ಸ್ವಾತಂತ್ರ್ಯ ಹೋರಾಟಗಾರ ಸ್ಮರಣೆ ನಮ್ಮೆಲ್ಲರ ಹೊಣೆ: ಅಮ್ಜಾದ್ ಪಟೇಲ್

| Published : Oct 25 2024, 12:46 AM IST

ಸ್ವಾತಂತ್ರ್ಯ ಹೋರಾಟಗಾರ ಸ್ಮರಣೆ ನಮ್ಮೆಲ್ಲರ ಹೊಣೆ: ಅಮ್ಜಾದ್ ಪಟೇಲ್
Share this Article
  • FB
  • TW
  • Linkdin
  • Email

ಸಾರಾಂಶ

ಹೋರಾಟಗಾರರ ತ್ಯಾಗ, ಬಲಿದಾನದಿಂದ ನಮಗೆ ಸ್ವಾತಂತ್ರ್ಯ ಸಿಕ್ಕಿದೆ. ಅವರೆಲ್ಲರ ಸ್ಮರಣೆ ನಮ್ಮೆಲ್ಲರ ಹೊಣೆಯಾಗಿದೆ.

ಸ್ವಾತಂತ್ರ್ಯ ಹೋರಾಟಗಾರ ಅಶ್ಫಾಕುಲ್ಲಾ ಖಾನ್ ಜಯಂತಿ

ಕನ್ನಡಪ್ರಭ ವಾರ್ತೆ ಕೊಪ್ಪಳ

ಹೋರಾಟಗಾರರ ತ್ಯಾಗ, ಬಲಿದಾನದಿಂದ ನಮಗೆ ಸ್ವಾತಂತ್ರ್ಯ ಸಿಕ್ಕಿದೆ. ಅವರೆಲ್ಲರ ಸ್ಮರಣೆ ನಮ್ಮೆಲ್ಲರ ಹೊಣೆಯಾಗಿದೆ ಎಂದು ನಗರಸಭೆ ಅಧ್ಯಕ್ಷ ಅಮ್ಜಾದ್ ಪಟೇಲ್ ಹೇಳಿದರು,

ನಗರದ ಮೂರನೇ ವಾರ್ಡಿನ ವ್ಯಾಪ್ತಿಯ ಹಮಾಲರ ಕಾಲನಿಯಲ್ಲಿ ಅಶ್ಫಾಕುಲ್ಲಾ ಖಾನ್ ನಗರ ಮತ್ತು ಗ್ರಾಮೀಣಾಭಿವೃದ್ಧಿ ಸೇವಾ ಸಂಸ್ಥೆಯ ವತಿಯಿಂದ ಏರ್ಪಡಿಸಿದ್ದ ಸ್ವಾತಂತ್ರ್ಯ ಹೋರಾಟಗಾರ ಅಶ್ಫಾಕುಲ್ಲಾ ಖಾನ್ ಜಯಂತಿಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ದೇಶದ ಸ್ವಾತಂತ್ರ್ಯಕ್ಕಾಗಿ ಬ್ರಿಟಿಷರ ವಿರುದ್ಧ ಹೋರಾಡಿದ ವೀರಯೋಧರ, ಸ್ವತಂತ್ರ ಹೋರಾಟಗಾರರ ತ್ಯಾಗ, ಬಲಿದಾನವನ್ನು ನಾವು ಸದಾಕಾಲ ಸ್ಮರಣೆ ಮಾಡುತ್ತಾ ಅವರು ಹಾಕಿಕೊಟ್ಟ ಮಾರ್ಗದಲ್ಲಿ ಜೀವನ ಸಾಗಿಸಬೇಕು ಎಂದರು.

ಸಮಾರಂಭದ ಸಾನಿಧ್ಯ ವಹಿಸಿದ್ದ ಮುಸ್ಲಿಂ ಧರ್ಮ ಗುರು ಮೌಲಾನಾ ಮುಫ್ತಿ ಮೊಹಮ್ಮದ್ ನಜೀರ್ ಅಹ್ಮದ್ ಖಾದ್ರಿ ತಸ್ಕಿನಿ ಆಶೀರ್ವಚನ ನೀಡಿ, ವೀರಯೋಧರ ಆದರ್ಶಗಳನ್ನು ನಾವು ಯುವ ಪೀಳಿಗೆಗೆ ಪರಿಚಯಿಸುವ ಕೆಲಸ ಮಾಡಬೇಕಾಗಿದೆ ಎಂದರು.

ಮೌಲಾನಾ ಮೊಹಮ್ಮದ್ ಅಬ್ದುಲ್ ಗಫರ್ ಸೇರಿದಂತೆ ಹಿರಿಯ ಪತ್ರಕರ್ತ ಎಂ. ಸಾಧಿಕ ಅಲಿ, ಸಮಾಜದ ಯುವ ನಾಯಕ ಸಲೀಂ ಮಂಡಲಗೇರಿ, ಇಬ್ರಾಹಿಂ ಪಟೇಲ್, ಆದಿಲ್ ಪಟೇಲ್, ಹುಸೇನ್ ಪೀರಾ ಮುಜಾವರ್, ಮೆಹಬೂಬ್ ಖಾನ್, ಹಬೀಬ್ ಖಾನ್ ಸಂಸ್ಥೆಯ ಮುಖ್ಯಸ್ಥ ಮರ್ದಾನ್ ಅಲಿ ತಹಸೀಲ್ದಾರ್ ಸೇರಿದಂತೆ ಸಂಸ್ಥೆಯ ಪದಾಧಿಕಾರಿಗಳು, ಪಂಚ್ ಕಮಿಟಿಯ ಮುಖ್ಯಸ್ಥರು, ಮಸೀದಿ ಕಮಿಟಿಯ ಮುಖ್ಯಸ್ಥರು, ನೌವ್ ಜವಾನ್ ಕಮಿಟಿಯ ಪದಾಧಿಕಾರಿಗಳು ಪಾಲ್ಗೊಂಡಿದ್ದರು.