ಸಾರಾಂಶ
ಗಾಂಧಿ ಶಾಂತಿಯುತ ಹೋರಾಟ ಮಾಡಿ ದೇಶಕ್ಕೆ ಸ್ವಾತಂತ್ರ್ಯ ತಂದು ಕೊಡುವಲ್ಲಿ ಮಹತ್ವದ ಪಾತ್ರ ವಹಿಸಿದ್ದಾರೆ
ಕನಕಗಿರಿ: ನವ ಭಾರತ ನಿರ್ಮಾಣಕ್ಕೆ ರಾಷ್ಟ್ರಪಿತ ಮಹಾತ್ಮ ಗಾಂಧಿ ಹಾಗೂ ಮಾಜಿ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರಿ ಕೊಡುಗೆ ಅಪಾರ ಎಂದು ತಾಪಂ ಇಒ ರಾಜಶೇಖರ ಹೇಳಿದರು.
ಅವರು ಇಲ್ಲಿನ ತಾಪಂ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಗಾಂಧಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರೀ ಜಯಂತಿ ಅಂಗವಾಗಿ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾತನಾಡಿದರು.ಗಾಂಧಿ ಶಾಂತಿಯುತ ಹೋರಾಟ ಮಾಡಿ ದೇಶಕ್ಕೆ ಸ್ವಾತಂತ್ರ್ಯ ತಂದು ಕೊಡುವಲ್ಲಿ ಮಹತ್ವದ ಪಾತ್ರ ವಹಿಸಿದ್ದಾರೆ. ಅಲ್ಲದೇ ಶಾಸ್ತ್ರೀಯೂ ಸಹ ದೇಶದ 2ನೇ ಪ್ರಧಾನಿಯಾಗಿ ಜನಪರ ಆಡಳಿತ ನೀಡಿದ್ದಾರೆ.ಇಂತಹ ಧೀಮಂತರ ವಿಚಾರಗಳು ಎಂದಿಗೂ ಪ್ರಸ್ತುತ ಎಂದರು.
ಈ ವೇಳೆ ತಾಲೂಕು ಯೋಜನಾಧಿಕಾರಿ ಡಾ.ಹುಲುಗಪ್ಪ, ವಿಷಯ ನಿರ್ವಾಹಕಿ ಹನುಮವ್ವ, ಸಿಬ್ಬಂದಿ ರಹೀಂಸಾಬ್, ಹುಲುಗಪ್ಪ, ಶಿವಕುಮಾರ ಇತರರಿದ್ದರು.