ಮಾದರಿ ಕ್ಷೇತ್ರವನ್ನಾಗಿ ಮಾಡಲು ಕಾರ್ಯಪ್ರವೃತ್ತ: ಜಗದೀಶ ಶೆಟ್ಟರ್‌

| Published : Aug 23 2024, 01:09 AM IST

ಮಾದರಿ ಕ್ಷೇತ್ರವನ್ನಾಗಿ ಮಾಡಲು ಕಾರ್ಯಪ್ರವೃತ್ತ: ಜಗದೀಶ ಶೆಟ್ಟರ್‌
Share this Article
  • FB
  • TW
  • Linkdin
  • Email

ಸಾರಾಂಶ

ಬೆಳಗಾವಿ ಲೋಕಸಭಾ ಕ್ಷೇತ್ರವನ್ನು ಸರ್ವಾಂಗೀಣ ಅಭಿವೃದ್ಧಿಯೊಂದಿಗೆ ಮಾದರಿ ಕ್ಷೇತ್ರವನ್ನಾಗಿ ಮಾಡಲು ಕಾರ್ಯಪ್ರವೃತ್ತನಾಗಿದ್ದೇನೆ ಎಂದು ಸಂಸದ ಜಗದೀಶ ಶೆಟ್ಟರ್‌ ಹೇಳಿದರು.

ಕನ್ನಡಪ್ರಭ ವಾರ್ತೆ ಗೋಕಾಕ

ಬೆಳಗಾವಿ ಲೋಕಸಭಾ ಕ್ಷೇತ್ರವನ್ನು ಸರ್ವಾಂಗೀಣ ಅಭಿವೃದ್ಧಿಯೊಂದಿಗೆ ಮಾದರಿ ಕ್ಷೇತ್ರವನ್ನಾಗಿ ಮಾಡಲು ಕಾರ್ಯಪ್ರವೃತ್ತನಾಗಿದ್ದೇನೆ ಎಂದು ಸಂಸದ ಜಗದೀಶ ಶೆಟ್ಟರ್‌ ಹೇಳಿದರು.

ಗುರುವಾರ ನಗರದ ಬಿ.ಎನ್. ಮಟ್ಟಿಕಲ್ಲಿ ಕಲ್ಯಾಣ ಮಂಟಪದಲ್ಲಿ ಶಂಕರಲಿಂಗ ಸಂಸ್ಥೆ ಹಾಗೂ ಸಹ ಸಂಸ್ಥೆಗಳ ಆಶ್ರಯದಲ್ಲಿ ಹಮ್ಮಿಕೊಂಡ ಸತ್ಕಾರ ಸಮಾರಂಭದಲ್ಲಿ ಸತ್ಕಾರ ಸ್ವೀಕರಿಸಿ ಮಾತನಾಡಿದರು. ದಿ.ಸುರೇಶ ಅಂಗಡಿಯವರ ಪ್ರಾರಂಭಿಸಿದ ಯೋಜನೆಗಳನ್ನು ಪೂರ್ಣಗೊಳಿಸಿ ಹೊಸ ಯೋಜನೆ ಅನುಷ್ಠಾನ, ಬೆಳಗಾವಿ ವಿಮಾನ ನಿಲ್ದಾಣವನ್ನು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವನ್ನಾಗಿ ಅಭಿವೃದ್ಧಿ, ಕೈಗಾರಿಕೆ ಅಭಿವೃದ್ಧಿ ಸೇರಿ ಗೋಕಾಕ ತಾಲೂಕಿನಲ್ಲಿ ಶಾಸಕರು ಸಹಕಾರದೊಂದಿಗೆ ಪ್ರವಾಸೋದ್ಯಮ ಅಭಿವೃದ್ಧಿ ಪಡಿಸಲು ಕಾರ್ಯಪ್ರವೃತ್ತನಾಗಿದ್ದೇನೆಎಂದರು.

ಹುಬ್ಬಳ್ಳಿಯ ಸುರೇಶ ಚನ್ನಿ, ಅನೀಲ ಕವಿಶೆಟ್ಟಿ, ನಗರದ ಜಿ.ಎಂ.ಅಂದಾನಿ, ಬಿ.ಎಂ. ಕುಬಸದ, ಶೀಲಾ ಬಿಳ್ಳೂರ, ಶಿವಲೀಲಾ ಆಲತಗಿ, ಡಾ.ಆರ್.ಎಸ್. ಗುಣಕಿ, ಬಿ.ಎಂ. ಹಿಂಡಿಹೊಳಿ ಇದ್ದರು.