ಸಾರಾಂಶ
ಮಹಿಳೆ ಇಂದು ಎಲ್ಲಾ ಕ್ಷೇತ್ರದಲ್ಲಿಯೂ ಮುಂದುವರೆಯುತ್ತಿದ್ದು, ಸಮಾಜವನ್ನು ಸಮರ್ಥವಾಗಿ ಮುನ್ನಡೆಸಬಲ್ಲ ಮನೋಬಲ ಹೊಂದಿದ್ದಾರೆ. ಶ್ರೀಭ್ರಮರಾಂಬ ಮಹಿಳಾ ಸೌಹಾರ್ದ ಸಹಕಾರಿ ಸಂಘದಿಂದ ಸಮಾಜಕ್ಕೆ ಏನು ಕೊಡುಗೆ ನೀಡಬಹುದು ಎಂಬುದನ್ನು ಚರ್ಚಿಸಿ ರೂಪುರೇಷೆ ತಯಾರಿಸಿ, ಸ್ತ್ರೀಶಕ್ತಿ ಸಂಘಗಳಿಗೆ ಸಾಲ ನೀಡುವುದು.
ಕನ್ನಡಪ್ರಭ ವಾರ್ತೆ ಹಲಗೂರು
ಶ್ರೀಭ್ರಮರಾಂಬ ಮಹಿಳಾ ಸೌಹಾರ್ದ ಸಹಕಾರಿ ಸಂಘದ ಅಭಿವೃದ್ಧಿಗೆ ಸಂಪೂರ್ಣ ಸಹಕಾರ ನೀಡುತ್ತೇನೆ ಎಂದು ಶ್ರೀಮಹದೇಶ್ವರ ಸೌಹಾರ್ದಿತ ಬ್ಯಾಂಕ್‌ನ ಅಧ್ಯಕ್ಷ ಹಾಗೂ ವೀರಶೈವ ಸಮಾಜದ ಅಧ್ಯಕ್ಷ ಎನ್.ಮಹಾದೇವಸ್ವಾಮಿ (ರವಿ) ಭರವಸೆ ನೀಡಿದರು.ನೂನತ ಮಹಿಳಾ ಸಹಕಾರ ಸಂಘವನ್ನು ಉದ್ಘಾಟಿಸಿ ಮಾತನಾಡಿ, ಮಹಿಳೆ ಇಂದು ಎಲ್ಲಾ ಕ್ಷೇತ್ರದಲ್ಲಿಯೂ ಮುಂದುವರೆಯುತ್ತಿದ್ದು, ಸಮಾಜವನ್ನು ಸಮರ್ಥವಾಗಿ ಮುನ್ನಡೆಸಬಲ್ಲ ಮನೋಬಲ ಹೊಂದಿದ್ದಾರೆ ಎಂದರು.
ಸಂಘದಿಂದ ಸಮಾಜಕ್ಕೆ ಏನು ಕೊಡುಗೆ ನೀಡಬಹುದು ಎಂಬುದನ್ನು ಚರ್ಚಿಸಿ ರೂಪುರೇಷೆ ತಯಾರಿಸಿ, ಸ್ತ್ರೀಶಕ್ತಿ ಸಂಘಗಳಿಗೆ ಸಾಲ ನೀಡುವುದು, ಈ ಸ್ಟ್ಯಾಂಪಿಂಗ್ ವ್ಯವಹಾರ , ವಾಣಿಜ್ಯ ಉದ್ದೇಶಕ್ಕೆ ತೊಡಗಿಸುವುದು ಮುಂತಾದವುದನ್ನು ಮಾಡುವಂತೆ ಕಿವಿಮಾತು ಹೇಳಿದರು.ಮೈಸೂರಿನ ವಾಣಿಜ್ಯ ತೆರಿಗೆ ನಿವೃತ್ತ ಅಧಿಕಾರಿ ಜಗದಾಂಬ ಮಾತನಾಡಿ, ಸಂಘದಿಂದ ಸಾಲ ಪಡೆದು ಸಕಾಲಕ್ಕೆ ಮರುಪಾವತಿ ಮಾಡಬೇಕು. ಬಡ್ಡಿ ಆಸೆಗೆ ಇನ್ನೊಬ್ಬರಿಗೆ ಕೊಟ್ಟು ಮೋಸ ಹೋಗಬೇಡಿ ಎಂದರು.
ನೂತನ ಅಧ್ಯಕ್ಷೆ ಸುಶೀಲಾ ಮಾತನಾಡಿ, ಹೈನುಗಾರಿಕೆ, ಹೊಲಿಗೆ ಯಂತ್ರ ಮತ್ತು ಇತರೆ ಕುಟುಂಬ ನಿರ್ವಹಣೆಗೆ ಸಹಕಾರವಾಗುವ ಕಸುಬುಗಳನ್ನು ಮಾಡಿ ಆರ್ಥಿಕ ಮುಗ್ಗಟ್ಟುಗಳನ್ನು ನಿವಾರಿಸಿಕೊಳ್ಳಬಹುದು. ಮಹಿಳೆಯರು ಆರ್ಥಿಕವಾಗಿ ಸಬಲರಾಗಬೇಕು ಎಂದರು.ಸಂಘದ ಅಧ್ಯಕ್ಷರ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಯಾರು ನಾಮಪತ್ರ ಸಲ್ಲಿಸದ ಕಾರಣ ಸಂಘದ ನೂತನ ಅಧ್ಯಕ್ಷರಾಗಿ ಸುಶೀಲ, ಉಪಾಧ್ಯಕ್ಷರಾಗಿ ಬಿ.ಎಸ್.ಸಂಧ್ಯಾ, ನಿರ್ದೇಶಕರಾಗಿ ಕೆ.ಎಸ್.ರೇಣುಕಾ, ವಿ.ಶೋಭಾ, ಮಾಲತಿ, ಜಗದೀಶ್ವರಿ, ರಾಧಾ, ರಂಜಿತಾ, ಶೃತಿ, ಕಲ್ಪನಾ. ಆಯ್ಕೆಯಾಗಿದ್ದಾರೆ ಎಂದು ರವಿ ಘೋಷಣೆ ಮಾಡಿದರು. ಈ ವೇಳೆ
ಆನಂದ್, ಕುಮಾರ್, ಮಹದೇವಸ್ವಾಮಿ, ಮಾ.ಪರಿಣಿತ್, ಅಭಿಜಿತ್, ರಾಜೇಂದ್ರ ಸೇರಿದಂತೆ ಇತರರು ಇದ್ದರು.