ಡಾ. ಕೀಲಾರು ಗೋಪಾಲಕೃಷ್ಣಯ್ಯ ಪ್ರತಿಷ್ಠಾನ ಸಂಪಾಜೆ ವತಿಯಿಂದ ‘ಸಂಪಾಜೆ ಯಕ್ಷೋತ್ಸವ 2026‘ ಹಾಗೂ ಬ್ರಹ್ಮೈಕ್ಯ ಶ್ರೀ ಕೇಶವಾನಂದ ಭಾರತೀ ಮಹಾಸ್ವಾಮಿಗಳವರ ಪುಣ್ಯಸ್ಮೃತಿ ಮತ್ತು ಪ್ರಶಸ್ತಿ ಪ್ರದಾನ ಹಾಗೂ ಪ್ರಸಿದ್ಧ ಕಲಾವಿದರಿಂದ ಭಾನುವಾರ ಬೆಳಗ್ಗೆಯವರೆಗೆ ಯಕ್ಷಗಾನ ಬಯಲಾಟ ಕಾರ್ಯಕ್ರಮಕ್ಕೆ ಬರದ ಪೂರ್ವ ಸಿದ್ಧತೆ ಕೈಗೊಳ್ಳಲಾಗಿದೆ.

ಕನ್ನಡಪ್ರಭ ವಾರ್ತೆ ನಾಪೋಕ್ಲು

7 ರಂದು ಸಂಪಾಜೆ ಸಂಯುಕ್ತ ಪದವಿಪೂರ್ವ ಕಾಲೇಜಿನ ಮೈದಾನದಲ್ಲಿ ನಡೆಯಲಿದೆ. ಈ ಮಹತ್ವದ ಕಾರ್ಯಕ್ರಮದ ಪೂರ್ವಭಾವಿಯಾಗಿ ಮೈದಾನದಲ್ಲಿ ಹಾಗೂ ಸುತ್ತಮುತ್ತ ಭರದಿಂದ ಸಿದ್ಧತಾ ಕಾರ್ಯಗಳು ಸಾಗುತ್ತಿವೆ.

ಕಾರ್ಯಕ್ರಮದ ಸಿದ್ಧತೆಗಳು: ಕಾರ್ಯಕ್ರಮಕ್ಕೆ ಆಗಮಿಸುವ ಸುಮಾರು 3000 ಮಂದಿಗೆ ಆರಾಮವಾಗಿ ಕುಳಿತುಕೊಳ್ಳಲು ಹಾಗೂ ಊಟೋಪಚಾರಕ್ಕೆ ಅನುಕೂಲವಾಗುವಂತೆ ಬೃಹತ್ ಪೆಂಡಾಲ್ ವ್ಯವಸ್ಥೆ, ಸಾರ್ವಜನಿಕರ ಅನುಕೂಲಕ್ಕಾಗಿ ವಿಶಾಲವಾದ ವಾಹನ ನಿಲ್ದಾಣ (ಪಾರ್ಕಿಂಗ್) ವ್ಯವಸ್ಥೆ, ಚೌಕಿಯಿಂದ

ಸಂಪಾಜೆ ಜೂನಿಯರ್ ಕಾಲೇಜು ಬಳಿವರೆಗೆ, ಕಾಲೇಜು ಬಳಿಯಿಂದ ಮೈದಾನಕ್ಕೆ ತೆರಳುವ ದಾರಿಗೆ ಇಂಟರ್‌ಲಾಕ್ ಅಳವಡಿಸುವ ಮೂಲಕ ಓಡಾಟಕ್ಕೆ ಅನುವು, ಯಕ್ಷೋತ್ಸವದ ದಿನದಂದು ಕಾರ್ಯಕ್ರಮದ ಸ್ಥಳವು ವಿದ್ಯುದ್ದೀಪಗಳ ಅಲಂಕಾರದಿಂದ ಕಂಗೊಳಿಸಲಿದೆ ಎಂದು ಸಂಘಟಕರು ತಿಳಿಸಿದ್ದಾರೆ.