ಚರ್ಚಾಸ್ಪರ್ಧೆಯಲ್ಲಿ ಬಿಎಂಎಸ್ ಕಾಲೇಜಿನ ಗಗನ ಪ್ರಥಮ

| Published : May 18 2024, 12:34 AM IST

ಚರ್ಚಾಸ್ಪರ್ಧೆಯಲ್ಲಿ ಬಿಎಂಎಸ್ ಕಾಲೇಜಿನ ಗಗನ ಪ್ರಥಮ
Share this Article
  • FB
  • TW
  • Linkdin
  • Email

ಸಾರಾಂಶ

ಕನಕಪುರ: ನಗರದ ರೂರಲ್ ಪದವಿ ಕಾಲೇಜಿನಲ್ಲಿ ಆಯೋಜಿಸಿದ್ದ "ಸಾಮಾಜಿಕ ಅಸ್ತಿರತೆಗೆ ಮೌಲ್ಯಾಧಾರಿತ ಶಿಕ್ಷಣದ ಕೊರತೆ ಕಾರಣವೇ? " ಎಂಬ ವಿಷಯ ಕುರಿತು ರಾಜ್ಯಮಟ್ಟದ ಅಂತರ ಕಾಲೇಜು ಕನ್ನಡ ಚರ್ಚಾ ಸ್ಪರ್ಧೆಗೆ ರಾಜ್ಯದ ವಿವಿಧ ಭಾಗಗಳಿಂದ ಬಂದಿದ್ದ ವಿದ್ಯಾರ್ಥಿಗಳು 4 ನಿಮಿಷಗಳ ಗಡುವಿನಲ್ಲಿ ಪರ ವಿರೋಧ ವಾದ ಮಂಡಿಸಿದರು.

ಚರ್ಚಾ ಸ್ಪರ್ಧೆಯಲ್ಲಿ ಬೆಂಗಳೂರಿನ ಬಿಎಂಎಸ್ ಕಾನೂನು ಕಾಲೇಜಿನ ವಿದ್ಯಾರ್ಥಿ ಜೆ.ಕೆ.ಗಗನ ಪ್ರಥಮ, ಬೆಂಗಳೂರಿನ ಎಪಿಎಸ್ ಕಾಲೇಜಿನ ವಿದ್ಯಾರ್ಥಿ ಚಂದ್ರಶೇಖರ್ ದ್ವಿತೀಯ, ವಿ.ವಿ.ಪುರಂ ಕಾನೂನು ಕಾಲೇಜಿನ ರೂಪಶ್ರೀ ತೃತೀಯ ಸ್ಥಾನ, ಮೈಸೂರಿನ ವಿದ್ಯಾವರ್ಧಕ ಕಾನೂನು ಕಾಲೇಜಿನ ವಿದ್ಯಾರ್ಥಿ ಪೃಥ್ವಿ ಭಟ್ 4ನೇ ಸ್ಥಾನ, ಕನಕಪುರ ರೂರಲ್ ಕಾಲೇಜಿನ ಅಂಜಲಿ 5ನೇ ಸ್ಥಾನ ಪಡೆದರು.

ಬೆಂಗಳೂರು ವಿ.ವಿ.ಪುರಂ ಕಾನೂನು ಕಾಲೇಜಿಗೆ ಪರ್ಯಾಯ ಪಾರಿತೋಷಕ, ಕನಕಪುರ ರೂರಲ್ ಕಾಲೇಜಿಗೆ ಪರ್ಯಾಯ ಕರಂಡ ಗಳಿಸಿದರೆ, ಸಂಸ್ಥೆಯ ಅಧ್ಯಕ್ಷ ಶ್ರೀಕಂಠು ಅವರು ಚರ್ಚಾ ಸ್ಫರ್ಧೆಯಲ್ಲಿ ಭಾಗವಹಿಸಿದ್ದ 10 ಅಭ್ಯರ್ಥಿಗಳಿಗೆ ತಲಾ ಒಂದು ಸಾವಿರ ರು. ಸಮಾಧಾನಕರ ಬಹುಮಾನ ವಿತರಿಸಿದರು.

ಕಾರ್ಯಕ್ರಮದಲ್ಲಿ ವಾಣಿಜ್ಯ ತೆರಿಗೆಗಳ ಅಪರ ಆಯುಕ್ತ ಕೆ.ಎಸ್.ಬಸವರಾಜ್, ಆರ್‌ಇಎಸ್ ಅಧ್ಯಕ್ಷ ಎಚ್.ಕೆ.ಶ್ರೀಕಂಠು, ಪ್ರಾಂಶುಪಾಲ ಎಂ.ಟಿ.ಬಾಲಕೃಷ್ಣ, ಉಪ ಪ್ರಾಂಶುಪಾಲರಾದ ದೇವರಾಜು ಹಾಗೂ ಆಡಳಿತ ಮಂಡಳಿಯ ಎಲ್ಲಾ ಸದಸ್ಯರು ಮತ್ತು ತೀರ್ಪುಗಾರರಾಗಿ ಡಾ.ರವೀಂದ್ರ, ಸತ್ಯರಾಜು, ಹಾಗೂ ಹನುಮಂತೆಗೌಡ, ಚರ್ಚಾ ಸಮಿತಿಯ ಸಂಚಾಲಕಿ ರಾಗಿಣಿ, ಸದಸ್ಯರಾದ ದೇವರಾಜು ಸಿ ವಿ, ಮೋಹನ್ ಕುಮಾರ್, ಸುಷ್ಮಾ, ಕುಮಾರಸ್ವಾಮಿ, ಸಾಗರ್, ಸುಧಾಕರ್, ಪ್ರಶಾಂತ್, ಎಲ್ಲಾ ಬೋಧಕ, ಬೋಧಕೇತರರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.