ಸಾರಾಂಶ
ಈ ಪ್ರಶಸ್ತಿ ಐದು ಲಕ್ಷ ರೂ. ನಗದನ್ನು ಒಳಗೊಂಡಿರುತ್ತದೆ. ಗಾಂಧಿ ಗ್ರಾಮ ಪುರಸ್ಕಾರವು ಗ್ರಾ.ಪಂ.ಗಳಿಗೆ ಪ್ರೇರಣೆಯ ಸಂಕೇತವಾಗಿದೆ. ಈ ಪುರಸ್ಕಾರದ ವಿಳಂಬವು ಗ್ರಾಮೀಣ ಭಾಗದ ಅಭಿವೃದ್ಧಿ ಕರ‍್ಯಗಳ ಮೇಲೆ ನಕಾರಾತ್ಮಕ ಪರಿಣಾಮ ಬೀರಬಹುದು. ಈ ನಿಟ್ಟಿನಲ್ಲಿ ಸರಕಾರವು ಬಗ್ಗೆ ಗಮನ ಹರಿಸಿ, ಶೀಘ್ರ ಕ್ರಮವಹಿಸಬೇಕು.
ಕನ್ನಡಪ್ರಭ ವಾರ್ತ ಚೇಳೂರು ಪ್ರತಿ ವರ್ಷ ಗಾಂಧಿ ಜಯಂತಿ ಪ್ರಯುಕ್ತ ಕೊಡುವ ಗಾಂಧಿ ಗ್ರಾಮ ಪುರಸ್ಕಾರವನ್ನು ಈ ಬಾರಿ ವಿವಿಧ ಕಾರಣಗಳಿಂದ ಗ್ರಾಪಂಗಳಿಗೆ ಇನ್ನೂ ಘೋಷಿಸಿಲ್ಲ. ಗಾಂಧಿ ಜಯಂತಿ ಮುಗಿದು ಒಂದು ತಿಂಗಳು ಕಳೆಯುತ್ತಾ ಬಂದರೂ ಗಾಂಧಿ ಗ್ರಾಮ ಪುರಸ್ಕಾರ ಗ್ರಾಪಂಗಳಿಗೆ ಸಿಕ್ಕಿಲ್ಲ.ಸರ್ಕಾರದ ಈ ವಿಳಂಬದಿಂದಾಗಿ ಗ್ರಾಪಂಗಳು ನಿರಾಶೆಗೊಂಡಿವೆ. ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಇಲಾಖೆಯು ಈ ಸಂಬಂಧ ಯಾವುದೇ ಅಧಿಕೃತ ಮಾಹಿತಿ ನೀಡುತ್ತಿಲ್ಲ.ಗ್ರಾಪಂಗೆ ಪ್ರತಿಷ್ಠಿತ ಪ್ರಶಸ್ತಿ
ಗಾಂಧಿ ಗ್ರಾಮ ಪುರಸ್ಕಾರವು ರಾಜ್ಯದ ಗ್ರಾಮ ಪಂಚಾಯತಿಗಳಲ್ಲಿನ ಅಭಿವೃದ್ಧಿ ಕಾರ್ಯಗಳನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ಸರ್ಕಾರ ನೀಡುವ ಪ್ರತಿಷ್ಠಿತ ಪ್ರಶಸ್ತಿಯಾಗಿದೆ. ಸ್ವತ್ಛತೆ, ಆರೋಗ್ಯ, ಶಿಕ್ಷಣ, ಕುಡಿಯುವ ನೀರು ಸರಬರಾಜು ಮುಂತಾದ ಕ್ಷೇತ್ರಗಳಲ್ಲಿ ಗಮನಾರ್ಹ ಸಾಧನೆ ಮಾಡಿರುವ ಗ್ರಾಮ ಪಂಚಾಯತಿಗಳಿಗೆ ಈ ಪ್ರಶಸ್ತಿ ನೀಡಲಾಗುತ್ತದೆ. ಈ ಪ್ರಶಸ್ತಿ ಐದು ಲಕ್ಷ ರೂ. ನಗದನ್ನು ಒಳಗೊಂಡಿರುತ್ತದೆ. ಗಾಂಧಿ ಗ್ರಾಮ ಪುರಸ್ಕಾರವು ಗ್ರಾ.ಪಂ.ಗಳಿಗೆ ಪ್ರೇರಣೆಯ ಸಂಕೇತವಾಗಿದೆ. ಈ ಪುರಸ್ಕಾರದ ವಿಳಂಬವು ಗ್ರಾಮೀಣ ಭಾಗದ ಅಭಿವೃದ್ಧಿ ಕರ‍್ಯಗಳ ಮೇಲೆ ನಕಾರಾತ್ಮಕ ಪರಿಣಾಮ ಬೀರಬಹುದು. ಈ ನಿಟ್ಟಿನಲ್ಲಿ ಸರಕಾರವು ಬಗ್ಗೆ ಗಮನ ಹರಿಸಿ, ಶೀಘ್ರ ಕ್ರಮವಹಿಸಬೇಕು. ಆಗಸ್ಟ್‌ನಲ್ಲೇ ನೀಡಬೇಕಿತ್ತುಆಗಸ್ಟ್ ಎರಡನೇ ತಾರೀಖು ಗಾಂಧಿ ಗ್ರಾಮ ಪುರಸ್ಕಾರ ಪ್ರದಾನ ಮಾಡಬೇಕಾಗಿತ್ತು. ಆದರೆ ಗ್ರಾಮ ಪಂಚಾಯಿತಿ ಅಧಿಕಾರಿಗಳು, ನೌಕರರು, ಸದಸ್ಯರು ಪ್ರತಿಭಟನೆ ಹಾಗೂ ವಿಧಾನಪರಿಷತ್ ಕೆಲವು ಸ್ಥಾನಗಳಿಗೆ ಚುನಾವಣೆ ಘೋಷಣೆಯಾದ ಹಿನ್ನೆಲೆಯಲ್ಲಿ ಪ್ರಶಸ್ತಿ ಸಮಾರಂಭ ವಿಳಂಬವಾಗಿದೆ ಎನ್ನಲಾಗಿದೆ.ಆಯ್ಕೆಯಾದ ಗ್ರಾಂಪಂಗಳು
ಬಾಗೇಪಲ್ಲಿ ತಾಲೂಕಿನಲ್ಲಿ ಗೂಳೂರು ಗ್ರಾಂ ಪಂಚಾಯತಿ. ಚೇಳೂರು ತಾಲೂಕಿನ ಏನಿಗದಲೆ ಗ್ರಾಂಪ, ಚಿಕ್ಕಬಳ್ಳಾಪುರ ತಾಲೂಕು ಕುಪ್ಪಳ್ಳಿ ಗ್ರಾಂಪ, ಚಿಂತಾಮಣಿ ತಾಲೂಕಿನ ಊಲವಾಡಿ ಗ್ರಾಪಂ, ಗೌರಿಬಿದನೂರಿನ ತೊಂಡೆಬಾವಿ ಗ್ರಾಂಪ, ಮಂಚೇನಹಳ್ಳಿ ಗ್ರಾಂಪ, ಶಿಡ್ಲಘಟ್ಟ ತಾಲೂಕಿನ ಆನೂರು ಗ್ರಾಂಪ, ಗುಡಿಬಂಡೆ ತಾಲೂಕಿನ ಹಂಪಸಂದ್ರ ಗ್ರಾಂಪ ಪ್ರಶಸ್ತಿಗೆ ಆಯ್ಕೆಯಾಗಿವೆ..