ಸೈಬರ್‌ ಕ್ರೈಂ ಬ್ರಾಂಚ್‌ ಪೊಲೀಸರೆಂದು ನಂಬಿಸಿ ಲಕ್ಷಾಂತರ ರು. ವಂಚನೆ

| Published : Sep 29 2024, 01:46 AM IST

ಸೈಬರ್‌ ಕ್ರೈಂ ಬ್ರಾಂಚ್‌ ಪೊಲೀಸರೆಂದು ನಂಬಿಸಿ ಲಕ್ಷಾಂತರ ರು. ವಂಚನೆ
Share this Article
  • FB
  • TW
  • Linkdin
  • Email

ಸಾರಾಂಶ

ಅಂತಾರಾಷ್ಟ್ರೀಯ ಡ್ರಗ್ಸ್‌ ಪ್ರಕರಣದಲ್ಲಿ ನಿಮ್ಮ ಹೆಸರು ನಮೂದಿಸಿದ್ದು ನಿಮ್ಮನ್ನು ಬಂಧಿಸಲಾಗುವುದು. ಪ್ರಕರಣದಿಂದ ಮುಕ್ತಗೊಳಿಸಲು ಆರೋಪಿಗಳು ಹಣದ ಬೇಡಿಕೆಯಿಟ್ಟರು. ಇದರಿಂದ ಆತಂಕಿತರಾದ ಪಿರ್ಯಾದಿದಾರರು ಹಂತಹಂತವಾಗಿ ಬ್ಯಾಂಕ್‌ ಖಾತೆಯಿಂದ 35 ಲಕ್ಷ ರು. ವರ್ಗಾಯಿಸಿದ್ದಾರೆ. ಬಳಿಕ ವಂಚನೆ ಒಳಗಾಗಿರುವುದು ಗೊತ್ತಾಗಿ ಸೈಬರ್‌ ಠಾಣೆಗೆ ದೂರು ನೀಡಿದ್ದಾರೆ.

ಮಂಗಳೂರು: ಮಾದಕ ಜಾಲ ನೆಪದಲ್ಲಿ ನಗರದ ವ್ಯಕ್ತಿಯೊಬ್ಬರಿಗೆ ಕರೆ ಮಾಡಿದ ಅಪರಿಚಿತರು ಸೈಬರ್‌ ಕ್ರೈಂ ಬ್ರಾಂಚ್‌ ಪೊಲೀಸರು ಎಂದು ನಂಬಿಸಿ 35 ಲಕ್ಷ ರು. ವಂಚಿಸಿದ ಬಗ್ಗೆ ಸೈಬರ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸೆ.24ರಂದು ಪಿರ್ಯಾದಿದಾರರಿಗೆ ಮುಂಬಯಿ ಕೊರಿಯರ್‌ ಸರ್ವಿಸ್‌ ಸೆಂಟರ್‌ನಿಂದ ಕಾರ್ತಿಕ್‌ ಶರ್ಮಾ ಎಂದು ಪರಿಚಯಿಸಿಕೊಂಡಾತ ಕರೆ ಮಾಡಿದ್ದನು. ನಿಮ್ಮ ಹೆಸರಿನಲ್ಲಿ ಮುಂಬಯಿಯಿಂದ ತೈವಾನ್‌ಗೆ ಕಾನೂನು ಬಾಹಿರ ಹಾಗೂ ಮಾದಕ ವಸ್ತುಗಳಿರುವ ಕೊರಿಯರ್‌ ಸಾಗಾಟವಾಗುತ್ತಿದ್ದು, ಇದನ್ನು ಮುಂಬಯಿ ಸೈಬರ್‌ ಕ್ರೈಂ ಬ್ರಾಂಚ್‌ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಈ ಬಗ್ಗೆ ನೀವು ಸೈಬರ್‌ ಕ್ರೈಂ ಅಧಿಕಾರಿಗಳೊಂದಿಗೆ ಮಾತನಾಡಬೇಕೆಂದು ತಿಳಿಸಿ ನಂಬರ್‌ ನೀಡಿದ್ದನು. ಪಿರ್ಯಾದಿದಾರರು ಆ ನಂಬರ್‌ಗೆ ಕರೆ ಮಾಡಿದಾಗ ಸೈಬರ್‌ ಅಧಿಕಾರಿ ಪ್ರಾಣೆಶ್‌ ಗುಪ್ತಾ ಎಂದು ಪರಿಚಯಿಸಿಕೊಂಡು ವಿಡಿಯೋ ಕಾಲ್‌ ಮೂಲಕ ಪಿರ್ಯಾದಿದಾರರಲ್ಲಿ ಮಾತನಾಡಿದ್ದಾನೆ. ಅಂತಾರಾಷ್ಟ್ರೀಯ ಡ್ರಗ್ಸ್‌ ಪ್ರಕರಣದಲ್ಲಿ ನಿಮ್ಮ ಹೆಸರು ನಮೂದಿಸಿದ್ದು ನಿಮ್ಮನ್ನು ಬಂಧಿಸಲಾಗುವುದು. ಪ್ರಕರಣದಿಂದ ಮುಕ್ತಗೊಳಿಸಲು ಆರೋಪಿಗಳು ಹಣದ ಬೇಡಿಕೆಯಿಟ್ಟರು. ಇದರಿಂದ ಆತಂಕಿತರಾದ ಪಿರ್ಯಾದಿದಾರರು ಹಂತಹಂತವಾಗಿ ಬ್ಯಾಂಕ್‌ ಖಾತೆಯಿಂದ 35 ಲಕ್ಷ ರು. ವರ್ಗಾಯಿಸಿದ್ದಾರೆ. ಬಳಿಕ ವಂಚನೆ ಒಳಗಾಗಿರುವುದು ಗೊತ್ತಾಗಿ ಸೈಬರ್‌ ಠಾಣೆಗೆ ದೂರು ನೀಡಿದ್ದಾರೆ.

--------

ಮಾದಕ ದ್ರವ್ಯ ಸೇವನೆ: ಯುವಕ ಪೊಲೀಸ್‌ ವಶಮಂಗಳೂರು: ನಗರದ ಅತ್ತಾವರ ಕಟ್ಟೆಬಳಿ ಮಾದಕ ದ್ರವ್ಯ ಸೇವನೆ ಮಾಡಿದ ಆರೋಪದ ಮೇಲೆ ಯುವಕನೊಬ್ಬನನ್ನು ನಗರ ದಕ್ಷಿಣ ಠಾಣಾ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

ಅತ್ತಾವರ ವೈದ್ಯನಾಥ ನಗರ ನಿವಾಸಿ ಗೋಪಿನಾಥ್‌ ಭಂಡಾರ್ಕರ್‌ (29) ಬಂಧಿತ ಆರೋಪಿ.

ಸೆ. 27ರಂದು ಸಂಜೆ ಮಂಗಳೂರು ದಕ್ಷಿಣ ಪೊಲೀಸ್‌ ಠಾಣಾ ವ್ಯಾಪ್ತಿಯ ಅತ್ತಾವರ ಕಟ್ಟೆಬಳಿ ಯುವಕನೊಬ್ಬ ಅಮಲು ಪದಾರ್ಥ ಸೇವಿಸಿ ತೂರಾಡುತ್ತಿದ್ದು, ಆತನನ್ನು ದಕ್ಷಿಣ ಠಾಣಾ ಪೊಲೀಸರು ವಶಕ್ಕೆ ಪಡೆದು ವಿಚಾರಿಸಿದಾಗ ತೊದಲು ಮಾತನಾಡುತ್ತಿದ್ದ. ಬಳಿಕ ಈತನನ್ನು ವೈದ್ಯಕೀಯ ಪರೀಕ್ಷೆಗೊಳಪಡಿಸಿದಾಗ ಮಾದಕ ಸೇವನೆ ಮಾಡಿರುವುದು ದೃಢಪಟ್ಟಿದೆ. ನಗರದ ದಕ್ಷಿಣ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.