ಸಾರಾಂಶ
ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣ
ಪಟ್ಟಣದ ಅಂಬೇಡ್ಕರ್ ಭವನದಲ್ಲಿ ಮೇ 26ರಿಂದ ಜೂ.6 ರವರೆಗೆ 12 ದಿನಗಳ ಕಾಲ 19 ವರ್ಷದೊಳಗಿನ ಬಾಲಕ ಮತ್ತು ಬಾಲಕಿಯರಿಗೆ ಉಚಿತ ಮ್ಯಾಟ್ ಕುಸ್ತಿ ತರಬೇತಿ ಶಿಬಿರ ಆಯೋಜಿಸಲಾಗಿದೆ ಎಂದು ಜಿಲ್ಲಾ ಅಮೇಚೂರು ಕುಸ್ತಿ ಸಂಘದ ಸದಸ್ಯರು ತಿಳಿಸಿದರು.ಪಟ್ಟಣದ ಪತ್ರಿಕಾ ಭವನದಲ್ಲಿ ಅಮೇಚೂರು ಕುಸ್ತಿ ಸಂಘದ ಪ್ರಧಾನ ಕಾರ್ಯದರ್ಶಿ ಎನ್.ಮಲ್ಲುಸ್ವಾಮಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿ, ಜಿಲ್ಲಾ ಅಮೇಚೂರು ಕುಸ್ತಿ ಸಂಘ, ಜಿಲ್ಲಾ ಯುವಜನ ಸೇವಾ ಕ್ರೀಡಾ ಇಲಾಖೆ ಮತ್ತು ನೆಹರು ಯುವ ಕೇಂದ್ರದಿಂದ ಇದೇ ಪ್ರಥಮ ಬಾರಿಗೆ ಪಟ್ಟಣದಲ್ಲಿ 12 ದಿನಗಳ ಕಾಲ ಬಾಲಕರು ಮತ್ತು ಬಾಲಕಿಯರಿಗೆ ಉಚಿತ ಮ್ಯಾಟ್ ಕುಸ್ತಿ ತರಬೇತಿ ಶಿಬಿರ ನಡೆಯುತ್ತಿದೆ ಎಂದರು.
ಭಾಗವಹಿಸಿದ ಎಲ್ಲಾ ಕುಸ್ತಿಪಟುಗಳಿಗೆ ಸಮಾರೋಪ ಸಮಾರಂಭದಲ್ಲಿ ನೆನಪಿನ ಕಾಣಿಕೆ, ಪ್ರಶಸ್ತಿ ಪತ್ರ ನೀಡಲಾಗುತ್ತದೆ. ಪ್ರತಿ ದಿನ ಶಿಬಿರಾರ್ಥಿಗಳಿಗೆ ಹಾಲು, ಮೊಟ್ಟೆ ಮತ್ತು ಹಣ್ಣುಗಳನ್ನು ನೀಡಲಾಗುವುದು. ಸ್ಪೋರ್ಟ್ ಆರ್ಥಾಟಿ ಆಫ್ ಇಂಡಿಯಾದ ನಿವೃತ್ತ ತರಬೇತಿದಾರ ಶ್ರೀನಿವಾಸ್‌ಗೌಡ ತರಬೇತಿ ನೀಡುವರು. ಡಾ.ಶ್ರೀನಿವಾಸ್ ಕ್ಯಾತನಹಳ್ಳಿ ಇವರು ಕ್ರೀಡಾ ಪೋಷಕರು, ಕುಸ್ತಿ ಅಭಿಮಾನಿಗಳು ಇವರ ಮಾರ್ಗದರ್ಶನದಲ್ಲಿ ತರಬೇತಿ ಶಿಬಿರ ನಡೆಯಲಿದೆ ಎಂದರು.ನಿವೃತ್ತ ತರಬೇತಿದಾರ ಶ್ರೀನಿವಾಸ್‌ಗೌಡ ಮಾತನಾಡಿ, ಮೇ 26 ರಂದು ಬೆಳಗ್ಗೆ 10 ಗಂಟೆಗೆ ಉಚಿತ ಮ್ಯಾಟ್ ಕುಸ್ತಿ ಶಿಬಿರವನ್ನು ಪುರಸಭಾ ಪ್ರಭಾರ ಅಧ್ಯಕ್ಷ ಎಂ.ಎಲ್. ದಿನೇಶ್ ಉದ್ಘಾಟಿಸುವರು. ಸದಸ್ಯ ಹಾಗೂ ಶ್ರೀನಿಮಿಷಾಂಬ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ದಯಾನಂದ್, ಪುರಸಭೆ ಮುಖ್ಯಾಧಿಕಾರಿ ರಾಜಣ್ಣ, ಟಿಎಪಿಸಿಎಂಎಸ್ ಅಧ್ಯಕ್ಷ ಹಾಗೂ ಪುರಸಭಾ ಸದಸ್ಯ ಎಂ. ನಂದೀಶ್, ಹಿರಿಯ ಪೈಲ್ವಾನ್ ಪಾಲಹಳ್ಳಿ ವಿಜೇಂದ್ರ ಸೇರಿದಂತೆ ಪೈಲ್ವಾನ್‌ರುಗಳು ಭಾಗವಹಿಸಲಿದ್ದಾರೆ ಎಂದರು.
ಜೂ.6 ರಂದು ಸಮಾರೋಪ ಸಮಾರಂಭ ಬೆಳಗ್ಗೆ 11 ಗಂಟೆಗೆ ನಡೆಯಲಿದೆ. ಶಿಬಿರಾರ್ಥಿಗಳಿಗೆ ನೆನಪಿನ ಕಾಣಿಕೆ, ಪ್ರಶಸ್ತಿ ಪತ್ರವನ್ನು ಶಾಸಕರು ಹಾಗೂ ಸೆಸ್ಕ್ ಅಧ್ಯಕ್ಷರಾದ ಎ.ಬಿ ರಮೇಶಬಂಡಿಸಿದ್ದೇಗೌಡ ವಿತರಿಸಲಿದ್ದಾರೆ. ತಹಸೀಲ್ದಾರ್ ಪರಶುರಾಮ್ ಸತ್ತಿಗೇರಿ, ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ಶ್ರೀ ಓಂಪ್ರಕಾಶ್, ನೆಹರು ಯುವಕೇಂದ್ರ ಜಿಲ್ಲಾ ಸಮನ್ವಯಾಧಿಕಾರಿ ಶೃತಿ, ಜಿಲ್ಲಾ ಅಮೇಚೂರು ಕುಸ್ತಿ ಸಂಘದ ಅಧ್ಯಕ್ಷ ಶ್ರೀನಿವಾಸಗೌಡ ಸೇರಿದಂತೆ ಇತರರು ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.ಸುದ್ದಿಗೋಷ್ಠಿಯಲ್ಲಿ ಗೋಷ್ಠಿಯಲ್ಲಿ ಹೊಸಹಳ್ಳಿ ಶಿವು, ಬಾಲಸುಬ್ರಮಣ್ಯ, ಕಸಪಾ ನಗರಾಧ್ಯಕ್ಷೆ ಸರಸ್ಪತಿ, ಸುರೇಶ್, ರವಿ ಪ್ರಸಾದ್ ಸೇರಿದಂತೆ ಇತರರು ಇದ್ದರು.