ಗಾಂಧಿ ಭವನ ಕಾಮಗಾರಿಗೆ ಸಿಗುವುದೇ ವೇಗ

| Published : Jul 23 2024, 12:34 AM IST

ಸಾರಾಂಶ

ಅಕ್ಟೋಬರ್ 2 ರಂದು ನಡೆಯುವ ಗಾಂಧಿ ಜಯಂತಿಯನ್ನು ಗಾಂಧಿ ಭವನದಕಟ್ಟಡದಲ್ಲೆ ನಡೆಸಲು ಅನುವಾಗುವಂತೆ ಕಾಮಗಾರಿ ಮುಗಿಸ ಬೇಕೆಂದು ಗುತ್ತಿಗೆ ದಾರರಿಗೆ ಈ ವೇಳೆ ಸೂಸಿಸಿದ್ದಾರೆ. ಗಾಂಧಿ ಭವನದ ಕನಸು ಈ ಭಾರಿಯ ಗಾಂಧಿ ಜಯಂತಿಗೆ ಈಡೇರುವ ಸಾಧ್ಯತೆ ಇದೆ.

ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ

ಜಿಲ್ಲಾ ಕೇಂದ್ರದ ಹೃದಯ ಭಾಗದಲ್ಲಿ ನಿರ್ಮಾಣ ಹಂತದಲ್ಲಿರುವ ಗಾಂಧಿ ಭವನಕ್ಕೆ ಜಿಲ್ಲಾಧಿಕಾರಿ ಪಿ.ಎನ್. ರವೀಂದ್ರ ಸೋಮವಾರ ಭೇಟಿ ನೀಡಿ ಕಾಮಗಾರಿ ಪರಿಶೀಲಿಸಿದರು.

ಮಹಾತ್ಮಾ ಗಾಂಧೀಜಿಯವರ ತತ್ವಾದರ್ಶಗಳು,ಚಿಂತನೆಗಳನ್ನು ಇಂದಿನ, ಮುಂದಿನ ಪೀಳಿಗೆಗೆ ತಲುಪಿಸುವ ನಿಟ್ಟಿನಲ್ಲಿ 3 ಕೋಟಿ ವೆಚ್ಚದಲ್ಲಿ ಪ್ರತಿ ಜಿಲ್ಲಾ ಕೇಂದ್ರದಲ್ಲಿ ಗಾಂಧಿ ಭವನ ನಿರ್ಮಾಣಕ್ಕೆ ಸರ್ಕಾರ ಮುಂದಾಗಿದೆ. ಅದರಂತೆ ಜಿಲ್ಲೆಯಲ್ಲೂ ಭವನ ನಿರ್ಮಾಣ ಕಾಮಗಾರಿಯು ಅಂತಿಮ ಹಂತದಲ್ಲಿದ್ದು ಆದಷ್ಟು ಭೇಗ ಪೂರ್ಣಗೊಳಿಸಲು ಯೋಜನಾ ಅಭಿಯಂತರರಿಗೆ ಜಿಲ್ಲಾಧಿಕಾರಿಗಳು ಸೂಚನೆ ನೀಡಿದರು.

ಗಾಂಧಿ ಜಯಂತಿ ವೇಳೆಗೆ ಸಿದ್ಧ

ಅಕ್ಟೋಬರ್ 2 ರಂದು ನಡೆಯುವ ಗಾಂಧಿ ಜಯಂತಿಯನ್ನು ಗಾಂಧಿ ಭವನದಕಟ್ಟಡದಲ್ಲೆ ನಡೆಸಲು ಅನುವಾಗುವಂತೆ ಕಾಮಗಾರಿ ಮುಗಿಸ ಬೇಕೆಂದು ಗುತ್ತಿಗೆ ದಾರರಿಗೆ ಈ ವೇಳೆ ಸೂಸಿಸಿದ್ದಾರೆ. ಕಳೆದ ಏಳು ವರ್ಷಗಳ ಹಿಂದೆ ಚಿಕ್ಕಬಳ್ಳಾಪುರ ನಗರದಲ್ಲಿ ರಾಷ್ಟ್ರಪಿತ ಮಹಾತ್ಮಗಾಂಧಿ ಹೆಸರಲ್ಲಿ ಗಾಂಧಿ ಭವನ ನಿರ್ಮಾಣಕ್ಕೆ ಶಂಕುಸ್ಥಾಪನೆಯಾಗಿದ್ದು, ಕಟ್ಟಡದ ಕಾಮಗಾರಿ ತೆವಳುತ್ತಿದೆ. ಗಾಂಧಿ ಭವನದ ಕನಸು ಈ ಭಾರಿಯ ಗಾಂಧಿ ಜಯಂತಿಗೆ ಈಡೇರುವ ಸಾಧ್ಯತೆ ಇದೆ. ಅನುದಾನ ಬಂದರೂ ಜಿಲ್ಲಾಡಳಿತ ಹಾಗೂ ಚುನಾಯಿತ ಜನಪ್ರತಿನಿಧಿಗಳ ಇಚ್ಚಾಶಕ್ತಿ ಕೊರತೆಯಿಂದಾಗಿ ಕಟ್ಟಡಕ್ಕೆ ಶಂಕುಸ್ಥಾಪನೆಯಾಗಿ 4 ವರ್ಷ ಕಳೆದರೂ ಜಿಲ್ಲೆಯ ಪಾಲಿಗೆ ಮಹಾತ್ಮನ ಭವನ ನಿರ್ಮಾಣದ ಕನಸು ಮಾತ್ರ ಬರೀ ಕನಸಾಗಿಯೆ ಉಳಿದಿತ್ತು. ರಾಜ್ಯದ ಪ್ರತಿ ಜಿಲ್ಲೆಗೊಂದರಂತೆ ಗಾಂಧಿ ಭವನ ನಿರ್ಮಾಣ ಆಗಬೇಕೆಂದು ಈ ಹಿಂದಿನ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್‌ ಸರ್ಕಾರದ ಅವಧಿಯಲ್ಲಿ ನಿರ್ಧಾರವಾಗಿ ಜಿಲ್ಲೆಗೆ ಅನುದಾನ ಕೂಡ ಮಂಜೂರಾಯಿತು. ಆದರೆ ಗಾಂಧಿ ಭವನ ನಿರ್ಮಾಣಕ್ಕೆ ಸೂಕ್ತ ಸ್ಥಳ ಸಿಗದ ಕಾರಣಕ್ಕೆ ಕಾಮಗಾರಿ ಆರಂಭಗೊಳ್ಳದೇ ಭವನ ನಿರ್ಮಾಣ ನನೆಗುದಿಗೆ ಬಿದ್ದಿತ್ತು. ಈ ಸಂದರ್ಭದಲ್ಲಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಸಹಾಯಕ ನಿರ್ದೇಶಕ ಎಂ ಜುಂಜಣ್ಣ, ಯೋಜನಾ ಅಭಿಯಂತರ ತೇಜಸ್ ರೆಡ್ಡಿ ಇದ್ದರು.

ಸಿಕೆಬಿ-5 ಚಿಕ್ಕಬಳ್ಳಾಪುರ ನಗರದಲ್ಲಿ ಗಾಂಧಿಭವನದ ಕಾಮಗಾರಿಯನ್ನು ಜಿಲ್ಲಾಧಿಕಾರಿ ಪಿ. ಎನ್. ರವೀಂದ್ರ ಪರಿಶೀಲಿಸಿದರು