ಧಾರವಾಡ:

ವಿಶ್ವಗುರು ಜಗಜ್ಯೋತಿ ಬಸವಣ್ಣನವರ ಬಸವ ಜಯಂತಿಯನ್ನು ಸೋಮವಾರ ನಗರದ ವಿವಿಧೆಡೆ ಅರ್ಥಪೂರ್ಣವಾಗಿ ಆಚರಿಸಲಾಯಿತು.

ಸೋಮವಾರ ಬೆಳಗ್ಗೆ ಜಿಲ್ಲಾಧಿಕಾರಿ ಸ್ನೇಹಲ್ ಆರ್. ಮತ್ತು ಎಸ್ಪಿ ಗುಂಜನ್ ಆರ್ಯ ಆಲೂರು ವೆಂಕಟರಾವ್ ವೃತ್ತದಲ್ಲಿರುವ ಬಸವೇಶ್ವರ ಹಾಗೂ ಡಾ. ಬಿ.ಆರ್. ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಿದರು. ಈ ವೇಳೆ ಎಸಿಪಿ ಪ್ರಶಾಂತ ಸಿದ್ದನಗೌಡರ, ತಹಸೀಲ್ದಾರ್‌ ಡಿ.ಎಚ್. ಹೂಗಾರ, ಸಜಾಯಕ ನಿರ್ದೇಶಕ ಕುಮಾರ ಬೆಕ್ಕೇರಿ, ಜನಪ್ರತಿನಿಧಿಗಳು ಇದ್ದರು.

ಅಖಿಲ ಭಾರತ ವೀರಶೈವ ಮಹಾಸಭೆಯಲ್ಲಿ ಬಸವೇಶ್ವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಲಾಯಿತು. ಡಾ. ಸುವರ್ಣಾ ಬಿರಾದಾರ ಕಲ್ಯಾಣ ಕ್ರಾಂತಿ ಕುರಿತು ಮಾತನಾಡಿದರು. ನಾಗರತ್ನಾ ಹಡಗಲಿ ವಚನ ಪ್ರಾರ್ಥನೆ, ಪ್ರಕಾಶ ಭಾವಿಕಟ್ಟಿ ನಿರೂಪಿಸಿದರು. ಪದಾಧಿಕಾರಿಗಳಾದ ಪ್ರೊ. ವಿ.ಸಿ. ಸವಡಿ, ಚಂದ್ರಶೇಖರ ಮನಗುಂಡಿ, ಸವಿತಾ ಅಮರಶೆಟ್ಟಿ ವಚನ ಮಂಗಲ ನೆರವೇರಿಸಿದರು. ಬಸವರಾಜ ಗೋಲಪ್ಪನವರ, ಮಹೇಶ ಬಿಳೆಹಾಳ, ಶ್ರೀಶೈಲಪ್ಪ ನಿಡವಣಿ, ಮಡಿವಾಳಪ್ಪ ಶಿರಿಯಣ್ಣವರ ಹಾಗೂ ಪ್ರಧಾನ ಕಾರ್ಯದರ್ಶಿ ಶಿವಶರಣ ಕಲಬಶೆಟ್ಟರ ಇದ್ದರು.

ರೈತ ಸಂಘ:


ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ, ಡಾ. ಬಿ.ಆರ್‌. ಅಂಬೇಡ್ಕರ್ ಲಿಡಕರ ಹಿತಾಭಿವೃದ್ಧಿ ಸಂಘದಿಂದ ಕಲಾಭವನದ ಹತ್ತಿರವಿರುವ ಬಸವಣ್ಣಬ ಪ್ರತಿಮೆಗೆ ಮಾಲಾರ್ಪಣೆ ಮಾಡಲಾಯಿತು. ರೈತ ಸಂಘ ಜಿಲ್ಲಾಧ್ಯಕ್ಷ ರವಿರಾಜ ಕಂಬಳಿ, ರೈತ ಮುಖಂಡ ನಾಗಪ್ಪ ಉಂಡಿ, ಅಶೋಕ ಭಂಡಾರಿ, ನಿಂಗಪ್ಪ ಧಾರವಾಡ, ಮಹದೇವ ಕಾಂಬಳೆ, ಈರಣ್ಣ ಚಿಕ್ಕಬಳ್ಳೊಳ್ಳಿ, ಮಲ್ಲಿಕಾರ್ಜುನ ನರೇಂದ್ರ ಇದ್ದರು.

ರೈಜಿಂಗ್‌ ಸ್ಟಾರ್ಸ್‌:

ಇಲ್ಲಿನ ಲೇಕ್ ಸಿಟಿಯಲ್ಲಿ ರೈಜಿಂಗ್ ಸ್ಟಾರ್ಟ್‌ ಆರ್ಟ್‌ ಆ್ಯಂಡ್‌ ಕಲ್ಚರಲ್ ಅಕಾಡೆಮಿ ಮಕ್ಕಳ ಬೇಸಿಗೆ ಶಿಬಿರದಲ್ಲಿ ಬಸವ ಜಯಂತಿ ಆಚರಿಸಲಾಯಿತು. ಪ್ರಸಾಧನ ಕಲಾವಿದ ಸಂತೋಷ ಗಜಾನನ ಮಹಾಲೆ, ನಿರ್ದೇಶಕ ಡಾ. ಪ್ರಕಾಶ ಮಲ್ಲಿಗವಾಡ, ನಮೃತಾ ಕಿರಣ, ಸಾಯಿನಾಥ ಜೋಶಿ, ಆರವ ಶಿಪ್ಪರಮಟ್ಟಿ, ಅಂಬಿಕಾ, ಸನ್ನಿದಿ ಕಿನ್ನಾಳ ಇದ್ದರು.

ಕರ್ನಾಟಕ ವಿದ್ಯಾವರ್ಧಕ ಸಂಘದಲ್ಲಿ ಬಸವೇಶ್ವರ ಭಾವಚಿತ್ರಕ್ಕೆ ಪುಷ್ಪ ಸಮರ್ಪಿಸಿ ಗೌರವ ಸಲ್ಲಿಸಲಾಯಿತು. ಸಂಘದ ಕಾರ್ಯಾಧ್ಯಕ್ಷ ಬಸವಪ್ರಭು ಹೊಸಕೇರಿ, ಡಾ. ಜಿನದತ್ತ ಹಡಗಲಿ, ನಾಗಭೂಷಣ ಹಿರೇಮಠ, ಶಂಕರ ಹಲಗತ್ತಿ, ಸತೀಶ ತುರಮರಿ, ಶಿವಾನಂದ ಭಾವಿಕಟ್ಟಿ, ವಿಶ್ವೇಶ್ವರಿ ಹಿರೇಮಠ ಇದ್ದರು.