ಪಟ್ಟಣದ ಮಹಾಜನ ಆಸ್ಪತ್ರೆಯಲ್ಲಿ ಟ್ರೀಟ್ಮೆಂಟ್ ರೇಂಜ್ ಹಾಸ್ಪಿಟಲ್ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಉಚಿತ ಶಸ್ತ್ರ ಚಿಕಿತ್ಸಾ ಶಿಬಿರ ಹಮ್ಮಿಕೊಳ್ಳಲಾಯಿತು.

ಕನ್ನಡಪ್ರಭ ವಾರ್ತೆ ಕಮಲನಗರ

ಪಟ್ಟಣದ ಮಹಾಜನ ಆಸ್ಪತ್ರೆಯಲ್ಲಿ ಟ್ರೀಟ್ಮೆಂಟ್ ರೇಂಜ್ ಹಾಸ್ಪಿಟಲ್ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಉಚಿತ ಶಸ್ತ್ರ ಚಿಕಿತ್ಸಾ ಶಿಬಿರ ಹಮ್ಮಿಕೊಳ್ಳಲಾಯಿತು.

ಕಮಲನಗರದ ಸಿಪಿಐ ಶ್ರಿಕಾಂತ ಅಲ್ಲಾಪುರೆ ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿ,

ಉಚಿತ ಆರೋಗ್ಯ ತಪಾಸಣಾ ಶಿಬಿರದಿಂದ ಬಡ ಜನರು ಆರೋಗ್ಯಕ್ಕೆ ಸಂಭಂಧಪಟ್ಟಂತೆ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಲು ಉತ್ತಮ ಅವಕಾಶವಾಗಿದೆ ಹಾಗೂ ಆರೋಗ್ಯವೇ ಭಾಗ್ಯ ಎನ್ನುವಂತೆ ಮನುಷ್ಯನಿಗೆ ಆರೋಗ್ಯ ಚೆನ್ನಾಗಿ ಇದ್ದರೆ ಜೀವನದಲ್ಲಿ ಏನು ಬೇಕಾದರೂ ಸಾಧನೆ ಮಾಡಬಹುದು ಎಂದರು.

ಡಾ.ಶ್ರೀಧರ ರೆಡ್ಡಿ ಕಾರೆಡ್ಡಿ ಮಾತನಾಡಿ, ಈ ಶಿಬಿರದಲ್ಲಿ ಎಲ್ಲಾ ರೀತಿಯ ರೋಗಗಳ ಚಿಕಿತ್ಸೆ ಹಾಗೂ ವಿಷೇಶವಾಗಿ ಪೈಲ್ಸ್, ಪಿಸ್ತುಲಾ, ಫಿಶರ್, ಹಾಗೂ ವೆರಿಕೊಸ್ ವೇಯ್ನಸ ಸಮಸ್ಯೆಗೆ ಪರಿಹಾರ ನೀಡಲಾಗುವುದು. ರೋಗಿಗಳಿಗೆ ಹೆಚ್ಚುವರಿ ಚಿಕಿತ್ಸೆಗಾಗಿ ಉಚಿತವಾಗಿ ಹೈದ್ರಾಬಾದ್‌ಗೆ ಬಸ್ ಸೌಲಭ್ಯ ಮತ್ತು ಉಚಿತ ಊಟದ ಸೌಲಭ್ಯ ಮಾಡಲಾಗಿದೆ ಎಂದು ತಿಳಿಸಿದರು.

ಶಿಬಿರದಲ್ಲಿ 100 ಕ್ಕೂ ಹೆಚ್ಚು ರೋಗಿಗಳು ತಪಾಸಣೆಯಲ್ಲಿ ಭಾಗವಹಿಸಿದ್ದರು. ಉಚಿತವಾಗಿ ಔಷಧಿ ವಿತರಿಸಲಾಯಿತು. ಈ ಸಂದರ್ಭದಲ್ಲಿ ರೇವಣಪ್ಪಾ ಮಹಾಜನ, ಪಿಎಸ್‌ಐ ಆಶಾ ರಾಠೊಡ, ಭಾಸ್ಕರ, ಲಿಂಗಾನಂದ ಮಹಾಜನ, ಅಮರ ಮಹಾಜನ ಹಾಗೂ ಅನೇಕರು ಹಾಜರಿದ್ದರು.