ಹಿರಿಯ ಪತ್ರಕರ್ತ ಬಿ.ಸಿ.ಮೋಹನ್‌ಕುಮಾರ್ ಅಂತ್ಯಕ್ರಿಯೆ

| Published : Jul 28 2024, 02:01 AM IST

ಸಾರಾಂಶ

ಪಟ್ಟಣದ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದಲ್ಲಿ ಶನಿವಾರ ಮಧ್ಯಾಹ್ನ ಸಂಘದ ಖಜಾಂಚಿಯೂ ಆಗಿದ್ದ ಪತ್ರಕರ್ತ ಬಿ.ಸಿ.ಮೋಹನ್‌ಕುಮಾರ್ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ಮೌನ ಆಚರಿಸುವ ಮೂಲಕ ಶ್ರದ್ಧಾಂಜಲಿ ಸಲ್ಲಿಸಲಾಯಿತು.

ನಾಗಮಂಗಲ: ಪಟ್ಟಣದ ಹೊರವಲಯದ ತೊಳಲಿ ಗ್ರಾಮದ ಸಮೀಪ ಶುಕ್ರವಾರ ಸಂಜೆ ಭೀಕರ ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ ತಾಲೂಕಿನ ಹಿರಿಯ ಪತ್ರಕರ್ತ ಬಿ.ಸಿ.ಮೋಹನ್‌ಕುಮಾರ್ ಅಂತ್ಯಕ್ರಿಯೆ ಸ್ವಗ್ರಾಮ ತಾಲೂಕಿನ ಬ್ಯಾಡರಹಳ್ಳಿ ಹೊರವಲಯದ ಜಮೀನಿನಲ್ಲಿ ಶನಿವಾರ ಮಧ್ಯಾಹ್ನ ನಡೆಯಿತು. ಸ್ವಗ್ರಾಮದಲ್ಲಿ ಶನಿವಾರ ಬೆಳಗ್ಗೆಯಿಂದ ಮಧ್ಯಾಹ್ನದವರೆಗೂ ಬಿ.ಸಿ.ಮೋಹನ್‌ಕುಮಾರ್ ಅವರ ಮೃತ ದೇಹವನ್ನು ಸಾರ್ವಜನಿಕ ದರ್ಶನಕ್ಕಾಗಿ ಇಡಲಾಗಿತ್ತು. ಕೃಷಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ, ಬಿಜೆಪಿ ಪಕ್ಷದ ಜಿಲ್ಲಾಧ್ಯಕ್ಷ ಡಾ.ಇಂದ್ರೇಶ್, ಮಾಜಿ ಸಂಸದ ಎಲ್.ಆರ್.ಶಿವರಾಮೇಗೌಡರ ಪುತ್ರ ಎಲ್.ಎಸ್.ಚೇತನ್‌ಗೌಡ ಸೇರಿದಂತೆ ಹಲವು ಮುಖಂಡರು ಹಾಗೂ ಸಹಸ್ರಾರು ಮಂದಿ ಅಂತಿಮ ದರ್ಶನ ಪಡೆದು ನಮನ ಸಲ್ಲಿಸಿದರು.

ಪತ್ರಕರ್ತರ ಸಂಘದಲ್ಲಿ ಶ್ರದ್ಧಾಂಜಲಿ:

ಪಟ್ಟಣದ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದಲ್ಲಿ ಶನಿವಾರ ಮಧ್ಯಾಹ್ನ ಸಂಘದ ಖಜಾಂಚಿಯೂ ಆಗಿದ್ದ ಪತ್ರಕರ್ತ ಬಿ.ಸಿ.ಮೋಹನ್‌ಕುಮಾರ್ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ಮೌನ ಆಚರಿಸುವ ಮೂಲಕ ಶ್ರದ್ಧಾಂಜಲಿ ಸಲ್ಲಿಸಲಾಯಿತು.

ಈ ವೇಳೆ ರಾಜ್ಯ ಕಾರ್ಯನಿರತ ಪತ್ರಕರ್ತರ ಕಾರ್ಯದರ್ಶಿ ಸೋಮಶೇಖರ್ ಕೆರಗೋಡು, ರಾಜ್ಯ ಸಮಿತಿ ಸದಸ್ಯ ಸಿ.ಎನ್.ಮಂಜುನಾಥ್, ಜಿಲ್ಲಾ ಸಂಘದ ಮಾಜಿ ಅಧ್ಯಕ್ಷ ಕೆ.ಸಿ.ಮಂಜುನಾಥ್, ಜಿಲ್ಲಾ ಸಂಘದ ನಿರ್ದೇಶಕ ಶಿವನಂಜೇಗೌಡ, ಪುಟ್ಟಲಿಂಗೇಗೌಡ, ಆನಂದ್, ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಕೆ.ಸೀತಾರಾಮು, ಉಪಾಧ್ಯಕ್ಷ ಚನ್ನಕೇಶವ, ಪದಾಧಿಕಾರಿಗಳಾದ ವಸಂತಕುಮಾರ್, ಯು.ವಿ.ಉಲ್ಲಾಸ್, ಮಾಜಿ ಅಧ್ಯಕ್ಷ ಪಿ.ಜೆ.ಜಯರಾಮು, ಪತ್ರಕರ್ತರಾದ ಬಿ.ಆರ್.ಕುಮಾರ್, ಮಹೇಶ್, ಎನ್.ಡಿ.ವಂಸತಕುಮಾರ್, ನಾರಾಯಣ, ಡಿ.ಆರ್.ಜಗದೀಶ್, ತುರುಣ್‌ಕುಮಾರ್, ಉಮೇಶ್, ಯೋಗೇಶ್, ಶ್ರೀನಿವಾಸ್, ಪುಟ್ಟರಾಜು ಇದ್ದರು.