ಲಯನ್ಸ್ ಕ್ಲಬ್ ಆಫ್ ಫ್ರೆಂಚ್‌ರಾಕ್ಸ್ ಸಂಸ್ಥೆ ಉಚಿತ ಕಣ್ಣಿನ ತಪಾಸಣೆ ನಡೆಸಿ ಕನ್ನಡಕ ವಿತರಣೆ ಮಾಡುವ ಮೂಲಕ ಪುಣ್ಯದ ಕೆಲಸ ಮಾಡುತ್ತಿದೆ. ತೊಂದರೆ ಇರುವವವರಿಗೆ ಉಚಿತ ಶಿಬಿರಗಳು ಅನುಕೂಲವಾಗುತ್ತವೆ.
ಕನ್ನಡಪ್ರಭ ವಾರ್ತೆ ಪಾಂಡವಪುರ
ತಾಲೂಕಿನ ಚಿನಕುರಳಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ಲಯನ್ಸ್ ಕ್ಲಬ್ ಆಫ್ ಫ್ರೆಂಚ್‌ರಾಕ್ಸ್ ವತಿಯಿಂದ ಕಣ್ಣಿನ ಉಚಿತ ತಪಾಸಣೆ ನಡೆಸಿ ಕನ್ನಡಕ ವಿತರಿಸಲಾಯಿತು.ದಿ.ಮಾಜಿ ಶಾಸಕ ಕೆ.ಎಸ್.ಪುಟ್ಟಣ್ಣಯ್ಯ, ಗ್ರಾಪಂ ಮಾಜಿ ಅಧ್ಯಕ್ಷ ಚಿನಕುರಳಿ ಸಿ.ಎಸ್.ಚಿಕ್ಕರಾಮೇಗೌಡ ಹಾಗೂ ಡಿಸಿಸಿ ಬ್ಯಾಂಕ್ ಮಾಜಿ ಅಧ್ಯಕ್ಷ ಸಿ.ಅಣ್ಣೇಗೌಡರ ಸ್ಮರಣಾರ್ಥ ಲಯನ್ಸ್ ಕ್ಲಬ್ ಆಫ್ ಫ್ರೆಂಚ್ ರಾಕ್ಸ್, ಭಗವಾನ್ ಮಹಾವೀರ ದರ್ಶನ ನೇತ್ರ ಆಸ್ಪತ್ರೆ, ಬಾಲ ಭೈರವೇಶ್ವರ ಚಾರಿಟೇಬಲ್ ಟ್ರಸ್ಟ್ ಬೆಂಗಳೂರು ಹಾಗೂ ಸಾರ್ವಜನಿಕ ಆಸ್ಪತ್ರೆ ಸಹಯೋಗದಲ್ಲಿ ನಡೆದ ಶಿಬಿರಕ್ಕೆ ಮನ್ಮುಲ್ ನಿರ್ದೇಶಕ ಸಿ.ಶಿವಕುಮಾರ್ ಚಾಲನೆ ನೀಡಿದರು.
ನಂತರ ಮಾತನಾಡಿದ ಅವರು ಮಾತನಾಡಿ, ಸಂಸ್ಥೆ ಉಚಿತ ಕಣ್ಣಿನ ತಪಾಸಣೆ ನಡೆಸಿ ಕನ್ನಡಕ ವಿತರಣೆ ಮಾಡುವ ಮೂಲಕ ಪುಣ್ಯದ ಕೆಲಸ ಮಾಡುತ್ತಿದೆ. ತೊಂದರೆ ಇರುವವವರಿಗೆ ಉಚಿತ ಶಿಬಿರಗಳು ಅನುಕೂಲವಾಗುತ್ತವೆ ಎಂದರು.ಅಧ್ಯಕ್ಷ ಲ.ಕೆ.ಆರ್.ಸ್ವಾಮೀಗೌಡ ಮಾತನಾಡಿ, ನಮ್ಮ ಲಯನ್ಸ್ ಕ್ಲಬ್ ವತಿಯಿಂದ ತಾಲೂಕಿನ ಹಲವಾರು ಗ್ರಾಮದಲ್ಲಿ ಉಚಿತ ಕಣ್ಣಿನ ತಪಾಸಣೆ ಶಿಬಿರ ನಡೆಸಿ ತೊಂದರೆ ಇರುವವರಿಗೆ ಉಚಿತ ಕನ್ನಡಕ ವಿತರಣೆ ಮಾಡಲಾಗಿದೆ ಎಂದರು.
ಈ ವೇಳೆ ಲಯನ್ಸ್ ಕ್ಲಬ್ ಕಾರ್ಯದರ್ಶಿ ಪುಟ್ಟಬಸವೇಗೌಡ, ಗ್ರಾಪಂ ಸದಸ್ಯರಾದ ಸಿ.ಎ.ಲೋಕೆಶ್, ಪರಮೇಶ್, ಮಾಜಿ ಸದಸ್ಯ ಮಹದೇವು, ವಿಎಸ್‌ಎಸ್‌ಎನ್‌ಬಿ ಮಾಜಿ ಅಧ್ಯಕ್ಷ ಮಂಜುನಾಥ್, ಡೈರಿ ಆನಂದ್ ಮತ್ತು ಅಂಗನವಾಡಿ ಕಾರ್ಯಕರ್ತೆಯರು ಸೇರಿದಂತೆ ಭಾಗವಹಿಸಿದ್ದರು.ವಕೀಲರ ಸಂಘದಲ್ಲಿ ಎಸ್.ಎಂ.ಕೃಷ್ಣ ಪುಣ್ಯಸ್ಮರಣೆ
ಕನ್ನಡಪ್ರಭ ವಾರ್ತೆ ಮಂಡ್ಯಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಅವರು ನಾಡು ಕಂಡ ಅದ್ವಿತೀಯ ನಾಯಕ ಎಂದು ಮಂಡ್ಯ ವಕೀಲರ ಸಂಘದ ಅಧ್ಯಕ್ಷ ಟಿ.ಎಸ್.ಸತ್ಯಾನಂದ ಹೇಳಿದರು.
ನಗರದ ವಕೀಲರ ಸಂಘದಿಂದ ಆಯೋಜಿಸಿದ್ದ ಮಾಜಿ ಮುಖ್ಯಮಂತ್ರಿ ದಿ.ಎಸ್.ಎಂ.ಕೃಷ್ಣ ಅವರ ಒಂದನೇ ವರ್ಷದ ಪುಣ್ಯ ಸ್ಮರಣೆ ಅಂಗವಾಗಿ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ಮಾತನಾಡಿ, ಎಸ್.ಎಂ.ಕೃಷ್ಣ ಅವರು ಹಾಕಿಕೊಟ್ಟ ಮಾರ್ಗದರ್ಶನ ಆದರ್ಶನೀಯ. ಅವರು ಒಬ್ಬ ಸಜ್ಜನ, ಸಂಯಮ ನಾಯಕರಾಗಿದ್ದರು ಎಂದರು.ಸರಳತೆ, ಶಾಂತಿ ಮತ್ತು ಶಿಸ್ತಿನ ಪ್ರತೀಕವಾಗಿದ್ದ ಎಸ್.ಎಂ.ಕೃಷ್ಣ ಅವರು ಕರ್ನಾಟಕದ ಅಭಿವೃದ್ಧಿಗೆ ಹೊಸ ಮಾನದಂಡ ಸ್ಥಾಪಿಸಿದರು. ಅವರ ಪುಣ್ಯಸ್ಮರಣೆಯಂದು ಅವರ ಅದ್ಭುತ ಸೇವೆಯನ್ನು ಕೃತಜ್ಞತೆಯಿಂದ ನೆನೆದು ಅವರ ದೂರದೃಷ್ಟಿ, ಆಧುನಿಕ ಆಡಳಿತದ ಮಾದರಿ ಮತ್ತು ಜನಪ್ರಿಯ ನಾಯಕತ್ವ ಯುವ ಪೀಳಿಗೆಗೆ ಸೂರ್ತಿ ನೀಡುತ್ತದೆ ಎಂದರು.
ಈ ಸಂದರ್ಭದಲ್ಲಿ ವಕೀಲರ ಸಂಘದ ಪ್ರಧಾನ ಕಾರ್ಯದರ್ಶಿ ಸತೀಶ್ ಸೇರಿದಂತೆ ವಕೀಲರ ಸಂಘದ ನಿರ್ದೇಶಕರು ಹಾಗೂ ಹಿರಿಯ ವಕೀಲರು ಹಾಜರಿದ್ದರು.