ಸಾರಾಂಶ
ನಡುಗೋಡು ಶಾಲೆಯಲ್ಲಿ ಹಳೆವಿದ್ಯಾರ್ಥಿ ಸಂಘ ನಡುಗೋಡು, ಎಂ.ಆರ್.ಪಿ.ಎಲ್ ಮತ್ತು ಜೆಸಿಐ ಗಣೇಶಪುರದ ಸಹಭಾಗಿತ್ವದಲ್ಲಿ ಅಂಗಡಿ ಮಾಲಕರಿಗೆ ಮತ್ತು ಗ್ರಾಮಸ್ಥರಿಗೆ ಕಸದ ಬುಟ್ಟಿ ವಿತರಣಾ ಕಾರ್ಯಕ್ರಮ ನಡೆಯಿತು.
ಕನ್ನಡಪ್ರಭ ವಾರ್ತೆ ಮೂಲ್ಕಿ
ಎಂಆರ್‌ಪಿಎಲ್ ಸಂಸ್ಥೆಯು ಗ್ರಾಮೀಣ ಪ್ರದೇಶದ ಅಭಿವೃದ್ದಿಯ ನಿಟ್ಟಿನಲ್ಲಿ ಸಮಾಜಮುಖಿ ಕಾರ್ಯಗಳನ್ನು ನಡೆಸುತ್ತಿದೆ ಎಂದು ಸಂಸ್ಥೆಯ ಸಿಎಸ್‌ಆರ್ ವಿಭಾಗದ ಪ್ರಬಂಧಕ ನಾಗರಾಜ್ ರಾವ್ ಹೇಳಿದರು.ನಡುಗೋಡು ಶಾಲೆಯಲ್ಲಿ ಹಳೆವಿದ್ಯಾರ್ಥಿ ಸಂಘ ನಡುಗೋಡು, ಎಂ.ಆರ್.ಪಿ.ಎಲ್ ಮತ್ತು ಜೆಸಿಐ ಗಣೇಶಪುರದ ಸಹಭಾಗಿತ್ವದಲ್ಲಿ ನಡೆದ ಅಂಗಡಿ ಮಾಲಕರಿಗೆ ಮತ್ತು ಗ್ರಾಮಸ್ಥರಿಗೆ ಕಸದ ಬುಟ್ಟಿ ವಿತರಣಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಈ ಸಂದರ್ಭ ಸ್ಥಳೀಯ ಅಂಗಡಿ ಮಾಲಕರಿಗೆ ಕಸದ ಬುಟ್ಟಿಯನ್ನು ವಿತರಿಸಲಾಯಿತು.
ಜೆಸಿಐ ಗಣೇಶಪುರದ ಅಧ್ಯಕ್ಷ ವೇಣುಗೋಪಾಲ್ ಅಧ್ಯಕ್ಷತೆ ವಹಿಸಿದ್ದರು. ನಡುಗೋಡು ಹಳೆವಿದ್ಯಾರ್ಥಿ ಸಂಘದ ವತಿಯಿಂದ ನಡುಗೋಡು ಶಾಲಾ ಕಟ್ಟಡ ದುರಸ್ತಿಗೆ ಅನುದಾನ ಒದಗಿಸುವಂತೆ ಎಂ.ಆರ್.ಪಿ.ಎಲ್ ಅಧಿಕಾರಿಯವರಿಗೆ ಮನವಿ ಸಲ್ಲಿಸಲಾಯಿತು.ಕಾರ್ಯಕ್ರಮದಲ್ಲಿ ಕಿನ್ನಿಗೋಳಿಯ ಯುಗಪುರುಷದ ಭುವನಾಭಿರಾಮ ಉಡುಪ, ಹಳೆವಿದ್ಯಾರ್ಥಿ ಸಂಘದ ಅಧ್ಯಕ್ಷ ದೇವಿಪ್ರಸಾದ್ ರೈ, ಜೆಸಿಐ ಸನತ್ ಕುಮಾರ್ ನಾಯಕ್, ದೇವಿಚರಣ್ ಶೆಟ್ಟಿ, ಅರುಣ್, ಮೆನ್ನಬೆಟ್ಟು ಪಂಚಾಯಿತಿ ಮಾಜಿ ಅಧ್ಯಕ್ಷ ಗೋವಿಂದ ಪೂಜಾರಿ ಮತ್ತಿತರರು ಉಪಸ್ಥಿತರಿದ್ದರು. ಹೇಮಂತ್ ಶೆಟ್ಟಿ ಪರಿಸರ ಗೀತೆ ಹಾಡಿದರು. ರಾಜೇಶ್ ಶೆಟ್ಟಿ ವಂದಿಸಿದರು.