ಸಾರಾಂಶ
ಕಳೆದ ವರ್ಷ ನಾಗಮಂಗಲದ ಬದ್ರಿಕೊಪ್ಪಲಿನಲ್ಲಿ ಗಣೇಶ ಮೆರವಣಿಗೆ ವೇಳೆ ಕೆಲ ಕಿಡಿಗೇಡಿಗಳು ಅಶಾಂತಿ ಉಂಟು ಮಾಡಿ ಗಲಭೆ ಸೃಷ್ಟಿಸಿದ್ದ ನಿದರ್ಶನಗಳು ನಿಮ್ಮ ಕಣ್ಣ ಮುಂದೆ ಇದೆ. ನಮ್ಮ ತಾಲೂಕಿನಲ್ಲಿ ಇಂತಹ ಯಾವುದೇ ರೀತಿಯ ಅಶಾಂತಿ ಉಂಟು ಮಾಡು ಘಟನೆಗಳು ನಡೆಯದಂತೆ ನೋಡಿಕೊಳ್ಳಬೇಕು.
ಕನ್ನಡಪ್ರಭ ವಾರ್ತೆ ಮಂಡ್ಯ
ಗೌರಿಗಣೇಶ ಮತ್ತು ಈದ್ ಮಿಲಾದ್ ಎರಡು ಹಬ್ಬಗಳನ್ನು ಸಮುದಾಯದ ಜನರು ಶಾಂತಿಯುತ ಆಚರಣೆ ಸಂಬಂಧ ಶಾಸಕ ಪಿ.ರವಿಕುಮಾರ್ ಅಧಿಕಾರಿಗಳೊಂದಿಗೆ ಶಾಂತಿ ಸಭೆ ನಡೆಸಿದರು.ನಗರಸಭೆಯಲ್ಲಿರುವ ತಮ್ಮ ಕಚೇರಿಯಲ್ಲಿ ಪೊಲೀಸರು ಹಾಗೂ ಇತರೆ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಶಾಸಕರು, ಗೌರಿ-ಗಣೇಶ ಹಾಗೂ ಈದ್ ಮಿಲಾದ್ ಎರಡು ಹಬ್ಬಗಳ ಆಚರಣೆ ಹಿನ್ನೆಲೆಯಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಎಚ್ಚರ ವಹಿಸುವಂತೆ ಸೂಚಿಸಿದರು.
ಕಳೆದ ವರ್ಷ ನಾಗಮಂಗಲದ ಬದ್ರಿಕೊಪ್ಪಲಿನಲ್ಲಿ ಗಣೇಶ ಮೆರವಣಿಗೆ ವೇಳೆ ಕೆಲ ಕಿಡಿಗೇಡಿಗಳು ಅಶಾಂತಿ ಉಂಟು ಮಾಡಿ ಗಲಭೆ ಸೃಷ್ಟಿಸಿದ್ದ ನಿದರ್ಶನಗಳು ನಿಮ್ಮ ಕಣ್ಣ ಮುಂದೆ ಇದೆ. ನಮ್ಮ ತಾಲೂಕಿನಲ್ಲಿ ಇಂತಹ ಯಾವುದೇ ರೀತಿಯ ಅಶಾಂತಿ ಉಂಟು ಮಾಡು ಘಟನೆಗಳು ನಡೆಯದಂತೆ ನೋಡಿಕೊಳ್ಳಬೇಕು ಎಂದು ಪೊಲೀಸರಿಗೆ ಸೂಚಿಸಿದರು.ಗಣೇಶ ಹಬ್ಬವನ್ನು ಅದ್ಧೂರಿಯಾಗಿ ಆಚರಣೆ ಮಾಡಿ. ಆದರೆ, ಗಣೇಶ ಗೌರಿ ವಿಸರ್ಜನೆ ವೇಳೆ ನಡೆಯುವ ಮೆರವಣಿಗೆ ಶಾಂತಿಯುತವಾಗಿರಲಿ. ಯಾವುದೇ ಅಶಾಂತಿ ಉಂಟಾಗಬಾರದು. ಕಿಡಿಗೇಡಿಗಳ ಬಗ್ಗೆ ಎಚ್ಚರ ವಹಿಸಬೇಕು ಎಂದರು.
ಬೆಂಗಳೂರಿನ ಕೆಲವರು ಇಲ್ಲಿಗೆ ಬಂದು ಗಲಾಟೆ ಮಾಡಲು ಪ್ರಯತ್ನ ನಡೆಯುತ್ತಿದೆ. ಹೀಗಾಗಿ ಹೆಚ್ಚಿನ ಭದ್ರತೆ ಒದಗಿಸುವ ಕೆಲಸ ಮಾಡಿದ್ದೇವೆ. ಹೊರಗಿನವರು ಜಿಲ್ಲೆಗೆ ಬರಲು ಅವಕಾಶ ಇಲ್ಲ. ಮುನ್ನೆಚ್ಚರಿಕೆ ವಹಿಸಿ ಸಭೆ ಮಾಡಲಾಗಿದೆ. ಈ ಬಗ್ಗೆ ಅಧಿಕಾರಿಗಳಿಗೆ ಹಲವು ಸೂಚನೆ ನೀಡಿ ಕ್ರಮ ಕೈಗೊಳ್ಳಲಾಗಿದೆ ಎಂದರು.ಗಣೇಶ ವಿಸರ್ಜನೆ ವೇಳೆ ಕ್ಯಾಮೆರಾಗಳ ಕಣ್ಗಾವಲು ಇರಬೇಕು. ಮೆರವಣಿಗೆ ಆರಂಭದಿಂದ ಮುಗಿಯುವವರೆಗೂ ಹೆಚ್ಚಿನ ಪೊಲೀಸ್ ಭದ್ರತೆ ಒದಗಿಸಲಾಗಿದೆ. ಎರಡು ಸಮುದಾಯಗಳ ಜನರು ಶಾಂತಿಯುತ ಹಬ್ಬ ಆಚರಣೆ ಮಾಡುವಂತೆ ಸಲಹೆ ನೀಡಿದರು.