ಮೊಬೈಲ್‌ ಬಳಕೆಯಿಂದ ಭವಿಷ್ಯ ಹಾಳು

| Published : Aug 23 2024, 01:09 AM IST

ಸಾರಾಂಶ

ಯುವಜನತೆಯ ಮನಸ್ಸುಗಳಿಂದು ಬಹುತೇಕ ಓದು, ಬರಹದ ಅಭಿರುಚಿ ಕಳೆದುಕೊಳ್ಳುತ್ತಲ್ಲಿದೆ. ಅವರಲ್ಲಿ ಅಧ್ಯಯನಶೀಲತೆ ಮರೆಯಾಗುತ್ತಲ್ಲಿದೆ. ಅನಗತ್ಯ ದುಗುಡ, ದುಮ್ಮಾನ ಜೊತೆಗೆ ಮೊಬೈಲ್ ಲೋಕದಲ್ಲಿ ಮುಳುಗಿ ಸ್ವಚ್ಛಂದವಾಗಿ ವಿಹರಿಸುತ್ತಿದೆ. ಇದರಿಂದ ಶೈಕ್ಷಣಿಕ ಪ್ರಗತಿ ಹಿನ್ನೆಡೆಯಾಗುತ್ತಿದೆ. ಸಮಾಜದಲ್ಲಿ ಹೆಚ್ಚು ಯುವಕರು ತಮ್ಮ ಭವಿಷ್ಯ ಹಾಳುಮಾಡಿಕೊಳ್ಳುತ್ತಿರುವುದು ತೀವ್ರ ನೋವಿನ ಸಂಗತಿ ಎಂದು ಜಮಖಂಡಿಯ ವಿಶ್ರಾಂತ ಶಿಕ್ಷಕ ಡಿ.ಎಸ್.ಕುಂಬಾರ ಹೇಳಿದರು.

ಕನ್ನಡಪ್ರಭ ವಾರ್ತೆ ಜಮಖಂಡಿ

ತಾಲೂಕಿನ ಚಿಕ್ಕಪಡಸಲಗಿ ಶಿವಶರಣ ಹರಳಯ್ಯ ಸ್ಮಾರಕ ಪ್ರೌಢಶಾಲೆಯಲ್ಲಿ ಮಂಗಳವಾರ ಪ್ರಸಕ್ತ ಸಾಲಿನ ಎಸ್ಸೆಸ್ಸೆಲ್ಸಿ ಮಕ್ಕಳಿಗೆ ವಾಷಿ೯ಕ ಪರೀಕ್ಷಾ ದೃಷ್ಟಿಯಿಂದ ಹಮ್ಮಿಕೊಂಡಿದ್ದ "ಪ್ರೇರಣಾ ಉಪನ್ಯಾಸ " ವಿಶೇಷ ಮಾಲಿಕೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಪ್ರೌಢ ಶಾಲೆ ಮಕ್ಕಳು ಜ್ಞಾನ ಬೆಳವಣಿಗೆ ಮಾಡಿಕೊಳ್ಳಬೇಕು. ಸಮಯವನ್ನು ವ್ಯರ್ಥವಾಗಿ ಹಾಳು ಮಾಡಬಾರದೆಂದರು.

ಮಕ್ಕಳಿಗೆ ವೈಯಕ್ತಿಕ, ನಿರ್ದಿಷ್ಟ ಗುರಿ, ಆತ್ಮವಿಶ್ವಾಸ, ನಿರಂತರ ಪ್ರಯತ್ನ, ಏಕಾಗ್ರತೆ ಇರಬೇಕು. ಪಾಠ ಬೋಧನೆ ಪ್ರವಚನ ಆಸಕ್ತಿಯಿಂದ ಆಲಿಸುವ ಕುತೂಹಲಬೇಕು. ತಾಳ್ಮೆ, ಸಂಯಮತೆಯ ಸಾಮರ್ಥ್ಯ ಸೂತ್ರಗಳನ್ನಿರಿಸಿಕೊಂಡು ಗುರಿ ಛಲ ಸಾಧನೆಗೆ ಮುಂದಾಗಬೇಕು. ಓದುವ ಕ್ರಮಬದ್ಧತೆ, ಓದುವ ರೀತಿ ಹಾಗೂ ಆಹಾರ ಪದ್ದತಿ ಸೂತ್ರಗಳನ್ನು ಅಳವಡಿಸಿಕೊಂಡು ಓದು,ಬರಹದ ಬೌದ್ಧಿಕ ಸ್ವತ್ತು ಹೆಚ್ಚಿಸಿಕೊಳ್ಳಬೇಕು. ಆ ದಿಸೆಯಲ್ಲಿ ಮನಸ್ಸು ಹತೋಟೆಯಲ್ಲಿ ನಿಯಂತ್ರಿಸಿಕೊಂಡು ಓದಿಮೇಲೆ ಬರಬೇಕು.ಕಷ್ಟಗಳನ್ನು ಮೆಟ್ಟಿನಿಂತು ಶೈಕ್ಷಣಿಕ ಜೀವನ ಸಾಕಾರಗೊಳಿಸಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.

ಇದೇ ವೇಳೆ ಡಿ.ಎಸ್.ಕುಂಬಾರ ಅವರನ್ನು ಶಾಲೆ, ಸಂಸ್ಥೆಯ ಪರವಾಗಿ ಸತ್ಕರಿಸಿ ಗೌರವಿಸಲಾಯಿತು.

ಪ್ರಭಾರಿ ಮುಖ್ಯೋಪಾಧ್ಯಾಯ ಬಸವರಾಜ ಜಾಲೋಜಿ, ವಿಶ್ರಾಂತ ದೈಹಿಕ ಶಿಕ್ಷಣ ಶಿಕ್ಷಕ ಬಸವರಾಜ ಅನಂತಪುರ, ಶಿಕ್ಷಕ ಈರಣ್ಣ ದೇಸಾಯಿ, ಲೋಹಿತ ಮಿಜಿ೯, ಸದಾಶಿವ ಸಿದ್ದಾಪುರ, ಜಿ.ಆರ್.ಜಾಧವ, ಶಿಕ್ಷಕಿ ಕವಿತಾ ಅಂಬಿ.ಸಹನಾ ಹತ್ತಳ್ಳಿ, ಪ್ರಮೀಳಾ ತೇಲಸಂಗ, ಅಕ್ಷತಾ ಮೂತ್ತೂರ ಸೇರಿದಂತೆ ಹಲವರಿದ್ದರು.