ಜೂಜು ಮನುಷ್ಯನ ನೆಮ್ಮದಿಗೆ ವಿರುದ್ಧವಾದದ್ದು: ಮಲ್ಲೇಶಗೌಡ

| Published : Mar 28 2024, 12:46 AM IST

ಸಾರಾಂಶ

ಪ್ರಬಂಧ ಸ್ಪರ್ಧೆಯಲ್ಲಿ ಚನ್ನರಾಯಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ದ್ರಾಕ್ಷಾಯಿಣಿ ಪ್ರಥಮ, ಹಿರೀಸಾವೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಚನ್ನಕೇಶವ ದ್ವಿತೀಯ, ಚನ್ನರಾಯಪಟ್ಟಣದ ನ್ಯೂ ಅಲಯನ್ಸ್ ಕಾಮರ್ಸ್ ಕಾಲೇಜಿನ ಶುಭ ಶ್ರೀ ತೃತೀಯ, ಹಿರೀಸಾವೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಂಜಯ್ ಚತುರ್ಥ ಸ್ಥಾನ ಪಡೆದು ಬಹುಮಾನ ಸ್ವೀಕರಿಸಿದರು.

ಕನ್ನಡಪ್ರಭ ವಾರ್ತೆ ಚನ್ನರಾಯಪಟ್ಟಣ

ಜೂಜು ಮನುಷ್ಯನ ಬದುಕಿನ ನೆಮ್ಮದಿಗೆ ವಿರುದ್ಧವಾದದ್ದು ಮತ್ತು ಅದು ನಮ್ಮ ಸಮಾಜಕ್ಕೆ ಬಹುದೊಡ್ಡ ಅಪಾಯವನ್ನು ತಂದೊಡ್ಡಿದೆ ಎಂದು ಹಾಸನ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಎಚ್.ಎಲ್. ಮಲ್ಲೇಶಗೌಡ ಹೇಳಿದರು.

ತಾಲೂಕಿನ ಹಿರೀಸಾವೆಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ ಹೋಬಳಿ ಘಟಕವು ಏರ್ಪಡಿಸಿದ್ದ ಆನ್ ಲೈನ್ ಬೆಟ್ಟಿಂಗ್ ದಂಧೆಯಿಂದ ಸಮಾಜದ ಮೇಲಾಗುವ ಮಾರಕ ಪರಿಣಾಮಗಳು ಮತ್ತು ನಿವಾರಣೋಪಾಯಗಳು ವಿಷಯದ ತಾಲೂಕು ಮಟ್ಟದ ಪ್ರಬಂಧ ಸ್ಪರ್ಧೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಪ್ರಬಂಧ ಸ್ಪರ್ಧೆಯಲ್ಲಿ ಚನ್ನರಾಯಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ದ್ರಾಕ್ಷಾಯಿಣಿ ಪ್ರಥಮ, ಹಿರೀಸಾವೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಚನ್ನಕೇಶವ ದ್ವಿತೀಯ, ಚನ್ನರಾಯಪಟ್ಟಣದ ನ್ಯೂ ಅಲಯನ್ಸ್ ಕಾಮರ್ಸ್ ಕಾಲೇಜಿನ ಶುಭ ಶ್ರೀ ತೃತೀಯ, ಹಿರೀಸಾವೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಂಜಯ್ ಚತುರ್ಥ ಸ್ಥಾನ ಪಡೆದು ಬಹುಮಾನ ಸ್ವೀಕರಿಸಿದರು.

ಕಾರ್ಯಕ್ರಮದಲ್ಲಿ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲ ಡಾ. ಬಸವರಾಜು ವಹಿಸಿದ್ದರು. ಗ್ರಾಪಂ ಅಧ್ಯಕ್ಷ ಬೋರಣ್ಣ, ಜಿಲ್ಲಾ ಕಸಾಪದ ಪ್ರಕಾಶ್, ಬೋಮ್ಮೇಗೌಡ, ಸೆಸ್ಕ್‌ನ ನಾಗೇಶ್ ಬಾಬು, ಕಾಲೇಜಿನ ಕನ್ನಡ ವಿಭಾಗದ ಸಹ ಪ್ರಾಧ್ಯಾಪಕಿ ಎನ್.ಆರ್.ಆಶಾ, ಕಸಾಪ ಮಾಧ್ಯಮ ಕಾರ್ಯದರ್ಶಿ ನಂದನ್‌ ಪುಟ್ಟಣ್ಣ, ಹಿರಿಯ ಪತ್ರಕರ್ತರಾದ ಪುಟ್ಟರಾಜು, ಚಂದ್ರು ಇದ್ದರು. ಹೋಬಳಿಯ ಕಸಾಪದ ಪದಾಧಿಕಾರಿಗಳು, ವಿದ್ಯಾರ್ಥಿಗಳು ಭಾಗವಹಿಸಿದ್ದರು.