ಸಾರಾಂಶ
ಕನ್ನಡಪ್ರಭ ವಾರ್ತೆ ವಿಜಯಪುರ
ಧರ್ಮ ರಕ್ಷಣೆಗಾಗಿ ಸ್ಥಾಪಿಸಿರುವ ನೂತನ ಕ್ರಾಂತಿವೀರ ಬ್ರಿಗೇಡ್ ಫೆ.4ರಂದು ಬಸವನಬಾಗೇವಾಡಿಯಲ್ಲಿ ಉದ್ಘಾಟನೆಗೊಳ್ಳಲಿದೆ. ಅಂದು 1008 ಸುಮಂಗಲಿಯರ ಪೂರ್ಣಕುಂಭ ಸ್ವಾಗತದೊಂದಿಗೆ 1008 ಸಾಧು ಸಂತರ ಪಾದಪೂಜೆ ನೆರವೇರಿಸುವ ಮೂಲಕ ಕ್ರಾಂತಿವೀರ ಬ್ರಿಗೇಡ್ ಲೋಕಾರ್ಪಣೆಗೊಳಿಸಲಾಗುವುದು ಎಂದು ಮಾಜಿ ಡಿಸಿಎಂ ಹಾಗೂ ಬ್ರಿಗೇಡ್ ಸಂಸ್ಥಾಪಕ ಕೆ.ಎಸ್.ಈಶ್ವರಪ್ಪ ಹೇಳಿದರು.ನಗರದ ಕಾಳಿದಾಸ ಶಿಕ್ಷಣ ಸಂಸ್ಥೆಯಲ್ಲಿ ಬ್ರಿಗೇಡ್ ಪೋಸ್ಟರ್ ಬಿಡುಗಡೆಗೊಳಿಸಿ, ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾರ್ಯಕ್ರಮದಲ್ಲಿ ಕನ್ಹೇರಿ ಮಠದ ಅದೃಶ್ಯ ಕಾಡಸಿದ್ದೇಶ್ವರ ಶ್ರೀಗಳು ಹಾಗೂ ಕಾಗಿನೆಲೆ ಪೀಠದ ಶಾಖಾ ಮಠ ತಿಂಥಣಿ ಗುರುಪೀಠದ ಶ್ರೀಗಳು ಭಾಗವಹಿಸಲಿದ್ಧಾರೆ ಎಂದರು. ಎಲ್ಲ ಜಾತಿ-ವರ್ಗಗಳನ್ನು ಒಳಗೊಂಡು ಸ್ಥಾಪಿತವಾಗಿರುವ ಬ್ರಿಗೇಡ್ ಉದ್ಘಾಟನೆ ಕಾರ್ಯಕ್ರಮಕ್ಕೂ ಮೊದಲು ವಿಜಯಪುರ ಸುತ್ತಮುತ್ತಲಿನ ಐದಾರು ಜಿಲ್ಲೆಗಳ ಪ್ರತಿ ತಾಲೂಕಿನಲ್ಲಿ ಸಾಧುಸಂತರ, ನಾಗರಿಕರನ್ನು ಭೇಟಿ ಮಾಡಿ ಎಲ್ಲರನ್ನೂ ಕಾರ್ಯಕ್ರಮಕ್ಕೆ ಆಹ್ವಾನಿಸಲಾಗುವುದು. ರಾಜ್ಯದಲ್ಲಿ ಬೇರೆ ಬೇರೆ ಸಮಾಜದ ಸಾವಿರಾರು ಸಣ್ಣ ಸಣ್ಣ ಮಠಗಳಿವೆ, ಈ ಎಲ್ಲ ಮಠಗಳು ಅಭಿವೃದ್ಧಿಯಾಗಬೇಕು. ಸಾಧುಸಂತರ, ಪಟ್ಟದ ದೇವರ ಮಠಗಳ ಅಭಿವೃದ್ಧಿ ಪಡಿಸಬೇಕು ಎಂಬುದು ಬ್ರಿಗೇಡ್‌ನ ಮೊದಲ ಗುರಿ ಎಂದು ತಿಳಿಸಿದರು.
ಡಿ.ವಿ.ಸದಾನಂದಗೌಡರು ಸಿಎಂ ಇದ್ದಾಗ ₹ 109 ಕೋಟಿ ಹಾಗೂ ಬಸವರಾಜ ಬೊಮ್ಮಾಯಿ ಸಿಎಂ ಇದ್ದಾಗ ₹ 129 ಕೋಟಿ ವಿವಿಧ ಮಠಗಳ ಅಭಿವೃದ್ಧಿಗೆ ನೀಡಿದ್ದಾರ. ₹ 109 ಕೋಟಿ ಮಠಾಧೀಶರಿಗೆ ನೀಡಲು ಅಂದು ಪ್ರಮುಖ ಪಾತ್ರ ನಂದೇ ಇದೆ ಎಂದು ಹೇಳಿದರು.ಖರ್ಗೆ ಮೇಲೆ ಆರೋಪ ವಿಚಾರರಾಜಕಾರಣದಲ್ಲಿ ನಾನು ನೈತಿಕತೆಯಿಂದ ಬಂದಿದ್ದೇನೆ, ನನ್ನ ಮೇಲೆ ಆರೋಪ ಬಂದಾಗ ತಕ್ಷಣ ಪ್ರಧಾನಿ ಮೋದಿ ಹಾಗೂ ಅಮೀತ್ ಶಾ ಅವರಿಗೆ ಫೋನ್ ಮಾಡಿ ಕೇವಲ ಎರಡು ದಿನದಲ್ಲಿ ರಾಜೀನಾಮೆ ನೀಡಿದ್ದೇನೆ. ಅಷ್ಟರಲ್ಲಿ ಸಿದ್ದು, ಡಿಕೆಶಿ ರಾಜೀನಾಮೆ ಕೊಡಬೇಕು ಎಂದು ಹೋರಾಟ ಮಾಡಿದರು. ನನಗೆ ಹೀಗಾಗಲು ಕೆಲವರು ತೊಂದರೆ ಕೊಟ್ಟರು, ಅವರು ಒಂದಲ್ಲ ಒಂದು ಸಮಸ್ಯೆ ಅನುಭವಿಸುತ್ತಿದ್ದಾರೆ. ಅವರಿಗೂ ದೇವರು ಒಳ್ಳೆಯದು ಮಾಡಲಿ, ನನಗೆ ಅನ್ಯಾಯ ಆದಂಗೆ ಬೇರೆಯವರಿಗೆ ಮಾಡಬಾರದು. ನನ್ನ ನೈತಿಕತೆಗೆ ರಾಜ್ಯದ ಜನ ಮೆಚ್ಚಿದ್ದಾರೆ. ವಕ್ಫ್ ಹೇಗೆ ಎರಡೂ ಮಿಕ್ಸ್ ಇದೆ, ನಾವು ಹಾಗೆ ಮಾಡುತ್ತೇವೆ. ರಾಜಕಾರಣದಲ್ಲಿ, ಧರ್ಮಕ್ಕೆ, ರೈತರಿಗೆ ಅನ್ಯಾಯ ಆದರೆ ಬ್ರಿಗೇಡ್ ಸುಮ್ಮನಿರುವುದಿಲ್ಲ ಎಂದು ಎಚ್ಚರಿಸಿದರು.ಬಸ್ ದರ ಏರಿಕೆ ವಿಚಾರ
ಗ್ಯಾರಂಟಿಗಳನ್ನು ಯಾರೂ ಕೇಳಿಲ್ಲ, ಆದರೂ ಅವರು ಕೊಟ್ಟಿದಾರೆ. ಖಜಾನೆ ಖಾಲಿಯಾಗಿದೆ, ಅದನ್ನ ಅವರು ಹೇಳುತ್ತಿಲ್ಲ. ಹೆಂಡತಿಗೆ ಫ್ರೀ ಕರೆದುಕೊಂಡು ಹೋಗಿ ಗಂಡನ ಬಳಿ ಪಡೆಯುತ್ತಿದ್ಧಾರೆ ಎಂದರು.ಹುಲಜಂತಿ ಮಾಳಿಂಗರಾಯ ಮಹಾರಾಜರು ಮಾತನಾಡಿ, ಭಕ್ತಿಯ ಶಕ್ತಿಯನ್ನು ಹೊಂದಿರುವ ವಿಜಯಪುರದಲ್ಲಿ ಈ ಅದ್ಭುತ ಕಾರ್ಯಕ್ರಮ ನಡೆಸಲಾಗುತ್ತಿದೆ. ಎಲ್ಲ ಸಾಧುಸಂತರು, ಸೂಫಿಸಂತರು, ಬಸವಣ್ಣನವರು, ಸಿದ್ಧೇಶ್ವರ ಸ್ವಾಮೀಜಿಗಳ ನಾಡಿನಲ್ಲಿ ಕಾರ್ಯಕ್ರಮ ಆರಂಭವಾಗಿದ್ದಕ್ಕೆ ಮತ್ತಷ್ಟು ಶಕ್ತಿ ಸಿಕ್ಕಂತಾಗಿದೆ.ಸುದ್ದಿಗೋಷ್ಠಿಯಲ್ಲಿ ಸೋಮೇಶ್ವರ ಪೂಜಾರಿ, ಮಾಧುಲಿಂಗ ಮಹಾರಾಜರು, ಅಮರೇಶ್ವರ ಸ್ವಾಮೀಜಿ, ಕೆಂಚರಾಯ ಪೂಜಾರಿ, ಮಾಳಿಂಗರಾಯ ಪೂಜಾರಿ, ಬಸವರಾಜ ಬಾಳಿಕಾಯಿ, ಕೆ.ಎ.ಕಾಂತೇಶ, ರಾಜು ಬಿರಾದಾರ, ಶಿಲ್ಪಾ ಕುದರಗೊಂಡ ಉಪಸ್ಥಿತರಿದ್ದರು.ಕೋಟ್‌ದೇವಸ್ಥಾನಗಳಲ್ಲಿ ಪೂಜೆ ಮಾಡುವವರಿಗೆ ಸೂಕ್ತ ತರಬೇತಿ ಕೊಡುವ ಕೆಲಸವೂ ಆಗಲಿದೆ. ಹಿಂದೂ ಸಮಾಜದ ಏನೇ ಕಾರ್ಯಕ್ರಮಗಳು ಇದ್ದರೂ ಬ್ರಿಗೇಡ್ ಬೆಂಬಲಕ್ಕೆ ನಿಲ್ಲುತ್ತದೆ. ನಾನು ಜೀವನದಲ್ಲಿ ರಾಜಕಾರಣದ ಜೊತೆಗೆ ಯಾವಾಗಲೂ ಸಾಧುಸಂತರ ಜೊತೆಗೆ ಇದ್ದೇನೆ. ಬಿಜೆಪಿ ಸರ್ಕಾರವಿದ್ದಾಗ ಜಿಲ್ಲೆಗೊಂದು ಗೋಶಾಲೆ ತೀರ್ಮಾನ ಆಗಿತ್ತು, ಆದರೆ ಇದೀಗ ಕಾಂಗ್ರೆಸ್‌ನವರು ಇನ್ಮುಂದೆ ಹೊಸ ಗೋಶಾಲೆ ಮಾಡಬಾರದು ಎಂದು ತೀರ್ಮಾನ ತೆಗೆದುಕೊಂಡಿದ್ದಾರೆ. ವಕ್ಫ್ ಕುರಿತು ಹಲವು ತೀರ್ಮಾನ ಮಾಡಿದ್ದಾರೆ.ಕೆ.ಎಸ್.ಈಶ್ವರಪ್ಪ, ಬ್ರಿಗೇಡ್ ಸಂಸ್ಥಾಪಕ