ನಾಡಿನೆಲ್ಲೆಡೆ ಶ್ರದ್ಧಾಭಕ್ತಿಯಿಂದ ಗೌರಿ ಗಣೇಶ ಹಬ್ಬ ಆಚರಣೆ

| Published : Sep 09 2024, 01:37 AM IST

ನಾಡಿನೆಲ್ಲೆಡೆ ಶ್ರದ್ಧಾಭಕ್ತಿಯಿಂದ ಗೌರಿ ಗಣೇಶ ಹಬ್ಬ ಆಚರಣೆ
Share this Article
  • FB
  • TW
  • Linkdin
  • Email

ಸಾರಾಂಶ

ನಾಡಿನೆಲ್ಲೆಡೆ ಶ್ರದ್ಧಾಭಕ್ತಿಯಿಂದ ಗೌರಿ ಗಣೇಶ ಹಬ್ಬ ಆಚರಣೆ

ಕನ್ನಡಪ್ರಭ ವಾರ್ತೆ ರಾಮನಗರ ಗೌರಿ ಮತ್ತು ಗಣೇಶ ಹಬ್ಬವನ್ನು ಜಿಲ್ಲೆಯ ಜನತೆ ಶ್ರದ್ಧ ಭಕ್ತಿಯಿಂದ ಆಚರಣೆ ಮಾಡಿದರು. ಶುಕ್ರವಾರ ಗೌರಿ ವ್ರತವನ್ನು ಆಚರಿಸಿದ್ದ ಜನರು, ಶನಿವಾರ ಗಣಪತಿಯನ್ನು ಬರ ಮಾಡಿಕೊಂಡರು. ದೇವಾಲಯಕ್ಕೆ ಭೇಟಿ ನೀಡಿ ಪ್ರಾರ್ಥನೆ ನೆರವೇರಿಸಿದರು. ಮನೆಗಳಲ್ಲಿ ಗಣೇಶ ಮೂರ್ತಿ ಪ್ರತಿಷ್ಠಾಪನೆ ಮಾಡಿ ಹಬ್ಬ ಆಚರಣೆ ಮಾಡಿದ ದೃಶ್ಯ ಎಲ್ಲೆಡೆ ಕಂಡು ಬಂದಿತು. ಮೋದಕ, ಭಕ್ಷ್ಯ, ವಿವಿಧ ಹಣ್ಣು ಹಾಗೂ ಹೂವಿನಿಂದ ಅಲಂಕಾರ ಮಾಡಿ, ಬೆನಕನನ್ನು ಪೂಜಿಸಿದರು. ಹಲವು ಕಡೆ ಶನಿವಾರ ಸಂಜೆಯೇ ಮೂರ್ತಿ ವಿಸರ್ಜನೆ ಮಾಡಲಾಗಿತ್ತು. ಸಾರ್ವಜನಿಕ ಗಣೇಶೋತ್ಸವ: ವಿವಿಧ ಭಂಗಿಯಲ್ಲಿನ ಹಾಗೂ ಪುರಾಣದಲ್ಲಿ ಉಲ್ಲೇಖವಾಗಿರುವ ವಿವಿಧ ದೇವತೆಗಳ ಆವತಾರದ ಗಣಪತಿ ಮೂರ್ತಿಗಳನ್ನು ಜಿಲ್ಲೆಯಲ್ಲಿ ಪ್ರತಿಷ್ಠಾಪನೆ ಮಾಡಲಾಗಿದೆ. ರಾಮನಗರದ ಶ್ರೀ ಅರ್ಕಾವತಿ ಗಣಪತಿ, ಶ್ರೀ ವಿದ್ಯಾಗಣಪತಿಯು ಪ್ರಮುಖವಾಗಿದ್ದು, ಈ ಬಾರಿ ರಾಜ್ಯದಲ್ಲಿಯೆ ಪ್ರಥಮ ಬಾರಿಗೆ ಪುರಿ ಜಗನ್ನಾಥ ಮಾದರಿ ಗಣಪತಿಯನ್ನು ಪ್ರತಿಷ್ಠಾಪನೆಮಾಡಲಾಗಿತ್ತು. ಇಲ್ಲಿಗೆ ಸಂಸದ ಡಾ.ಸಿ.ಎನ್.ಮಂಜುನಾಥ್ ಹಾಗೂ ಶಾಸಕ ಇಕ್ಬಾಲ್ ಹುಸೇನ್ ರವರು ಭೇಟಿ ನೀಡಿ ಪೂಜೆ ಸಲ್ಲಿಸಿದರು. ಸರ್ಕಾರದ ಆದೇಶದಂತೆ ಎಲ್ಲೆಡೆ ಪಿಒಪಿಗಳನ್ನು ಹೊರತು ಪಡಿಸಿ, ಮಣ್ಣಿನಿಂದಲೇ ತಯಾರಿಸಿರುವ ಗಣೇಶ ಮೂರ್ತಿಯನ್ನು ಪೂಜಿಸಲಾಗಿದೆ. ೩ಅಡಿ ಎತ್ತರದಿಂದ ಹಿಡಿದು ಬೃಹತ್ ಗಣೇಶನನ್ನು ಪ್ರತಿಷ್ಠಾಪನೆ ಮಾಡಲಾಗಿದೆ. ಮೂರು ಕಾಲದಲ್ಲಿ ವಿಘ್ನೇಶ್ವರನನ್ನು ಪೂಜಿಸಿ, ಭಕ್ತರಿಗೆ ಪ್ರಸಾದ ವಿತರಣೆ ಮಾಡಲಾಗಿದೆ. ಕೆಲವು ಕಡೆ ಸಾಂಸ್ಕೃತಿಕ ಕಾರ್‍ಯಕ್ರಮಗಳನ್ನು ನಡೆಸಿಕೊಡಲಾಗಿತ್ತು.. ಇನ್ನು ಸರಕಾರಿ ಹಾಗೂ ಖಾಸಗಿ ಕಚೇರಿಗಳು ಆಸ್ಪತ್ರೆ ಸೇರಿದಂತೆ ಸಾರ್ವಜನಿಕ ಪ್ರದೇಶದಲ್ಲಿ ಗಣಪತಿಯನ್ನು ಪ್ರತಿಷ್ಠಾಪನೆ ಮಾಡಿ ಪೂಜಿಸಲಾಗಿದೆ. ದೇವಾಲಯಗಳಲ್ಲಿ: ಗಣೇಶ ಚೌತಿಯ ಪ್ರಯುಕ್ತ ಜಿಲ್ಲೆಯ ವಿವಿಧ ದೇವಾಲಯಗಳಲ್ಲಿ ವಿಶೇಷ ಪೂಜೆಂiನ್ನುಏರ್ಪಡಿಸಲಾಗಿತ್ತು. ಗಣೇಶ ದೇವಾಲಯಗಳಲ್ಲಿ ದೇವರಿಗೆ ವಿಶೇಷ ಅಲಂಕಾರ ಮಾಡಲಾಗಿತ್ತು.