ಸಾರಾಂಶ
ಗಾಂಧಿ ಮತ್ತು ಶಾಸ್ತ್ರಿ ಜಯಂತಿಯಲ್ಲಿ ಖುರೇಷಿ(ಕಸಾಬ್) ಸಮಾಜ ಕಲ್ಯಾಣ ಸಂಘದಿಂದ ಮುಖಂಡರನ್ನು ಸನ್ಮಾನಿಸಲಾಯಿತು.
ಕನ್ನಡಪ್ರಭ ವಾರ್ತೆ ಕವಿತಾಳ
ಪಟ್ಟಣದ ಖುರೇಷಿ (ಕಸಾಬ್) ಸಮಾಜ ಕಲ್ಯಾಣ ಸಂಘದ ವತಿಯಿಂದ ಮಹತ್ಮ ಗಾಂಧಿ ಮತ್ತು ಲಾಲ್ ಬಹುದ್ದೂರ್ ಶಾಸ್ತ್ರಿಜೀ ಯವರ ಜಯಂತಿ ಆಚರಿಸಲಾಯಿತು.ಮಹನೀಯರ ಭಾವಚಿತ್ರಕ್ಕೆ ಸಮಾಜದ ಮುಖಂಡರು ಮಾಲಾರ್ಪಣೆ ಮಾಡಿದರು. ಸಿರವಾರ ತಾಲೂಕ ಭೂ ನ್ಯಾಯ ಮಂಡಳಿ ಸದಸ್ಯ ಇಮ್ತಿಯಾಜ್ ವಕೀಲ ಮತ್ತು ಮುಖಂಡರಾದ ಚಾಂದ ಪಾಷಾ, ಓವಣ್ಣ ಅವರನ್ನು ಖುರೆಷಿ ಸಮಾಜ ಕಲ್ಯಾಣ ಸಂಘದ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.
ಈ ವೇಳೆ ಗೌರವಾಧ್ಯಕ್ಷರಾದ ಕೆ.ಸಬ್ಜಲಿ ಸಾಬ್, ಸಂಘದ ಅಧ್ಯಕ್ಷ ಸದ್ದಾಂ ಹುಸೇನ, ಮಹಮ್ಮದ, ಮಹಮ್ಮದ ವಕ್ರಾಣಿ, ಹುಸೇನ ಸಾಬ, ಲಾಳೆಸಾಬ, ಬಂದೇನವಜ, ಶಮಿದ, ರಹಮಾನ, ಖಾಜಾ, ಮೂರ್ತುಜ, ಶೋಹಿಲ್, ಶಬ್ಬೀರ, ಫಯಾಜ, ರಿಯಾಜ, ರಜಾಕ, ಫರೀದ, ಎಡಿಎಂ ಅಪ್ಸರ್, ಅನ್ಸರ್, ಲಾಲೆಸಾಬ ನಾಯಕ ಹಾಗೂ ಸಮಾಜದ ಮುಖಂಡರಿದ್ದರು.