಶಸ್ತಿ

| Published : Jul 31 2025, 01:35 AM IST

ಸಾರಾಂಶ

ನಾಲ್ವರು ಹಿರಿಯ ಪತ್ರಕರ್ತರ ಸ್ಮರಣಾರ್ಥ ಕೊಡಮಾಡುವ 4 ಪ್ರಶಸ್ತಿಗಳಿಗೆ ಜಿಲ್ಲೆಯ ನಾಲ್ವರು ಪತ್ರಕರ್ತರನ್ನು ಆಯ್ಕೆ ಮಾಡಲಾಗಿದೆ.

ಕನ್ನಡಪ್ರಭ ವಾರ್ತೆ ಬಾಗಲಕೋಟೆ

ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಘಟಕ ಹಾಗೂ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಸಹಯೋಗದಲ್ಲಿ ಜು.31ರಂದು ನಗರದಲ್ಲಿ ಜಿಲ್ಲಾಮಟ್ಟದ ಪತ್ರಿಕಾ ದಿನಾಚರಣೆ ನಡೆಯಲಿದ್ದು, ಕಾರ್ಯಕ್ರಮದಲ್ಲಿ ನಾಲ್ವರು ಹಿರಿಯ ಪತ್ರಕರ್ತರ ಸ್ಮರಣಾರ್ಥ ಕೊಡಮಾಡುವ 4 ಪ್ರಶಸ್ತಿಗಳಿಗೆ ಜಿಲ್ಲೆಯ ನಾಲ್ವರು ಪತ್ರಕರ್ತರನ್ನು ಆಯ್ಕೆ ಮಾಡಲಾಗಿದೆ.

ಹಿರಿಯ ಪತ್ರಕರ್ತರಿಗೆ ನೀಡಲಾಗುವ ದಿ.ಶರಣಬಸವರಾಜ ಜಿಗಜಿನ್ನಿ ಪ್ರಶಸ್ತಿಗೆ ಮಲ್ಲಿಕಾರ್ಜುನ ರಾಜನಾಳ, ದಿ.ಶ್ರೀಶೈಲ ಅಂಗಡಿ ಹೆಸರಿನಲ್ಲಿ ನೀಡುವ ಅತ್ಯುತ್ತಮ ಗ್ರಾಮೀಣ ಪತ್ರಕರ್ತ ಪ್ರಶಸ್ತಿಗೆ ಪ್ರಕಾಶ ಗುಳೇದಗುಡ್ಡ, ದಿ.ರಾಮ ಮನಗೂಳಿ ಸ್ಮರಣಾರ್ಥ ನೀಡುವ ಉತ್ತಮ ವರದಿಗಾರ ಪ್ರಶಸ್ತಿಗೆ ರವಿರಾಜ ಗಲಗಲಿ ಹಾಗೂ ದಿ.ಎನ್.ಎಚ್.ಶಾಲಗಾರ ಹೆಸರಿನಲ್ಲಿ ಕೊಡುವ ಸಮಾಜವೀರ ಪ್ರಶಸ್ತಿಗೆ ಎಂ.ಎಚ್.ನದಾಫ ಅವರನ್ನು ಆಯ್ಕೆ ಮಾಡಲಾಗಿದೆ.

ಅಂದು ಬೆಳಗ್ಗೆ 10.30ಕ್ಕೆ ಜಿಪಂ ನೂತನ ಸಭಾಭವನದಲ್ಲಿ ನಡೆಯುವ ಸಮಾರಂಭದಲ್ಲಿ ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರ ಕೆ.ವ್ಹಿ.ಪ್ರಭಾಕರ ಪ್ರಶಸ್ತಿ ಪ್ರದಾನ ಮಾಡುವರು. ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ.ತಿಮ್ಮಾಪೂರ ಕಾರ್ಯಕ್ರಮ ಉದ್ಘಾಟಿಸಲಿದ್ದು, ಶಾಸಕರಾದ ಎಚ್.ವೈ.ಮೇಟಿ, ಪಿ.ಎಚ್.ಪೂಜಾರ, ಸುನೀಲಗೌಡ ಪಾಟೀಲ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ.

ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಆನಂದ ದಲಭಂಜನ ಅಧ್ಯಕ್ಷತೆ ವಹಿಸಲಿದ್ದು, ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರ ಆಶಯ ನುಡಿ ಹೇಳುವರು. ಪ್ರಧಾನ ಕಾರ್ಯದರ್ಶಿ ಜಿ.ಸಿ.ಲೋಕೇಶ, ಉಪಾಧ್ಯಕ್ಷ ಪುಂಡ ಲೀಕ ಬಾಳೋಜಿ, ಜಿಲ್ಲಾಧಿಕಾರಿ ಸಂಗಪ್ಪ, ಜಿಲ್ಲಾಪೋಲಿಸ್ ವರಿಷ್ಠಾಧಿ ಕಾರಿ ಸಿದ್ದಾರ್ಥ ಗೋಯೆ ಲ್, ಜಿಪಂ ಸಿಇಓ ಶಶಿಧರ ಕುರೇರ, ಕಾನಿಪ ರಾಜ್ಯ ಕಾರ್ಯಕಾರಣಿ ಸದಸ್ಯ ಮಹೇಶ ಅಂಗಡಿ, ವಾರ್ತಾ ಇಲಾಖೆಯ ಸಹಾಯಕ ನಿರ್ದೇಶಕಿ ಕಸ್ತೂರಿ ಪಾಟೀಲ, ಕಾನಿಪ ಪ್ರಧಾನ ಕಾರ್ಯದಶರ್ಶಿ ಶಂಕರ ಕಲ್ಯಾಣಿ ಉಪಸ್ಥಿತರಿರುವರು.