ಸಾರಾಂಶ
Ganesha installation, worship by Muslim family
- ಭಾವ್ಯಕ್ಯತೆ ಸಂದೇಶ ಸಾರಿದ ಶಹಾಪುರದ ಅಬ್ದುಲ್ ನಬಿ ಕುಟುಂಬ
ಕನ್ನಡಪ್ರಭ ವಾರ್ತೆ ಶಹಾಪುರಮುಸ್ಲಿಂ ಕುಟುಂಬವೊಂದು ಹಿಂದೂ ದೇವರು ಗಣೇಶನನ್ನು ಪ್ರತಿಷ್ಠಾಪಿಸಿ ಪೂಜೆ ನಡೆಸಿದ ಪ್ರಕರಣ ಶಹಾಪುರ ತಾಲೂಕಿನ ದೋರನಹಳ್ಳಿ ಗ್ರಾಮದಲ್ಲಿ ಕಂಡು ಬಂದಿದ್ದು, ಅಬ್ದುಲ್ ನಬೀ ಕುಟುಂಬ ಕಳೆದ ಹತ್ತಾರು ವರ್ಷಗಳಿಂದ ಈ ಆಚರಣೆ ನಡೆದುಕೊಂಡು ಬರುತ್ತಿದೆ.
ಶಾಸ್ತ್ರೋಕ್ತವಾಗಿ ಗಣೇಶ ಚತುರ್ಥಿ ಪೂಜೆ ಸಲ್ಲಿಸುತ್ತಾ ಬರುತ್ತಿರುವ ಅಬ್ದುಲ್ ನಬಿ, ದೋರನಹಳ್ಳಿಯಲ್ಲಿ ಚಿಕ್ಕದೊಂದು ಹೋಟೆಲ್ ಇಟ್ಟುಕೊಂಡು ಉಪಜೀವನ ಸಾಗಿಸುತ್ತಿದ್ದಾರೆ. ಗಣೇಶ ಜತೆ ಎಲ್ಲ ಹಿಂದೂ ಹಬ್ಬಗಳನ್ನು ಶ್ರದ್ಧಾ ಭಕ್ತಿಯಿಂದ ಆಚರಿಸುತ್ತ ಬಂದಿದ್ದಾರೆ. ಗಣೇಶನಿಗೆ ಐದು ದಿನಗಳ ಕಾಲ ಕುಟುಂಬ ಸಮೇತವಾಗಿ ನಿತ್ಯವೂ ಮಡಿಯೊಂದಿಗೆ ಪೂಜೆ ಮಾಡುತ್ತಾರೆ.ಹಬ್ಬಗಳು ಭಾವೈಕ್ಯತೆ ಸಂಕೇತಗಳಾಗಿವೆ. ಎಲ್ಲ ಧರ್ಮಗಳು ಮಾನವೀಯ ಮೌಲ್ಯಗಳನ್ನು ಆಧರಿಸಿವೆ. ಹೀಗಾಗಿ ಎಲ್ಲರನ್ನೂ ಒಂದಾಗಿ ಶಾಂತಿ, ಸೌಹಾರ್ದತೆ ಮತ್ತು ಸಾಮರಸ್ಯದಿಂದ ಹಬ್ಬಗಳನ್ನು ಆಚರಿಸಿ ಮಾದರಿಯಾಗಬೇಕು ಎನ್ನುತ್ತಾರೆ ಅಬ್ದುಲ್ ನಬಿ.