ಕರುನಾಡಿಗೆ ಗಾಂಧಿ ಹರ್ಡೇಕರ ಮಂಜಪ್ಪನವರ ಸೇವೆ ಅನನ್ಯ

| Published : Dec 27 2023, 01:30 AM IST

ಸಾರಾಂಶ

ಕರುನಾಡಿಗೆ ಗಾಂಧಿ ಹರ್ಡೇಕರ ಮಂಜಪ್ಪನವರ ಸೇವೆ ಅನನ್ಯ ಎಂದು ಗದಗಿನ ತೋಂಟದಾರ್ಯ ಮಠದ ಆಡಳಿತಾಧಿಕಾರಿ ಪ್ರೊ.ಶಿವಾನಂದ ಪಟ್ಟಣಶೆಟ್ಟರ ಅಭಿಪ್ರಾಯಪಟ್ಟರು

ಕನ್ನಡಪ್ರಭ ವಾರ್ತೆ ಆಲಮಟ್ಟಿ

ಸಾಮಾಜಿಕ ಕಳಕಳಿಯ ಎಲ್ಲ ಮಜಲುಗಳನ್ನು ನಿಷ್ಠೆ, ಬದ್ಧತೆಯ ಕಾರ್ಯಕ್ಷಮತೆಯಿಂದ ನಿರ್ವಹಿಸಿರುವ ಕರುನಾಡು ಗಾಂಧಿ ಹರ್ಡೇಕರ ಮಂಜಪ್ಪನವರು ಕಾಯಕ ಪ್ರಕಾಶದ ಅದಮ್ಯ ಪುಷ್ಪ ಎಂದು ಗದುಗಿನ ತೋಂಟದಾರ್ಯ ಮಠದ ಆಡಳಿತಾಧಿಕಾರಿ ಪ್ರೊ.ಶಿವಾನಂದ ಪಟ್ಟಣಶೆಟ್ಟರ ಅಭಿಪ್ರಾಯಪಟ್ಟರು.

ಆಲಮಟ್ಟಿಯಲ್ಲಿರುವ ರಾಷ್ಟ್ರಧರ್ಮ ದೃಷ್ಟಾರ, ಕರ್ನಾಟಕ ಗಾಂಧಿ ಹರ್ಡೇಕರ ಮಂಜಪ್ಪನವರ ಸ್ಮಾರಕ ಭವನಕ್ಕೆ ಭೇಟಿ ನೀಡಿ ಮಂಜಪ್ಪನವರ ಪ್ರತಿಮೆಗೆ ಹೂಮಾಲೆ ಅರ್ಪಿಸಿ ಗೌರವ ಸಲ್ಲಿಸಿ ಮಾತನಾಡಿದ ಅವರು, ಮಂಜಪ್ಪನವರ ದೇಶಭಕ್ತಿ, ರಾಷ್ಟ್ರೀಯತೆ, ಸಮಾಜಕ್ಕೆ ಸಲ್ಲಿಸಿದ ಸೇವೆ ಇಂದಿಗೂ ಅಜರಾಮರವಾಗಿದೆ ಎಂದರು.

ಋಷಿ ಸದೃಶ ಜೀವನ ನಡೆಸಿರುವ ಮಂಜಪ್ಪನವರು ಮೇರು ವ್ಯಕ್ತಿತ್ವದ ಕರುನಾಡಿನ ಧ್ರುವತಾರೆಯಾಗಿ ಅವರ ಕಾಯಕ ತತ್ವಪಾಲನೆ. ಮಹಾತ್ಮ ಗಾಂಧೀಜಿ, ಬಸವಣ್ಣನವರ ಅನುಯಾಯಿಗಳಾಗಿ ಸಾಗಿಸಿ ಸರಳ ಜೀವನ ಅನನ್ಯವಾಗಿವೆ ಎಂದರು.

ಸಾಹಿತಿಗಳಾಗಿ ಹಲವಾರು ಗ್ರಂಥ ಮಾಲೆಗಳನ್ನು ಸಾಹಿತ್ಯ ಲೋಕಕ್ಕೆ ಕೊಡುಗೆಯಾಗಿ ನೀಡಿದ್ದಾರೆ. ಮಂಜಪ್ಪನವರ ಬದುಕಿನ ಎಲ್ಲ ಅಯಾಮಗಳು ಸರ್ವೋಚ್ಛವಾಗಿವೆ. ಎಲ್ಲಾ ಕ್ಷೇತ್ರದಲ್ಲೂ ತಮ್ಮ ಆಸ್ತಿತ್ವ ಪ್ರತಿಪಾದಿಸಿದ್ದಾರೆ. ಅವರ ಪರಿಶುದ್ಧ ಜೀವನ ಚರಿತ್ರೆ, ಶ್ರೇಷ್ಠ ಬರಹ, ವಿಚಾರ, ಚಿಂತನೆಗಳು ನಮಗೆ ದಾರಿದೀಪವಾಗಿವೆ ಎಂದು ಬಣ್ಞಿಸಿದರು.

ಸಂಸ್ಥೆಯ ಸಿಇಒ ಆಯ್.ಬಿ.ಬೆನಕೊಪ್ಪ ಮಾತನಾಡಿ, ಶರಣ ಮಂಜಪ್ಪ ಹರ್ಡೇಕರ ಅವರ ಬಹುಮುಖ ಚರಿತ್ರೆ ಎಲ್ಲರೂ ಅರಿಯಬೇಕು. ದಯೆ, ಸತ್ಯ, ಧೈರ್ಯ ಸ್ವಭಾವಕ್ಕನುಗುಣವಾಗಿ ಅವರ ಕಾಯಕಗಳು ಸಾಗಿವೆ. ಸೌಮ್ಯೋಕ್ತಿ ಭಾವದ ಮಂಜಪ್ಪನವರು ರಾಷ್ಟ್ರನಿಷ್ಟೆಯ ಮಹಾಚೇತನ ಜೀವ. ತಮ್ಮ ತನು,ಮನ,ಭಾವಗಳೆಲ್ಲ ಸಮಾಜಕ್ಕೆ ಮೀಸಲಿರಿಸಿದ ಮಹಾನುಭಾವರು ಎಂದರು.

ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ವಿಜಯಪುರ ಜಿಲ್ಲಾ ಕೇಂದ್ರ ಕಚೇರಿಯ ವಿಷಯ ಪರಿವೀಕ್ಷಕ ಎಸ್.ಎಸ್.ತಳ್ಳೊಳ್ಳಿ ಹಾಗೂ ಮುಳಸಾವಳಗಿ ಸರ್ಕಾರಿ ಪ್ರೌಢಶಾಲೆಯ ಮುಖ್ಯಶಿಕ್ಷಕ ಐ.ಎಸ್.ನೂರಾಣಿ ಮಂಜಪ್ಪನವರ ಕಂಚಿನ ಪುತ್ಥಳಿಗೆ ಹೂಮಾಲೆ ಹಾಕಿ ನಮಿಸಿ ಗೌರವ ಸಲ್ಲಿಸಿದರು.

ಗದುಗಿನ ಕಲ್ಯಾಣ ವಾಣಿ ಪತ್ರಿಕೆ ಸಂಪಾದಕ ಕೋಟ್ರೇಶ ಮೆಣಸಿನಕಾಯಿ, ತೋಂಟದಾರ್ಯ ವಿದ್ಯಾಪೀಠ ಶಿಕ್ಷಣ ಸಂಸ್ಥೆಗಳ ಸಿಬ್ಬಂದಿ ಎಸ್.ಎಸ್.ನೀಲಗುಂದ, ಅಶೋಕ ಇಲಕಲ್, ಈರಣ್ಣ ಗುರುಪುತ್ರಪ್ಪನವರ, ಆಲಮಟ್ಟಿ ಎಂ.ಎಚ್.ಎಂ.ಪಪೂ ಕಾಲೇಜು ಪ್ರಾಚಾರ್ಯ ಪ್ರಭುಸ್ವಾಮಿ ಹೇಮಗಿರಿಮಠ, ಡಿಗ್ರಿ ಕಾಲೇಜು ಪ್ರಾಚಾರ್ಯ ಎಚ್.ಎನ್.ಕೆಲೂರ, ಮುಖ್ಯ ಶಿಕ್ಷಕ ಜಿ.ಎಂ.ಕೋಟ್ಯಾಳ, ಎಸ್.ಆಯ್.ಗಿಡ್ಡಪ್ಪಗೋಳ,ಉಪನ್ಯಾಸಕರಾದ ಪಿ.ವೈ.ಧನಶೆಟ್ಟಿ, ಎಂ.ಎಸ್.ಸಜ್ಜನ, ಮಮತಾ ಕರೆಮುರಗಿ, ಎನ್.ಎಸ್.ಬಿರಾದಾರ, ಜಿ.ಆರ್.ಜಾಧವ, ಎಂ.ಎಚ್.ಬಳಬಟ್ಟಿ, ಶಾಂತೂ ತಡಸಿ, ಶಿಕ್ಷಣ ಪ್ರೇಮಿ,ಸಂಸ್ಥೆಯ ಹಿತೈಸಿ ಬಸಯ್ಯ ಶಿವಯೋಗಿಮಠ ಮೊದಲಾದವರಿದ್ದರು.