ಗಾಂಧಿ ಜಯಂತಿ: ವಿವಿಧ ವಿಭಾಗಗಳಲ್ಲಿ ಮಕ್ಕಳಿಗೆ ಸ್ಪರ್ಧೆ

| Published : Oct 05 2024, 01:41 AM IST

ಗಾಂಧಿ ಜಯಂತಿ: ವಿವಿಧ ವಿಭಾಗಗಳಲ್ಲಿ ಮಕ್ಕಳಿಗೆ ಸ್ಪರ್ಧೆ
Share this Article
  • FB
  • TW
  • Linkdin
  • Email

ಸಾರಾಂಶ

ತರೀಕೆರೆ, ಪಟ್ಟಣದ ರೋಟರಿ ಕ್ಲಬ್, ಇನ್ನರ್ ವ್ಹೀಲ್ ಕ್ಲಬ್, ಹಾಗೂ ರೋಟರಿ ವಿದ್ಯಾಸಂಸ್ಥೆಯಲ್ಲಿ 155ನೇ ಮಹಾತ್ಮ ಗಾಂಧೀಜಿ ಹಾಗೂ 120ನೇ ಲಾಲ್ ಬಹದ್ದೂರ್ ಶಾಸ್ತ್ರಿ ಜನ್ಮದಿನಾಚರಣೆಯಲ್ಲಿ ವಿವಿಧ ವಿಭಾಗಗಳಲ್ಲಿ ಮಕ್ಕಳಿಗೆ ನಡೆಸಿದ ಸ್ಪರ್ಧೆಯಲ್ಲಿ ವಿಜೇತರಿಗೆ ಬಹುಮಾನ ವಿತರಿಸಲಾಯಿತು.

ನಗರದ ವಿವಿಧ ಶಾಲೆಗಳಿಂದ 92 ವಿದ್ಯಾರ್ಥಿಗಳು ಭಾಗಿ

ಕನ್ನಡಪ್ರಭ ವಾರ್ತೆ, ತರೀಕೆರೆ

ಪಟ್ಟಣದ ರೋಟರಿ ಕ್ಲಬ್, ಇನ್ನರ್ ವ್ಹೀಲ್ ಕ್ಲಬ್, ಹಾಗೂ ರೋಟರಿ ವಿದ್ಯಾಸಂಸ್ಥೆಯಲ್ಲಿ 155ನೇ ಮಹಾತ್ಮ ಗಾಂಧೀಜಿ ಹಾಗೂ 120ನೇ ಲಾಲ್ ಬಹದ್ದೂರ್ ಶಾಸ್ತ್ರಿ ಜನ್ಮದಿನಾಚರಣೆಯಲ್ಲಿ ವಿವಿಧ ವಿಭಾಗಗಳಲ್ಲಿ ಮಕ್ಕಳಿಗೆ ನಡೆಸಿದ ಸ್ಪರ್ಧೆಯಲ್ಲಿ ವಿಜೇತರಿಗೆ ಬಹುಮಾನ ವಿತರಿಸಲಾಯಿತು.ನಗರದ ವಿವಿಧ ಶಾಲೆಗಳಿಂದ 92 ವಿದ್ಯಾರ್ಥಿಗಳು ಭಾಗವಹಿಸಿದ್ದರು. 1 ರಿಂದ 4ನೇ ತರಗತಿ ಮಕ್ಕಳ ವೇಷಭೂಷಣ ಸ್ಪರ್ಧೆಯಲ್ಲಿ ವಿಸ್ಮಿತ ಯು, ಧ್ರುವ ಟಿ ಎಂ ಪ್ರಥಮ ,ದ್ವಿತೀಯ ಸ್ಥಾನ ಅರುಣೋದಯ ಶಾಲೆ,ತೃತೀಯ ಬಹುಮಾನವನ್ನು ಚಂದನ ರೋಟರಿ ಶಾಲೆ ಪಡೆದುಕೊಂಡಿತು.

5 ರಿಂದ 7ನೇ ತರಗತಿ ಮಕ್ಕಳ ವಿಭಾಗದಲ್ಲಿ ಗಾಂಧಿ ಮತ್ತು ಶಾಸ್ತ್ರಿ ಅವರ ಚಿತ್ರ ಬಿಡಿಸುವ ಸ್ಪರ್ಧೆಯಲ್ಲಿ ಪ್ರಬುದ್ಧ, ಯಶಸ್ ಮತ್ತು ಖುಷಿ ಎಂ. ಕೆ. ಅರುಣೋದಯ ಶಾಲೆ ಮಕ್ಕಳು ಕ್ರಮವಾಗಿ ಪ್ರಥಮ ದ್ವಿತೀಯ, ತೃತೀಯ ಬಹುಮಾನ ಪಡೆದರು.

8 ರಿಂದ 10ನೇ ತರಗತಿ ವರೆಗಿನ ಮಕ್ಕಳಿಗೆ ಗಾಂಧೀಜಿ ಮತ್ತು ಶಾಸ್ತ್ರಿ ಬಗ್ಗೆ ನಡೆದ ಪ್ರಬಂಧ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ಅರುಣೋದಯ ಶಾಲೆ ಅಕ್ಷತಾ ಯು, ದ್ವಿತೀಯ ತೃತೀಯ ಹಾಗೂ ಸಮಾಧಾನಕರ ಬಹುಮಾನಗಳನ್ನು ಆರಾಧನ ಶಾಲೆ ಮಕ್ಕಳಾದ ಸೋನು, ಚೈತ್ರ ,ಮಾಹಿನ ಎಂಬ ವಿದ್ಯಾರ್ಥಿಗಳು ಪಡೆದರು.

ಭಾಗವಹಿಸಿದ ಎಲ್ಲಾ ಮಕ್ಕಳಿಗೆ ಸಮಾಧಾನಕರ ಬಹುಮಾನ ನೀಡಲಾಯಿತು. ರೋಟರಿ ಕ್ಲಬ್ ಅಧ್ಯಕ್ಷ . ರೊ. ಜೇಸಿ ಅಧ್ಯಕ್ಷತೆ ವಹಿಸಿದ್ದರು. ವಿದ್ಯಾಸಂಸ್ಥೆ ಕಾರ್ಯದರ್ಶಿ ಡಾ. ರೊ. ಜೇಸಿ. ಶರತ್, ಕಾರ್ಯದರ್ಶಿ ಬಿ. ಪಿ. ರವಿಕುಮಾರ್, ವಿದ್ಯಾಸಂಸ್ಥೆ ಅಧ್ಯಕ್ಷ ರೊ. ಪ್ರವೀಣ್ ನಾಹರ್ ಸದಸ್ಯರಾದ ಡಾ. ಎಸ್. ಎನ್. ಆಚಾರ್ಯ, ಪಿ. ನಾಗರಾಜ್, ಬಿ. ಇ. ಕುಮಾರಪ್ಪ, ಪಿ. ಬಿ. ಗೋವರ್ಧನ್, ಜಯರಾಂ, ಇನ್ನರ್ ವ್ಹೀಲ್ ಕ್ಲಬ್ ನ ಅಧ್ಯಕ್ಷೆ ಉಮಾದೇವಿ ದಯಾನಂದ್, ಕಾರ್ಯದರ್ಶಿ ಸುನಿತ ಕಿರಣ್, ಸದಸ್ಯರಾದ ಶಿಬಿಜಾ ಗೋವರ್ಧನ್, ಭವಾನಿ ರೇವಣ್ಣ, ಶಾಲೆ ಶಿಕ್ಷಕಿ ಸಾವಿತ್ರಮ್ಮ, ದೈಹಿಕ ಶಿಕ್ಷಕ ಮಲ್ಲೇಶಪ್ಪ, ಶಾಲೆ ಮುಖ್ಯೋಪಾಧ್ಯಾಯ ಸಿ.ಟಿ.ಶ್ರೀನಿವಾಸ ಭಾಗವಹಿಸಿದ್ದರು.3ಕೆಟಿರ್.ಕೆ.1ಃ

ತರೀಕೆರೆಯಲ್ಲಿ ರೋಟರಿ ಕ್ಲಬ್, ಇನ್ನರ್ ವ್ಹೀಲ್ ಕ್ಲಬ್, ಹಾಗೂ ರೋಟರಿ ವಿದ್ಯಾಸಂಸ್ಥೆ, ಇವರ ಸಂಯುಕ್ತ ಆಶ್ರಯದಲ್ಲಿ 155ನೇ ಮಹಾತ್ಮ ಗಾಂಧೀಜಿಯವರ ಹಾಗೂ 120ನೇ ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಜನ್ಮದಿನಾಚರಣೆಯನ್ನು ಶಾಲೆಯಲ್ಲಿ ಆಚರಿಸಲಾಯಿತು.