ನರಸಿಂಹರಾಜಪುರಆಧುನಿಕತೆ ಭರಾಟೆಯಲ್ಲಿ ಮನುಷ್ಯರ ಸಂಬಂಧಗಳೇ ಯಾಂತ್ರಿಕವಾಗುತ್ತಿರುವಾಗ ಶಾಲೆಯ ಹಳೆ ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಒಂದೆಡೆ ಸೇರುವ ಈ ಸ್ನೇಹ ಮಿಲನ ಪ್ರತಿಯೊಬ್ಬರಲ್ಲೂ ಮಾನವೀಯ ಮೌಲ್ಯ ಗಳು ಹೆಚ್ಚಾಗಲಿ ಎಂದು ಹಂತುವಾನಿಯ ಸಂತ ಅಂತೋಣಿ ಪ್ರಾಥಮಿಕ ಶಾಲೆ ನಿವೃತ್ತ ಶಿಕ್ಷಕಿ ಸಲಿನ ಕರೆ ನೀಡಿದರು.
ಹಂತುವಾನಿಯ ಸಂತ ಅಂತೋಣಿ ಪ್ರಾಥಮಿಕ ಶಾಲೆಯಲ್ಲಿ ಸ್ನೇಹ ಮಿಲನ ಕಾರ್ಯಕ್ರಮ
ಕನ್ನಡಪ್ರಭ ವಾರ್ತೆ, ನರಸಿಂಹರಾಜಪುರಆಧುನಿಕತೆ ಭರಾಟೆಯಲ್ಲಿ ಮನುಷ್ಯರ ಸಂಬಂಧಗಳೇ ಯಾಂತ್ರಿಕವಾಗುತ್ತಿರುವಾಗ ಶಾಲೆಯ ಹಳೆ ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಒಂದೆಡೆ ಸೇರುವ ಈ ಸ್ನೇಹ ಮಿಲನ ಪ್ರತಿಯೊಬ್ಬರಲ್ಲೂ ಮಾನವೀಯ ಮೌಲ್ಯ ಗಳು ಹೆಚ್ಚಾಗಲಿ ಎಂದು ಹಂತುವಾನಿಯ ಸಂತ ಅಂತೋಣಿ ಪ್ರಾಥಮಿಕ ಶಾಲೆ ನಿವೃತ್ತ ಶಿಕ್ಷಕಿ ಸಲಿನ ಕರೆ ನೀಡಿದರು.
ಭಾನುವಾರ ಹಂತುವಾನಿಯ ಸಂತ ಅಂತೋಣಿ ಪ್ರಾಥಮಿಕ ಶಾಲೆಯಲ್ಲಿ ಹಳೇ ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಒಂದೆಡೆ ಸೇರುವ ಸ್ನೇಹ ಮಿಲನ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿ ಈ ಶಾಲೆಯಲ್ಲಿ ವ್ಯಾಸಂಗ ಮಾಡಿದ ಅನೇಕ ವಿದ್ಯಾರ್ಥಿಗಳು ಇಂದು ಹೊರ ರಾಜ್ಯ ಹಾಗೂ ವಿದೇಶಗಳಲ್ಲಿ ಉನ್ನತ ಹುದ್ದೆಯಲ್ಲಿದ್ದಾರೆ. ಅವರ ಪ್ರತಿ ದಿನದ ವೃತ್ತಿಯಲ್ಲೂ ಶಾಲೆ ಈ ಶಾಲೆ ನೀಡಿದ ಶಿಕ್ಷಣ, ಸಂಸ್ಕಾರಗಳು ಅಭಿವ್ಯಕ್ತಿಗೊಳ್ಳುತ್ತಿದೆ. ನಮ್ಮ ವಿದ್ಯಾರ್ಥಿಗಳು ಉನ್ನತ ಹುದ್ದೆಗಳಲ್ಲಿ ಸೇವ ಸಲ್ಲಿಸುತ್ತಿದ್ದರೂ ಈಗಲೂ ಶಿಕ್ಷಕರಾದವರಿಗೆ ವಿದ್ಯಾರ್ಥಿಯಂತೆ ಕಾಣುತ್ತಾರೆ. ಅವರನ್ನು ಕಂಡಾಗಲೆಲ್ಲಾ ಬಾಲ್ಯದ ನೆನಪು ಗಳು ಮರುಕಳಿಸುತ್ತದೆ. ಸ್ನೇಹ ಮಿಲನ ನಮ್ಮಲ್ಲಿರುವ ಸದ್ಭಾವನೆ ಅರಳುವಂತೆ ಮಾಡುತ್ತದೆ ಎಂದರು.ಅತಿಥಿಯಾಗಿದ್ದ ರೆ.ಫಾ.ಅಬ್ರಹಾಂ ಮಾತನಾಡಿ, 35 ವರ್ಷದ ಹಿಂದೆ ಹಂತುವಾನಿ ಗ್ರಾಮದ ಸುತ್ತ ಸಂಚರಿಸುವಾಗ ಈ ಪ್ರದೇಶವು ಶೈಕ್ಷಣಿಕವಾಗಿ ಹಿಂದುಳಿದಿರುವುದನ್ನು ಕಂಡಿದ್ದೆವು. ಆದ್ದರಿಂದ 1 ನೇ ತರಗತಿಯಿಂದ 10 ನೇ ತರಗತಿಯವರೆಗೆ ಶಾಲೆ ಸ್ಥಾಪಿಸಲು ಮುಂದಾದೆವು. ನಮ್ಮ ಪ್ರಯತ್ನದ ಫಲವಾಗಿ ಈ ಗ್ರಾಪಂ ವ್ಯಾಪ್ತಿಯ ಸಾವಿರಾರು ವಿದ್ಯಾರ್ಥಿಗಳು ಈ ಶಾಲೆಯಲ್ಲಿ 10 ನೇ ತರಗತಿಯಲ್ಲಿ ವ್ಯಾಸಂಗ ಮಾಡಲು ಸಾಧ್ಯವಾಯಿತು ಎಂದರು.
ನಿವೃತ್ತ ಮುಖ್ಯೋಪಾಧ್ಯಾಯಿನಿ ಸಿಸ್ಟರ್ ರೋಸ್ ಬೆಲ್ ಮಾತನಾಡಿ, ಈ ಶಾಲೆಯಲ್ಲಿ ವ್ಯಾಸಂಗ ಮಾಡಿದ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳು ಇಂದು ಲಕ್ಷಾಂತರ ರು, ವೇತನ ಪಡೆಯುತ್ತಿದ್ದಾರೆ.ಆ ಮೂಲಕ ತಮ್ಮ ಕುಟುಂಭ ಹಾಗೂ ಗ್ರಾಮ ಅಭಿವೃದ್ದಿ ಆಗಲು ಕಾರಣ ಕರ್ತರಾಗಿದ್ದಾರೆ ಎಂದರು.ಸ್ನೇಹ ಮಿಲನ ಕಾರ್ಯಕ್ರಮದಲ್ಲಿ ಮಾಜಿ ವಿದ್ಯಾರ್ಥಿಗಳಿಂದ ಸಂಗೀತ, ನೃತ್ಯ ಕಾರ್ಯಕ್ರಮ ನಡೆಯಿತು. 40 ಕ್ಕೂ ಹೆಚ್ಚು ಶಿಕ್ಷಕ,ಶಿಕ್ಷಕಿಯರನ್ನು ಗೌರವಿಸಲಾಯಿತು. 100 ಕ್ಕೂ ಹೆಚ್ಚು ಮಾಜಿ ವಿದ್ಯಾರ್ಥಿಗಳಿಗೆ ಸ್ಮರಣಿಕೆ ನೀಡಲಾಯಿತು.