ಆರೋಗ್ಯಕರ ಹೃದಯಕ್ಕಾಗಿ ಉಚಿತ ಯೋಗ ಶಿಬಿರ

| Published : Jul 06 2025, 11:48 PM IST

ಸಾರಾಂಶ

ಶ್ರೀ ಅನ್ನಪೂರ್ಣೇಶ್ವರಿ ಕಲ್ಯಾಣ ಮಂಟಪದಲ್ಲಿ ಜುಲೈ ೮ರ ಮಂಗಳವಾರದಿಂದ ಜುಲೈ ೧೭ರ ಗುರುವಾರದವರೆಗೂ ಪ್ರತಿದಿನ ಬೆಳಿಗ್ಗೆ ೫.೩೦ರಿಂದ ೭.೩೦ರ ವರೆಗೂ ಆರೋಗ್ಯಕರ ಹೃದಯಕ್ಕಾಗಿ ಉಚಿತ ಯೋಗಾ ಶಿಬಿರವನ್ನು ಹಮ್ಮಿಕೊಳ್ಳಲಾಗಿದೆ. ಜನರನ್ನ ಜಾಗೃತಿಗೊಳಿಸಿ ರೋಗ ಮುಕ್ತರನ್ನಾಗಿ ಮಾಡುವುದಕ್ಕಾಗಿ ಒಂದಷ್ಟು ಯೋಗಾಸನಗಳು, ಪ್ರಾಣಾಯಾಮ, ಅಗ್ನಿಹೋತ್ರ ಇತ್ಯಾದಿಗಳನ್ನು ಹತ್ತು ದಿನಗಳ ಕಾಲ ಜುಲೈ ೮ರ ಮಂಗಳವಾರದಿಂದ ನಗರದ ಎಂ.ಜಿ. ರಸ್ತೆ ಬಳಿ ಇರುವ ಶ್ರಿ ಅನ್ನಪೂರ್ಣೇಶ್ವರಿ ಕಲ್ಯಾಣ ಮಂಟಪದಲ್ಲಿ ಪ್ರತಿದಿನ ಬೆಳಿಗ್ಗೆ ೫:೩೦ ರಿಂದ ೭:೩೦ರ ವರೆಗೂ ಉಚಿತವಾಗಿ ನೀಡಲಾಗುವುದು ಎಂದರು.

ಕನ್ನಡಪ್ರಭ ವಾರ್ತೆ ಹಾಸನ

ನಗರದ ಎಂ.ಜಿ. ರಸ್ತೆ ಬಳಿ ಇರುವ ಶ್ರೀ ಅನ್ನಪೂರ್ಣೇಶ್ವರಿ ಕಲ್ಯಾಣ ಮಂಟಪದಲ್ಲಿ ಜುಲೈ ೮ರ ಮಂಗಳವಾರದಿಂದ ಜುಲೈ ೧೭ರ ಗುರುವಾರದವರೆಗೂ ಪ್ರತಿದಿನ ಬೆಳಿಗ್ಗೆ ೫.೩೦ರಿಂದ ೭.೩೦ರ ವರೆಗೂ ಆರೋಗ್ಯಕರ ಹೃದಯಕ್ಕಾಗಿ ಉಚಿತ ಯೋಗಾ ಶಿಬಿರವನ್ನು ಹಮ್ಮಿಕೊಳ್ಳಲಾಗಿದೆ. ಪತಂಜಲಿ ಯೋಗ ಪರಿವಾರದ ನಿಕಟ ಪೂರ್ವ ಜಿಲ್ಲಾ ಸಂರಕ್ಷಕರಾದ ಹರಿಹರಪುರ ಶ್ರೀಧರ್ ಮಾಧ್ಯಮದೊಂದಿಗೆ ಮಾತನಾಡಿ, ನಮ್ಮ ದೇಶದಲ್ಲಿ ವಿಜ್ಞಾನ ಬೆಳೆದಂತೆ ಮನುಷ್ಯನ ಬದುಕಿನ ಜೀವನ ಶೈಲಿಯೇ ಬದಲಾಗುತ್ತಿದೆ. ಅದರ ಪರಿಣಾಮವಾಗಿ ನಿಜವಾಗಲು ಸುಖ, ಸಂತೋಷ ಎಲ್ಲಾವನ್ನು ಕಳೆದುಕೊಂಡು ಅಕಾಲ ಮರಣ, ಬಹಳ ಚಿಕ್ಕವಯಸ್ಸಿನಲ್ಲಿ ಪ್ರಾಣವನ್ನು ಕಳೆದುಕೊಳ್ಳುವ ಸಂದರ್ಭ ನೋಡುತ್ತಿದ್ದೇವೆ. ಇದು ನಮ್ಮ ಜೀವನ ಶೈಲಿಯಲ್ಲಿನ ದೊಡ್ಡ ಬದಲಾವಣೆ ಆಗಿದೆ. ನಮ್ಮ ಹಿರಿಯರು ಏನು ಹಿಂದೆ ಜೀವನ ಮಾಡುತ್ತಿದ್ದರೂ ಅದನ್ನ ನಾವು ಮಾಡುತ್ತಿಲ್ಲ. ಅದರ ಪರಿಣಾಮವೇ ಬಹಳ ವೇಗವಾಗಿ ಚಿಕ್ಕ ವಯಸ್ಸಿನಲ್ಲಿಯೇ ಹೃದಯಘಾತ ಹಾಗೂ ಬೇರೆ ಬೇರೆ ರೋಗಗಳಿಗೆ ಗುರಿಯಾಗುತ್ತಿದ್ದೇವೆ ಎಂದು ಬೇಸರ ವ್ಯಕ್ತಪಡಿಸಿದರು.

ಇತ್ತೀಚೆಗೆ ಹಾಸನದ ಹೊಳೆನರಸೀಪುರ ಹಾಗೂ ಜಿಲ್ಲೆಯ ವಿವಿಧ ತಾಲೂಕಿನಲ್ಲಿಯೇ ಒಂದು ತಿಂಗಳಲ್ಲಿ ಹೃದಯಘಾತದಿಂದ ಅನೇಕರು ಸಾವನಪ್ಪಿದ್ದಾರೆ. ಇದಕ್ಕೆ ಸಲ್ಪ ತಿಳಿವಳಿಕೆ ಕೊಟ್ಟು ತಮ್ಮ ಬದುಕಿನ ರೀತಿ ಕಲಿತುಕೊಂಡರೇ ಎಂತಹ ಕಾಯಿಲೆ ಬಂದರೂ ನಿಯಂತ್ರಿಸಬಹುದು. ಮುಖ್ಯವಾಗಿ ಜಂಕ್‌ ಫುಡ್‌ ಸೇವನೆ ಮಾಡಲೇಬಾರದು. ಹಿಂದೆ ರಾಗಿ ಮುದ್ದೆ ಊಟ ಮಾಡುತ್ತಿದ್ದಾಗ ಬಹಳ ಗಟ್ಟಿಮುಟ್ಟಾಗಿ ಇದ್ದರು. ಪ್ರಸ್ತುತದಲ್ಲಿ ಆ ಮುದ್ದೆ ಅನ್ನ ತರಕಾರಿ ಸಾರು ತಿನ್ನುವ ಬದಲು ರಸ್ತೆಯಲ್ಲಿ ಸಿಗುವ ಆಹಾರ ತಿಂದುಕೊಂಡು ನಮ್ಮ ಶರೀರ ಎಲ್ಲಾ ತಿಪ್ಪೆಗುಡ್ಡೆ ಆಗಿಬಿಟ್ಟಿದ್ದರೂ ನಮ್ಮ ಜನರಿಗೆ ಅರ್ಥವಾಗುತ್ತಿಲ್ಲ ಎಂದು ಆತಂಕ ವ್ಯಕ್ತಪಡಿಸಿದರು. ಈ ನೋವು ನಿವಾರಣೆ ಮಾಡಿ ಆರೋಗ್ಯ ಸಮಾಜ ನಿರ್ಮಿಸುವ ನಿಟ್ಟಿನ್ಲಲಿ ಹಾಗೂ ಹೃದಯಘಾತ ಘಟನೆ ಆದ ಮೇಲೆ ಪತಂಜಲಿ ಯೋಗ ಸಮಿತಿ ಮುಖ್ಯಸ್ಥರಾದ ಬಾಬಾ ರಾಮದೇವ್ ಅವರಿಗೆ ಈ ವಿಚಾರ ತಲುಪಿದೆ. ಪತಂಜಲಿ ಯೋಗ ಪರಿವಾರದ ರಾಜ್ಯ ಪ್ರಭಾರಿ ಭವರ ಲಾಲ್ ಜಿ ಆರ್ಯಜೀ ಅವರು ಸೂಚನೆ ನೀಡಿ ಯೋಗಾ ಶಿಬಿರದ ಮೂಲಕ ತಿಳಿವಳಿಕೆ ನೀಡಿ ಎಂದಿದ್ದಾರೆ ಎಂದಿದ್ದಾರೆ. ನಾವು ಹಾಸನದಲ್ಲಿ ಜನರನ್ನ ಜಾಗೃತಿಗೊಳಿಸಿ ರೋಗ ಮುಕ್ತರನ್ನಾಗಿ ಮಾಡುವುದಕ್ಕಾಗಿ ಒಂದಷ್ಟು ಯೋಗಾಸನಗಳು, ಪ್ರಾಣಾಯಾಮ, ಅಗ್ನಿಹೋತ್ರ ಇತ್ಯಾದಿಗಳನ್ನು ಹತ್ತು ದಿನಗಳ ಕಾಲ ಜುಲೈ ೮ರ ಮಂಗಳವಾರದಿಂದ ನಗರದ ಎಂ.ಜಿ. ರಸ್ತೆ ಬಳಿ ಇರುವ ಶ್ರಿ ಅನ್ನಪೂರ್ಣೇಶ್ವರಿ ಕಲ್ಯಾಣ ಮಂಟಪದಲ್ಲಿ ಪ್ರತಿದಿನ ಬೆಳಿಗ್ಗೆ ೫:೩೦ ರಿಂದ ೭:೩೦ರ ವರೆಗೂ ಉಚಿತವಾಗಿ ನೀಡಲಾಗುವುದು ಎಂದರು.

ಆನ್‌ಲೈನ್ ಮೂಲಕ ಬಾಬಾ ರಾಮದೇವ್ ಮತ್ತು ಇತರರು ನಮ್ಮ ಶಿಬಿರಕ್ಕೆ ಸಲಹೆ ನೀಡಲಿದ್ದಾರೆ. ನಮ್ಮ ಜೀವನ ಶೈಲಿ ಹೇಗಿರಬೇಕು, ನಮ್ಮ ಆಹಾರ ಹೇಗಿರಬೇಕು, ನಮ್ಮ ದೈನಂದಿನ ಜೀವನವನ್ನು ಒತ್ತಡ ರಹಿತವಾಗಿ ಹೇಗೆ ನಡೆಸಬೇಕು, ಶಾರೀರಿಕ ಚಟುವಟಿಕೆಗಳು ಹೇಗಿರಬೇಕು? ಇವೆಲ್ಲದಕ್ಕೆ ಸಲಹೆ, ಪರಿಹಾರವಿದೆ. ಯೋಗ ಶಿಬಿರದಲ್ಲಿ ಪಾಲ್ಗೊಂಡು ಆನಂದಮಯ ಜೀವನವನ್ನು ನಿಮ್ಮದಾಗಿಸಿಕೊಳ್ಳಬಹುದು ಎಂದು ಹೇಳಿದರು. ಹೆಚ್ಚಿನ ಮಾಹಿತಿಗಾಗಿಪತಂಜಲಿ ಯೋಗ ಪರಿವಾರದ ಶಿಬಿರ ಸಂಯೋಜಕ ಸುರೇಶ್ ಪ್ರಜಾಪತಿ, ಲೋಕನಾಥ್, ಶೇಷಪ್ಪ ಸಂಪರ್ಕಿಸಬಹುದು. ಮೊಬೈಲ್, ೯೪೪೯೩೮೬೫೮೧, ೯೮೮೦೩೧೦೫೭೧, ೯೪೪೯೩೮೬೫೮೧ ಹೆಚ್ಚಿನ ಮಾಹಿತಿ ಪಡೆಯಬಹುದಾಗಿದೆ.