ಅದ್ಧೂರಿಯಾಗಿ ನಡೆದ ಭಾವೈಕ್ಯತೆಯ ಗಣಪತಿ ವಿಸರ್ಜನೆ

| Published : Sep 19 2024, 01:48 AM IST

ಸಾರಾಂಶ

ಕೊರಟಗೆರೆಪಟ್ಟಣದ ಇತಿಹಾಸದಲ್ಲೇ ಪ್ರಪಥಮ ಬಾರಿಗೆ ಎಲ್ಲಾ ಹಿಂದೂ, ಮುಸ್ಲಿಂ ಬಾಂಧವರು ಒಂದಾಗಿ ಗಣಪತಿಗೆ ಪೂಜೆ ಸಲ್ಲಿಸಿ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡಿ ಗಣಪತಿ ವಿಸರ್ಜನೆ ಮಾಡುವ ಮೂಲಕ ರಾಜ್ಯದಲ್ಲಿ ನಡೆದಿರುವ ಸೌದಾರ್ದತೆ ಮೆರೆದರು.

ಕನ್ನಡಪ್ರಭ ವಾರ್ತೆ ಕೊರಟಗೆರೆ

ಪಟ್ಟಣದ ಇತಿಹಾಸದಲ್ಲೇ ಪ್ರಪಥಮ ಬಾರಿಗೆ ಎಲ್ಲಾ ಹಿಂದೂ, ಮುಸ್ಲಿಂ ಬಾಂಧವರು ಒಂದಾಗಿ ಗಣಪತಿಗೆ ಪೂಜೆ ಸಲ್ಲಿಸಿ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡಿ ಗಣಪತಿ ವಿಸರ್ಜನೆ ಮಾಡುವ ಮೂಲಕ ರಾಜ್ಯದಲ್ಲಿ ನಡೆದಿರುವ ಸೌದಾರ್ದತೆ ಮೆರದರು.

ಪಟ್ಟಣದಲ್ಲಿ ೧೪ ಗಣಪತಿಗಳನ್ನು ಒಟ್ಟಾಗಿ ಮೆರವಣಿಗೆಗೆ ತಾಲೂಕು ಆಡಳಿತ ನಿರ್ಧಾರ ಮಾಡಿದ್ದ ಹಿನ್ನೆಲೆಯಲ್ಲಿ ಬುಧವಾರ ವಿಸರ್ಜನಾ ಮೆರವಣಿಗೆ ಹಿಂದೆಂದಿಗಿಂತಲೂ ಅದ್ಧೂರಿಯಾಗಿ ನಡೆಯಿತು.

ಸಿದ್ದರಬೆಟ್ಟದ ಶ್ರೀ ವೀರಭದ್ರ ಶಿವಾಚಾರ್ಯ ಸ್ವಾಮಿಜಿ, ತಹಶೀಲ್ದಾರ್ ಮಂಜುನಾಥ್‌ರವರ ಸಿಪಿಐ ಅನಿಲ್, ಪಿಎಸ್‌ಐ ಚೇತನ್‌ಕುಮಾರ್‌ರವರ ನೇತೃತ್ವದಲ್ಲಿ ನಡೆದ ವಿಸರ್ಜನಾ ಮೆರವಣಿಗೆಯನ್ನು ಜನರು ಕಣ್ಣು ಮತ್ತು ಮೊಬೈಲ್‌ ಕ್ಯಾಮರಾ ಮೂಲಕ ನೆನೆಪಿನಲ್ಲಿಟ್ಟುಕೊಂಡರು. ಪಟ್ಟಣದ ಗಣೇಶ ಸಮಾನ ಮನಸ್ಥಿತಿ ಗೆಳೆಯರ ಬಳಗ, ಕೊರಟಗೆರೆ ಸ್ನೇಹ ಬಳಗ ಸೇರಿದಂತೆ ಹಲವು ಸಂಘಟನೆಗಳು ಒಟ್ಟಾಗಿ ಕೈ ಜೋಡಿಸಿ ಈ ಮೆರವಣಿಗೆಯಲ್ಲಿ ಪಾಲ್ಗೊಂಡರು, ಮೆರವಣಿಗೆಯಲ್ಲಿ ವಿವಿಧ ಜನಪದ ವಾದ್ಯಗಳು, ತಮಟೆ, ನಾಸಿಕ್ ಡೋಲ್‌ಗಳು, ಕೇರಳದ ವಾನಂಬಾಡಿ, ಚಂಡಮದ್ದಲೇ, ಹಕ್ಕಿ ಕುಣಿತ, ಕರ್ನಾಟಕದ ವೀರಗಾಸೆ, ದೇವಿಕುಣಿತ, ಸೇರಿದಂತೆ ವಿವಿಧ ವಾದ್ಯಗಳಿಗೆ ಜನರು ನೈತ್ಯದ ಮೂಲಕ ಹೆಜ್ಜೆಹಾಕಿದರು. ಕೊರಟಗೆರೆ ಪೊಲೀಸ್ ಬಂದೋಬಸ್ತ್‌ನಲ್ಲಿ ಪಟ್ಟಣದ ಕೋಟೆ ವೆಂಕಟರವಣಸ್ವಾಮಿ ಕಲ್ಯಾಣಿಯಲ್ಲಿ ಗಣಪತಿಗಳನ್ನ ವಿಸರ್ಜಿಸಲಾಯಿತು. ಪಟ್ಟಣದ ಸತ್ಯಗಣಪತಿ ಸೇವಾ ಮಂಡಳಿಯಿಂದ ಲಾಟರಿ ಯೋಜನೆ ಮಾಡಿದ್ದು ಬುಧವಾರ ಮದ್ಯಾಹ್ನ ೧೨ ಗಂಟೆಗೆ ಬಸ್ವಾಂಡ್ ವೃತ್ತದಲ್ಲಿ ಸಾರ್ವಜನಿಕರ ಮುಂದೆ ಮಕ್ಕಳ ಮೂಲಕ ಲಾಟರಿ ಡ್ರಾ ಮಾಡಿ ಬಹುಮಾನ ವಿತರಿಸಿದರು.ಭಾವೈಕ್ಯತೆಗೆ ಸಾಕ್ಷಿಯಾದ ಗಣೇಶ ವಿಸರ್ಜನೆಪಟ್ಟಣದಲ್ಲಿ ಪ್ರಾರಂಭವಾದ ಗಣೇಶ ವಿಸರ್ಜನಾ ಕಾರ್ಯಕ್ರಮದಲ್ಲಿ ಹಲವು ಮುಸ್ಲಿಂ ಬಾಂಧವರು ಬಸ್ಟಾಂಡ್ ವೃತ್ತಕ್ಕೆ ಬಂದು ಸಾವಿರಾರು ಜನರಿಗೆ ಮಜ್ಜಿಗೆ ಪ್ಯಾಕೆಟ್‌ಗಳನ್ನು ವಿತರಿಸಿ ಶುಭ ಕೋರಿದರು, ಹಾಗೂ ಮಕ್‌ ಬುಲ್ ವೃತ್ತದಲ್ಲಿ ಮುಸ್ಲಿಂ ಮುಖಂಡರು ಗಣೇಶ ಮರೆವಣಿಗೆಯಲ್ಲಿ ಬಂದ ಭಕ್ತರಿಗೆ ತಂಪು ಪಾನಿಯ, ಮಜ್ಜಿಗೆ, ನೀರನ್ನು ವಿತರಿಸಿ ಅಭಿನಂದಿಸಿದರು.

ಕೊರಟಗೆರೆ ಸಿಪಿಐ ಅನಿಲ್ ಹಾಗೂ ಪಿಎಸೈ ಚೇತನ್‌ಕುಮಾರ್ ನೇತೃತ್ವದಲ್ಲಿ ಸಿಪಿಐ ೦೧ ಪಿಎಸೈ ೦೬, ಎಎಸೈ ೦೮, ಪೊಲೀಸ್ ಅಧಿಕಾರಿಗಳು ೬೦, ಹೋಮ್ ಗಾರ್ಡ್ಸ್ ೨೫ ಜನರ ತಂಡ ಬಂದೋಬಸ್ತ್ ಏರ್ಪಡಿಸಿ ಯಾವುದೇ ಅಹಿತಕರ ಘಟನೆ ನೆಡೆಯದಂತೆ ಗಣಪತಿಯ ವಿಸರ್ಜನಾ ಕಾರ್ಯಕ್ರಮವನ್ನ ಯಶಸ್ವಿಗೊಳಿಸಿದರು.

ಮೆರವಣಿಗೆಯಲ್ಲಿ ಸಿದ್ದರಬೆಟ್ಟದ ಶ್ರೀ ವೀರಭದ್ರಶಿವಾಚಾರ್ಯಸ್ವಾಮಿಜಿ, ಮಧುಗಿರಿ ಡಿವೈಎಸ್ಪಿ ರಾಮಚಂದ್ರಪ್ಪ, ತಹಶೀಲ್ದಾರ್ ಕೆ. ಮಂಜುನಾಥ್, ಸಿಪಿಐ ಅನಿಲ್, ಪಿಎಸೈ ಚೇತನ್‌ಕುಮಾರ್ ಯೋಗೀಶ್, ಪಪಂ ಅಧ್ಯಕ್ಷರು ಹಾಗೂ ಸದಸ್ಯರು ಸೇರಿದಂತೆ ಪೋಲೀಸ್ ಅಧಿಕಾರಿಗಳು ಸಿಬ್ಬಂದಿಗಳು ೧೪ ಗಣಪತಿಗಳ ಅದ್ಯಕ್ಷರು ಪದಾಧಿಕಾರಿಗಳು ಸಾರ್ವಜನಿಕರು ಭಾಗವಹಿಸಿದ್ದರು.