ಸರ್ಕಾರಿ ಶಾಲಾ ವಿದ್ಯಾರ್ಥಿಗಳಿಗೆ ಉಚಿತ ಕಣ್ಣಿನ ತಪಾಸಣೆ

| Published : Mar 26 2025, 01:35 AM IST

ಸರ್ಕಾರಿ ಶಾಲಾ ವಿದ್ಯಾರ್ಥಿಗಳಿಗೆ ಉಚಿತ ಕಣ್ಣಿನ ತಪಾಸಣೆ
Share this Article
  • FB
  • TW
  • Linkdin
  • Email

ಸಾರಾಂಶ

ದೇಹದ ಬಹು ಮುಖ್ಯವಾದ ಒಂದು ಭಾಗ ಕಣ್ಣು. ವಿದ್ಯಾರ್ಥಿಗಳಿಗೆ ದೂರ ದೃಷ್ಟಿ ಹಾಗೂ ಸಮೀಪ ದೃಷ್ಟಿ ದೋಷ ಇದ್ದರೆ ನಿಮ್ಮ ಪೋಷಕರಿಗಾಗಲಿ ಅಥವಾ ನಿಮ್ಮ ಶಿಕ್ಷಕರಿಗಾಗಲಿ ವಿಷಯ ತಿಳಿಸಬೇಕು. ಪ್ರಾಥಮಿಕ ಹಂತದಲ್ಲೇ ತಪಾಸಣೆ ನಡೆಸಿಕೊಂಡು ಚಿಕಿತ್ಸೆ ಪಡೆದುಕೊಂಡರೆ ಮುಂದಿನ ದಿನಗಳಲ್ಲಿ ಯಾವುದೇ ತೊಂದರೆ ಆಗುವುದಿಲ್ಲ.

ಕನ್ನಡಪ್ರಭ ವಾರ್ತೆ ಹಲಗೂರು

ಚನ್ನಪಟ್ಟಣ ರಸ್ತೆಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿರುವ ಸುಮಾರು 150 ವಿದ್ಯಾರ್ಥಿಗಳಿಗೆ ಲಯನ್ಸ್ ಕ್ಲಬ್ ವತಿಯಿಂದ ಉಚಿತ ಕಣ್ಣಿನ ತಪಾಸಣೆ ನಡೆಸಲಾಯಿತು.

ನಿವೃತ್ತ ನೇತ್ರ ತಜ್ಞ ಉಮೇಶ್ ವಿದ್ಯಾರ್ಥಿಗಳ ಕಣ್ಣಿನ ತಪಾಸಣೆ ನಡೆಸಿದರು. ಬಳಿಕ ಮಾತನಾಡಿ, ದೇಹದ ಬಹು ಮುಖ್ಯವಾದ ಒಂದು ಭಾಗ ಕಣ್ಣು. ವಿದ್ಯಾರ್ಥಿಗಳಿಗೆ ದೂರ ದೃಷ್ಟಿ ಹಾಗೂ ಸಮೀಪ ದೃಷ್ಟಿ ದೋಷ ಇದ್ದರೆ ನಿಮ್ಮ ಪೋಷಕರಿಗಾಗಲಿ ಅಥವಾ ನಿಮ್ಮ ಶಿಕ್ಷಕರಿಗಾಗಲಿ ವಿಷಯ ತಿಳಿಸಬೇಕು. ಪ್ರಾಥಮಿಕ ಹಂತದಲ್ಲೇ ತಪಾಸಣೆ ನಡೆಸಿಕೊಂಡು ಚಿಕಿತ್ಸೆ ಪಡೆದುಕೊಂಡರೆ ಮುಂದಿನ ದಿನಗಳಲ್ಲಿ ಯಾವುದೇ ತೊಂದರೆ ಆಗುವುದಿಲ್ಲ ಎಂದರು.ಪ್ರತಿಯೊಬ್ಬರ ದೃಷ್ಟಿ ಉತ್ತಮವಾಗಿರಲು ಹೆಚ್ಚು ಸೊಪ್ಪು, ತರಕಾರಿ, ಮೊಟ್ಟೆ, ಮೀನು ಸೇವಿಸಬೇಕು. ಕೈಯಲ್ಲಿ ಯಾವುದೇ ಪೆನ್ನು ಪೆನ್ಸಿಲ್ ಹಿಡಿದಾಗ ಕಣ್ಣಿನ ಹತ್ತಿರ ತೆಗೆದುಕೊಂಡು ಹೋಗಬಾರದು. ಕಣ್ಣಿಗೆ ಯಾವುದೇ ಚಿಟ್ಟೆ ಅಥವಾ ಏನೇ ಬಿದ್ದರು ಕಣ್ಣನ್ನು ಹೊಸಗಬಾರದು. ಹತ್ತಿರದಲ್ಲಿ ಇರುವ ವೈದ್ಯರನ್ನು ಭೇಟಿ ಮಾಡಬೇಕು ಎಂದು ಮಕ್ಕಳಿಗೆ ತಿಳಿಸಿದರು.

ಲಯನ್ಸ್ ಕ್ಲಬ್ಬಿನ ಅಧ್ಯಕ್ಷ ಎನ್.ಕೆ.ಕುಮಾರ್ ಮಾತನಾಡಿ, ಸಂಸ್ಥೆಯಿಂದ ಅನೇಕ ಆರೋಗ್ಯ ತಪಾಸಣೆ ಶಿಬಿರ ಮತ್ತು ಮೂಲ ರೋಗ ತಪಾಸಣೆ ಆಯೋಜಿಸಿದ್ದು, ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಕಾರ್ಯಕ್ರಮ ಆಯೋಜಿಸಲಾಗುತ್ತಿದೆ ಎಂದರು.

ಈ ವೇಳೆ ಲಯನ್ಸ್ ಕ್ಲಬ್ ಅಧ್ಯಕ್ಷ ಎನ್.ಕೆ.ಕುಮಾರ್, ಡಿ.ಎಲ್.ಮಾದೇಗೌಡ, ಕೆ.ಶಿವರಾಜು, ಡಾ.ಶಂಷಿದ್ದೀನ್. ಪ್ರವೀಣ್, ಮುಖ್ಯ ಶಿಕ್ಷಕರಾದ ಕುಳ್ಳಯ್ಯ ಹಾಜರಿದ್ದರು.