ಸಾರಾಂಶ
ಬ್ಯಾಡಗಿ: ತಾಲೂಕಿನಾದ್ಯಂತ ಗೌರಿ ಗಣೇಶ ಹಬ್ಬವನ್ನು ಸಡಗರ, ಸಂಭ್ರಮ ಹಾಗೂ ವಿಜೃಂಭಣೆ ಸೇರಿದಂತೆ ಭಕ್ತಿಪೂರ್ವಕವಾಗಿ ಬುಧವಾರ ಬರಮಾಡಿಕೊಂಡು ನಗರ ಹಾಗೂ ಗ್ರಾಮೀಣ ಭಾಗದಲ್ಲಿ ಪ್ರತಿಷ್ಠಾಪನೆ ಮಾಡಲಾಯಿತು.
ಗಣೇಶ ಹಬ್ಬ ಎಂದರೆ ಎಲ್ಲೆಲ್ಲೂ ಸಡಗರ ಹಾಗೂ ಸಂಭ್ರಮ ಮನೆಮಾಡಿರುತ್ತದೆ. ಈ ವರ್ಷವೂ ಸಂಭ್ರಮ ಕಳೆ ದುಪ್ಪಟ್ಟುಗೊಂಡಿದ್ದು, ಎಲ್ಲೆಲ್ಲೂ ಹಬ್ಬದ ಸಡಗರ ತುಸು ಹೆಚ್ಚೆ ಎಂಬಂತೆ ಕಂಡುಬಂದಿತು.ಕುಗ್ಗದ ಉತ್ಸಾಹ: ಪಟ್ಟಣದ ವಿವಿಧ ವಾರ್ಡ್‌ಗಳಲ್ಲಿ ಸುಮಾರು 20ಕ್ಕೂ ಹೆಚ್ಚು ಸಾರ್ವಜನಿಕ ಗಣಪತಿ ಪ್ರತಿಷ್ಠಾಪನೆ ಮಾಡಲಾಗಿದ್ದು, ಡಿಜೆ ನಿಷೇಧದ ನಡುವೆಯೂ ಬುಧವಾರ ಸಂಜೆಯಿಂದ ಪಟ್ಟಣದಲ್ಲಿ ವಿವಿಧ ಜಾಂಜ್, ಮೇಳ, ಡೊಳ್ಳು ಸೇರಿದಂತೆ ಪಟಾಕಿ ಹೊಡೆಯುತ್ತ ಯುವಕರು ಮಕ್ಕಳು ಎನ್ನದೇ ಎಲ್ಲ ವಯೋಮಾನದವರು ಮೆರವಣಿಗೆಯಲ್ಲಿ ಕುಣಿದು ಕುಪ್ಪಳಿಸಿದರು.ಗ್ರಾಮೀಣ ಭಾಗದಲ್ಲಿ ಸಂಭ್ರಮ: ತಾಲೂಕಿನ ಮೋಟೆಬೆನ್ನೂರ ಬಿಸಲಹಳ್ಳಿ, ಚಿಕ್ಕಬಾಸೂರ ಸೇರಿದಂತೆ ಬಹುಕೇತ ಗ್ರಾಮಗಳಲ್ಲಿ ಗಣೇಶೋತ್ಸವವನ್ನು ಪಟಾಕಿ ಸಿಡಿಸಿ ಸಂಭ್ರಮದಿಂದ ಆಚರಣೆ ಮಾಡಲಾಯಿತು.ನಾಳೆ ಹಾವೇರಿಯಲ್ಲಿ ಜೈ ಮಾನವ ಸಮಾವೇಶ
ಹಾವೇರಿ: ನಗರದ ಶಿವಶಕ್ತಿ ಪ್ಯಾಲೇಸ್‌ನಲ್ಲಿ ಆ. 30ರಂದು ಮಧ್ಯಾಹ್ನ 3ಕ್ಕೆ ಜೈ ಮಾನವ ಸಮಾವೇಶ ಹಾಗೂ ಕಲ್ಯಾಣ ಸಂಘದ ಉದ್ಘಾಟನೆ ನಡೆಯಲಿದೆ ಎಂದು ಮೇಕ್ ವೇಲ್‌ಫೇರ್ ಫೌಂಡೇಶನ್‌ನ ವ್ಯವಸ್ಥಾಪಕ ನಿರ್ದೇಶಕ ಮೌಲಾನ ಮುಸ್ತಫ ರಝಾ ನಈಮಿ ತಿಳಿಸಿದರು.ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಉತ್ತರ ಕರ್ನಾಟಕದ ಹಾವೇರಿ ಜಿಲ್ಲೆಯನ್ನು ಕೇಂದ್ರೀಕರಿಸಿ ಮೇಕ್ ಫೌಂಡೇಶನ್ ಶೈಕ್ಷಣಿಕ ಸೇವೆ ಮಾಡುತ್ತಿದೆ. ಜಾತಿ ಧರ್ಮ ಭೇದಭಾವ ಇಲ್ಲದೆ ಫೌಂಡೇಶನ್ ಜಿಲ್ಲೆಯಲ್ಲಿ ಮೂರು ಶಿಕ್ಷಣ ಸಂಸ್ಥೆಗಳನ್ನು ದತ್ತು ಪಡೆದುಕೊಂಡು ಮುನ್ನಡೆಸುತ್ತಿದೆ. ಇದೀಗ ಮಾನವೀಯ ಮೌಲ್ಯಗಳನ್ನು ಎತ್ತಿ ಹಿಡಿಯುವ ಸಲುವಾಗಿ ಜೈ ಮಾನವ ಸಮಾವೇಶ ಹಾಗೂ ಜೈ ಮಾನವ ಕಲ್ಯಾಣ ಸಂಘದ ಲೋರ್ಕಾಪಣೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದರು.ಸಮಾವೇಶದಲ್ಲಿ ಸವಣೂರು ದೊಡ್ಡಹುಣಸೇ ಕಲ್ಮಠದ ಚನ್ನಬಸವ ಸ್ವಾಮೀಜಿ, ಹುಕ್ಕೇರಿಮಠದ ಸದಾಶಿವ ಸ್ವಾಮೀಜಿ, ಅಗಡಿ ಅಕ್ಕಿಮಠದ ಗುರುಲಿಂಗ ಸ್ವಾಮೀಜಿ ನೇತೃತ್ವ ವಹಿಸಲಿದ್ದಾರೆ. ವಿಧಾನಸಭೆ ಉಪಸಭಾಧ್ಯಕ್ಷ, ಶಾಸಕ ರುದ್ರಪ್ಪ ಲಮಾಣಿ ಅಧ್ಯಕ್ಷತೆ ವಹಿಸಲಿದ್ದಾರೆ.ವಿಧಾನಸಭೆ ಸ್ಪೀಕರ್ ಯು.ಟಿ. ಖಾದರ್ ಸಂಘಟನೆಯನ್ನು ಉದ್ಘಾಟಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಜಿಲ್ಲಾ ಉಸ್ತುವಾರಿ ಸಚಿವ ಶಿವಾನಂದ ಪಾಟೀಲ್, ಅರಣ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷ, ಶಾಸಕ ಬಸವರಾಜ ಶಿವಣ್ಣನವರ, ಶಿಗ್ಗಾಂವಿ ಶಾಸಕ ಯಾಸೀರ್‌ಖಾನ್ ಪಠಾಣ ಸೇರಿದಂತೆ ಜಿಲ್ಲೆಯ ಶಾಸಕರು ಹಾಗೂ ಸ್ಥಳೀಯ ಜನಪ್ರತಿನಿಧಿಗಳು ಭಾಗವಹಿಸಲಿದ್ದಾರೆ ಎಂದರು.
ಸಂಘಟನೆ ಉದ್ಘಾಟನೆಯ ಪೂರ್ವದಲ್ಲಿ ಮಧ್ಯಾಹ್ನ 2ಕ್ಕೆ ಅಕ್ಷರಕೂಟ ಕಾರ್ಯಕ್ರಮ ನಡೆಯಲಿದ್ದು, ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಸಾಹಿತಿ ಸತೀಶ ಕುಲಕರ್ಣಿ ಉದ್ಘಾಟಿಸಲಿದ್ದಾರೆ. ಯೋಗಗುರು ಹಾಗೂ ಮೋಟಿವೇಶನ್ ತರಬೇತುದಾರ ಭಾರತ್ ಮುಸ್ತಫಾ, ಸಾಹಿತಿ ಚನಬಸಪ್ಪ ಮರಳಿಹಳ್ಳಿ, ಉದ್ಯಮಿಗಳಾದ ಡಾ. ಶೇಕ್‌ಬಾವ, ಹಸನ್‌ಪ್ಲೋರ್ ದುಬೈ ಭಾಗವಹಿಸಲಿದ್ದಾರೆ ಎಂದರು.ಇಸ್ಮಾಯಿಲ್‌ಸಾಬ ಕರಿಗಾರ, ಆರ್.ಜಿ. ಗುಡಗೇರಿ, ನಬೀಸಾಬ್ ಮೆಳ್ಳಾಗಟ್ಟಿ, ಜಾವೀದ್ ದೇವಿಹೊಸುರ, ಮಹ್ಮದ್‌ಹುಸೇನ್ ಸೇರಿದಂತೆ ಇತರರು ಇದ್ದರು.