ಸಾರಾಂಶ
ವಿಜಯಪುರ: ಮಹಾತ್ಮ ಗಾಂಧೀಜಿ ನೇತೃತ್ವದ ಹೋರಾಟದ ಫಲದಿಂದ ನಾವಿಂದು ಸ್ವಾತಂತ್ರ್ಯ ಅನುಭವಿಸುತ್ತಿದ್ದೇವೆ. ಗಾಂಧೀಜಿ ತ್ಯಾಗ, ಬಲಿದಾನಗಳು ಸದಾ ಆದರ್ಶಪ್ರಾಯ ಎಂದು ಪುರಸಭಾ ಮುಖ್ಯಾಧಿಕಾರಿ ಸತ್ಯನಾರಾಯಣ ತಿಳಿಸಿದರು.
ವಿಜಯಪುರ: ಮಹಾತ್ಮ ಗಾಂಧೀಜಿ ನೇತೃತ್ವದ ಹೋರಾಟದ ಫಲದಿಂದ ನಾವಿಂದು ಸ್ವಾತಂತ್ರ್ಯ ಅನುಭವಿಸುತ್ತಿದ್ದೇವೆ. ಗಾಂಧೀಜಿ ತ್ಯಾಗ, ಬಲಿದಾನಗಳು ಸದಾ ಆದರ್ಶಪ್ರಾಯ ಎಂದು ಪುರಸಭಾ ಮುಖ್ಯಾಧಿಕಾರಿ ಸತ್ಯನಾರಾಯಣ ತಿಳಿಸಿದರು.
ಪಟ್ಟಣದ ಪುರಸಭಾ ಕಚೇರಿಯಲ್ಲಿ ಆಯೋಜಿಸಿದ್ದ ಗಾಂಧಿ ಜಯಂತಿ ಹಾಗೂ ಮಾಜಿ ಪ್ರಧಾನಮಂತ್ರಿ ಲಾಲ್ ಬಹದ್ದೂರ್ ಶಾಸ್ತ್ರಿ ಜನ್ಮದಿನದ ಪ್ರಯುಕ್ತ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡಿದ ಅವರು, ಗಾಂಧೀಜಿ ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಎಲ್ಲಾ ಸೌಲಭ್ಯ ದೊರಕಬೇಕು ಎಂಬ ಆಶಯ ಹೊಂದಿದ್ದರು. ಸಮಾಜದ ಸವಾಂಗೀಣ ಅಭಿವೃದ್ಧಿ ಹಾಗೂ ಜಾತ್ಯತೀತ ಮನೋಭಾವ ಇರಬೇಕೆಂಬುದು ಅವರ ಆಶಯವಾಗಿತ್ತು ಎಂದರು.ಪುರಸಭಾಧ್ಯಕ್ಷೆ ಭವ್ಯ ಮಹೇಶ್ ಮಾತನಾಡಿ, ಮಹಾತ್ಮ ಗಾಂಧೀಜಿ, ಭಾರತ ಇತಿಹಾಸದಲ್ಲಿ ಸ್ಪೂರ್ತಿದಾಯಕ ವ್ಯಕ್ತಿಗಳಲ್ಲಿ ಒಬ್ಬರು. ಶಾಂತಿಯಿಂದ ಮಾತ್ರ ಸ್ವಾತಂತ್ರ್ಯ ಸಾಧ್ಯ ಎಂದು ಹೋರಾಡಿದವರಲ್ಲಿ ಗಾಂಧೀಜಿ ಮೊದಲಿಗರು. ಬ್ರಿಟಿಷರ ವಿರುದ್ಧ ಸ್ವಾತಂತ್ರ್ಯಕ್ಕಾಗಿ ಹೋರಾಡಿ, ಅಹಿಂಸೆಯ ಸಿದ್ಧಾಂತಗಳಿಂದ ಗಮನ ಸೆಳೆದ ಮಹಾ ವ್ಯಕ್ತಿ ಗಾಂಧೀಜಿ ಆದರ್ಶಗಳು, ಸತ್ಯ, ಅಹಿಂಸೆಯ ಬೋಧನೆ ಹಾಗೂ ಅವರ ಜೀವನ ಆಚರಣೆ ಗಾಂಧೀಜಿಯನ್ನು ಅಜರಾಮರವಾಗಿಸಿವೆ ಎಂದರು.
ಕಾರ್ಯಕ್ರಮದಲ್ಲಿ ಆಯುಧ ಪೂಜೆ ಅಂಗವಾಗಿ ಪುರಸಭೆಯ ಎಲ್ಲಾ ವಾಹನಗಳಿಗೂ ವಿಶೇಷ ಪೂಜೆ ಮಾಡಲಾಯಿತು. ಪುರಸಭಾ ಮುಖ್ಯಾಧಿಕಾರಿ ಶೇಖರ್, ಸದಸ್ಯರಾದ ಶಿಲ್ಪ ಅಜಿತ್, ನಂದಕುಮಾರ್, ಕವಿತಾ, ಬೈರೇಗೌಡ, ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷ ನಾರಾಯಣಸ್ವಾಮಿ, ರವಿಕುಮಾರ್, ಪುರಸಭಾ ಸಿಬ್ಬಂದಿ ಜನಾರ್ದನ್, ಜೋಷಿ ಹಾಗೂ ಪೌರಕಾರ್ಮಿಕರು ಇತರರು ಹಾಜರಿದ್ದರು.