ಸಾರಾಂಶ
ಹುಲಿಗೂಡಿನ ಸಂತೋಷ್ ಎಂಬುವವರ ಮನೆಯಲ್ಲಿ ಯಾರೂ ಇಲ್ಲದ ಸಮಯದಲ್ಲಿ ₹2.50 ಲಕ್ಷ ಹಣ ಕಳುವಾದ ಘಟನೆ ಕಳೆದ ತಿಂಗಳು ನಡೆದಿತ್ತು.
ಕನ್ನಡಪ್ರಭ ವಾರ್ತೆ ಹನೂರು
ಪೇದೆ ಮನೆಯಲ್ಲಿ ಹಣ ಕಳವು ಮಾಡಿ ಪರಾರಿಯಾಗಿದ್ದ ನಾಲ್ವರು ಬಾಲ ಅಪರಾಧಿಗಳನ್ನು ಪತ್ತೆಹಚ್ಚಿ ವಶಕ್ಕೆ ಪಡೆಯುವಲ್ಲಿ ಮಲೆ ಮಹದೇಶ್ವರ ಬೆಟ್ಟ ಪೊಲೀಸರು ಯಶಸ್ವಿಯಾಗಿದ್ದಾರೆ.ಮಲೆ ಮಹದೇಶ್ವರ ಬೆಟ್ಟ ಪೊಲೀಸ್ ಠಾಣೆ ವ್ಯಾಪ್ತಿಯ ಹುಲಿಗೂಡಿನ ಸಂತೋಷ್ ಎಂಬುವವರ ಮನೆಯಲ್ಲಿ ಯಾರೂ ಇಲ್ಲದ ಸಮಯದಲ್ಲಿ ₹2.50 ಲಕ್ಷ ಹಣ ಕಳುವಾದ ಘಟನೆ ಕಳೆದ ತಿಂಗಳು ನಡೆದಿತ್ತು. ಈ ಕುರಿತು ಸಂತೋಷ್ ಅವರು ಠಾಣೆಗೆ ದೂರು ನೀಡಿದ್ದರು.
ತನಿಖೆ ಕೈಗೊಂಡ ಪೊಲೀಸರು ಹಲವು ಕಡೆ ಬಲೆ ಬೀಸಿದ ಪರಿಣಾಮ, ಕಳ್ಳತನದಲ್ಲಿ ಬೆಂಗಳೂರು ಮೂಲದ ಬಾಲ ಅಪರಾಧಿಗಳು ಭಾಗಿಯಾಗಿರುವುದು ಪತ್ತೆಯಾಯಿತು. ಇದನ್ನು ಗಮನಿಸಿದ ಮಲೆ ಮಹದೇಶ್ವರ ಬೆಟ್ಟ ಪೊಲೀಸರು ಬೆಂಗಳೂರಿಗೆ ತೆರಳಿ ತನಿಖೆ ಮುಂದುವರೆಸಿದ ವೇಳೆ, ಬೆಂಗಳೂರಿನ ಪೊಲೀಸರು ಈಗಾಗಲೇ ನಾಲ್ವರು ಬಾಲ ಅಪರಾಧಿಗಳನ್ನು ಬಂಧಿಸಿ ಬೆಂಗಳೂರು ಬಾಲ ಮಂದಿರಕ್ಕೆ ಒಪ್ಪಿಸಿದ್ದರು.ನಂತರ ಮಲೆ ಮಹದೇಶ್ವರ ಬೆಟ್ಟ ಪೊಲೀಸರು ಬಾಲಮಂದಿರದಲ್ಲಿದ್ದ ನಾಲ್ವರಲ್ಲಿ ಇಬ್ಬರನ್ನು ಕಸ್ಟಡಿಗೆ ಪಡೆದು ವಿಚಾರಣೆ ನಡೆಸಿದರು. ವಿಚಾರಣೆ ವೇಳೆ ಇಬ್ಬರೂ ಸಂತೋಷ್ ಅವರ ಮನೆಯಲ್ಲಿ ಕಳ್ಳತನ ನಡೆಸಿದ ವಿಷಯವನ್ನು ಒಪ್ಪಿಕೊಂಡರು.
ಪೊಲೀಸರು ಇವರ ವಿರುದ್ಧ ಪ್ರಕರಣ ದಾಖಲಿಸಿಕೊಂಡು, ಕ್ರಮಾನುಸಾರವಾಗಿ ಅವರನ್ನು ಪುನಃ ಬೆಂಗಳೂರು ಬಾಲ ಮಂದಿರಕ್ಕೆ ಹಸ್ತಾಂತರಿಸಿದರು. ಈ ಕಾರ್ಯಾಚರಣೆಯಲ್ಲಿ ಇನ್ಸ್‌ಪೆಕ್ಟರ್ ಜಗದೀಶ್, ಎಸ್ಐ ಜಯರಾಮು, ಎಎಸ್ಐ ರವೀಂದ್ರ, ಹಾಗೂ ಕಾನ್ಸ್‌ಟೇಬಲ್‌ಗಳು ಸಿದ್ದರಾಮಯ್ಯ ಮತ್ತು ಶಿವಮೂರ್ತಿನಾಯಕ ಉಪಸ್ಥಿತರಿದ್ದರು.-------------------;Resize=(128,128))
;Resize=(128,128))
;Resize=(128,128))
;Resize=(128,128))