ಸಾರಾಂಶ
ಜತೆಯಲ್ಲಿದ್ದ ಸ್ನೇಹಿತರೇ ಕೊಲೆ ಮಾಡಿ ಶವವನ್ನು ಶಿರಾಡಿ ಘಾಟಿಯ ಪ್ರಪಾತಕ್ಕೆ ಎಸೆದಿರುವ ಘಟನೆ ತಾಲೂಕಿನ ಹರಳಹಳ್ಳಿ ಗ್ರಾಮದಲ್ಲಿ ನಡೆದಿದೆ. ಹೈದರಾಬಾದ್‌ನಲ್ಲಿ ಬೇಕರಿ ಕೆಲಸ ಮಾಡುತ್ತಿದ್ದ ಶಿವಕುಮಾರ್ (34) ಕೊಲೆಯಾದ ಯುವಕ. ಅದೇ ಗ್ರಾಮದ ಶರತ್ ಹಾಗೂ ಪ್ರತಾಪ್ ಎಂಬುವವರಿಂದ ಈ ಕೃತ್ಯ ನಡೆದಿದ್ದು, ಆರೋಪಿಗಳು ತಲೆಮೆರೆಸಿಕೊಂಡಿದ್ದಾರೆ. ಶರತ್ ಹಾಗೂ ಪ್ರತಾಪ್ ಮಾಡಿದ್ದ ಕಳ್ಳತನದ ಬಗ್ಗೆ ಶಿವಕುಮಾರ್‌ಗೆ ತಿಳಿದಿತ್ತು. ಹಾಗಾಗಿ ಕಳೆದ ನಾಲ್ಕು ದಿನಗಳ ಹಿಂದೆ ಶಿವಕುಮಾರ್‌ನನ್ನು ಹೈದರಾಬಾದ್‌ನಿಂದ ಶರತ್ ಹಾಗೂ ಪ್ರತಾಪ್ ಕರೆಸಿಕೊಂಡು ಕೊಲೆ ಮಾಡಿದ್ದಾರೆ.
ಕನ್ನಡಪ್ರಭ ವಾರ್ತೆ ಹಾಸನ
ಜತೆಯಲ್ಲಿದ್ದ ಸ್ನೇಹಿತರೇ ಕೊಲೆ ಮಾಡಿ ಶವವನ್ನು ಶಿರಾಡಿ ಘಾಟಿಯ ಪ್ರಪಾತಕ್ಕೆ ಎಸೆದಿರುವ ಘಟನೆ ತಾಲೂಕಿನ ಹರಳಹಳ್ಳಿ ಗ್ರಾಮದಲ್ಲಿ ನಡೆದಿದೆ.ಹೈದರಾಬಾದ್‌ನಲ್ಲಿ ಬೇಕರಿ ಕೆಲಸ ಮಾಡುತ್ತಿದ್ದ ಶಿವಕುಮಾರ್ (34) ಕೊಲೆಯಾದ ಯುವಕ. ಅದೇ ಗ್ರಾಮದ ಶರತ್ ಹಾಗೂ ಪ್ರತಾಪ್ ಎಂಬುವವರಿಂದ ಈ ಕೃತ್ಯ ನಡೆದಿದ್ದು, ಆರೋಪಿಗಳು ತಲೆಮೆರೆಸಿಕೊಂಡಿದ್ದಾರೆ. ಶರತ್ ಹಾಗೂ ಪ್ರತಾಪ್ ಮಾಡಿದ್ದ ಕಳ್ಳತನದ ಬಗ್ಗೆ ಶಿವಕುಮಾರ್‌ಗೆ ತಿಳಿದಿತ್ತು. ಹಾಗಾಗಿ ಕಳೆದ ನಾಲ್ಕು ದಿನಗಳ ಹಿಂದೆ ಶಿವಕುಮಾರ್‌ನನ್ನು ಹೈದರಾಬಾದ್‌ನಿಂದ ಶರತ್ ಹಾಗೂ ಪ್ರತಾಪ್ ಕರೆಸಿಕೊಂಡಿದ್ದರು. ಶುಕ್ರವಾರ ಮಧ್ಯಾಹ್ನ ಮನೆಯಿಂದ ಶಿವಕುಮಾರ್‌ನನ್ನು ಕರೆದಕೊಂಡು ಹೋಗಿದ್ದ ಶರತ್ ಹಾಗೂ ಪ್ರತಾಪ್ ಕಂಠಪೂರ್ತಿ ಕುಡಿಸಿ ತಲೆಯ ಮೇಲೆ ಕಲ್ಲು ಎತ್ತಿಹಾಕಿ ಕೊಲೆ ಮಾಡಿದ್ದಾರೆ. ನಂತರ ಶವವನ್ನು ಗುಂಡ್ಯದ ಬಳಿ ಪ್ರಪಾತಕ್ಕೆ ಎಸೆಯಲು ನೆರವಿಗೆ ದಿಲೀಪ್ ಎಂಬಾತನನ್ನು ಕರೆದೊಯ್ಯಲಾಗಿತ್ತು. ಆದರೆ, ವಿಷಯ ತಿಳಿದ ದಿಲೀಪ್ ಅಲ್ಲಿಂದ ತಪ್ಪಿಸಿಕೊಂಡು ಓಡಿಬಂದಿದ್ದ. ಹಾಗಾಗಿ ದಿಲೀಪ್ ನೀಡಿದ ಮಾಹಿತಿ ಆಧರಿಸಿ ಪೊಲೀಸರು ಶವಕ್ಕಾಗಿ ಹುಡುಕಾಟ ನಡೆಸಿದ್ದಾರೆ.
ಹಾಸನ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು ಪ್ರಕರಣ ದಾಖಲಾಗಿದೆ.