ಸಾರಾಂಶ
ನೂತನ ಐದು ಡಯಾಲಿಸಿಸ್ ಯಂತ್ರಗಳಿಗೆ ಚಾಲನೆ
ಕನ್ನಡಪ್ರಭ ವಾರ್ತೆ ಹೊಳೆನರಸೀಪುರಪಟ್ಟಣದ ಸಾರ್ವಜನಿಕ ಆಸ್ಪತ್ರೆಯ ಡಯಾಲಿಸಿಸ್ ಕೇಂದ್ರವು ಹತ್ತು ವರ್ಷಗಳ ಹಿಂದೆ ಪ್ರಾರಂಭ ಮಾಡಲಾಗಿದ್ದು, ರಾಜ್ಯದ ತಾಲೂಕು ಕೇಂದ್ರಗಳಲ್ಲಿ ಪಟ್ಟಣದ ಆಸ್ಪತ್ರೆಯಲ್ಲಿ ಪ್ರಥಮವಾಗಿ ಪ್ರಾರಂಭ ಮಾಡಲಾಯಿತು. ಉಚಿತವಾಗಿ ನೀಡುವ ಈ ಚಿಕಿತ್ಸೆಯ ಸೌಲಭ್ಯವನ್ನು ಒಟ್ಟು ೨೮೫೩೦ ಜನ ಡಯಾಲಿಸಿಸ್ ಸೇವೆ ಪಡೆದಿದ್ದಾರೆ ಎಂದು ಶಾಸಕ ಎಚ್.ಡಿ.ರೇವಣ್ಣ ತಿಳಿಸಿದರು.
ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ನೂತನ ಐದು ಡಯಾಲಿಸಿಸ್ ಯಂತ್ರಗಳಿಗೆ ಚಾಲನೆ ನೀಡಿ ಮಾತನಾಡಿದರು. ನೂತನ ಐದು ಯಂತ್ರಗಳ ಸೇವೆ ಜತೆಗೆ ಹಳೆಯ ಐದು ಯಂತ್ರಗಳು ಸೇರಿ ಒಟ್ಟು ಹತ್ತು ಡಯಾಲಿಸಿಸ್ ಯಂತ್ರಗಳ ಸೇವೆಯೂ ಉಚಿತವಾಗಿದ್ದು, ಅಗತ್ಯವಿರುವ ರೋಗಿಗಳು ಇದರ ಪ್ರಯೋಜನವನ್ನು ಪಡೆಯಬೇಕು ಎಂದರು.ಸಾರ್ವಜನಿಕ ಆಸ್ಪತ್ರೆಯಲ್ಲಿ ೧ ಕೋಟಿ ರು. ವೆಚ್ಚದಲ್ಲಿ ಸ್ವೆಷಲ್ ವಾರ್ಡ್‌ಗಳ ನಿರ್ಮಾಣಕ್ಕೆ ಹಣ ಒದಗಿಸಲಾಗಿದೆ. ರೋಗಿಗಳು ಮೇಲಿನ ಮಹಡಿಗಳಿಗೆ ತೆರಳಲು ಹಿಂಸೆಯಾಗದಂತೆ ಲಿಫ್ಟ್ ಜೋಡಣೆಗೂ ಹಣ ಒದಗಿಸಲಾಗಿದೆ. ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿಯವರ ಆಡಳಿತದಲ್ಲಿ ಅಧುನಿಕ ಸೌಲಭ್ಯಗಳಿಂದ ಕೂಡಿದ ಆಸ್ಪತ್ರೆ ನಿರ್ಮಾಣವಾಗಿದೆ. ಜತೆಗೆ ಈ ಆಸ್ಪತ್ರೆಯಲ್ಲಿ ಪ್ರತಿದಿನ ೮೦೦ರಿಂದ ಒಂದು ಸಾವಿರ ಹೊರ ರೋಗಿಗಳು ಚಿಕಿತ್ಸೆಗೆ ಬರುತ್ತಿದ್ದು, ೨೦೦ಕ್ಕೂ ಹೆಚ್ಚು ಶಸ್ತ್ರ ಚಿಕಿತ್ಸೆಗಳು ಹಾಗೂ ತಾಯಿ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ೨೦೦ ಹೆರಿಗೆಗಳು ಜರಗುತ್ತಿವೆ. ನಾಗರಿಕರ ಹಿತದೃಷ್ಟಿಯಿಂದ ಜಿಲ್ಲಾ ಕೇಂದ್ರಗಳಲ್ಲಿ ದೊರೆಯುವ ಸಕಲ ಸೌಲಭ್ಯಗಳು ಈ ಆಸ್ಪತ್ರೆಯಲ್ಲಿ ದೊರೆಯುತ್ತಿದೆ. ಮುಂದಿನ ದಿನಗಳಲ್ಲಿ ಎಂಆರ್‌ಐ ಸ್ಕ್ಯಾನಿಂಗ್ ಸೌಲಭ್ಯ ಒದಗಿಸಲಾಗುವುದು ಎಂದು ಹೇಳಿದರು.
ಆಡಳಿತ ವೈದ್ಯಾಧಿಕಾರಿಗಳಾದ ಡಾ. ಧನಶೇಖರ್, ಎಚ್.ಕೆ.ರಮೇಶ್, ಶಸ್ತ್ರಚಿಕಿತ್ಸಕರಾದ ಡಾ. ವಿನಯ್ ಕುಮಾರ್, ಡಾ. ಪ್ರತಿಭಾ ಹಾಗೂ ಡಾ. ದಿನೇಶ್, ಡಾ. ರೇಖಾ, ಡಾ.ಅಶ್ವತಿ ಕುಮಾರಿ, ಡಾ.ಕುಸುಮಾ, ಡಾ.ರವಿತೇಜ, ಡಾ.ನಾಗೇಂದ್ರ, ಡಾ.ಲೊಕೇಶ್, ಡಾ.ಸತ್ಯಪ್ರಕಾಶ್, ಡಾ.ಅಜಯ್, ಡಾ.ಸೆಲ್ವಕುಮಾರ್, ಶುಶ್ರೂಷಕ ಅದಿಕಾರಿಗಳಾದ ಸುಖನ್ಯ, ಮಹಾಲಕ್ಷ್ಮಿ, ಗೌರಮ್ಮ, ಕವಿತಾ, ಶಾಂತಿ, ಶಶಿಕಲಾ ಇದ್ದರು.ಹೊಳೆನರಸೀಪುರ ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ನೂತನ ಐದು ಡಯಾಲಿಸಿಸ್ ಯಂತ್ರಗಳಿಗೆ ಶಾಸಕ ಎಚ್.ಡಿ.ರೇವಣ್ಣ ಚಾಲನೆ ನೀಡಿದರು.