ಗೆಜ್ಜೆಗಿರಿ ಜಾತ್ರೆ: ಚಾರ್ಮಾಡಿ ಭಕ್ತರ ಸಮಾಲೋಚನ ಸಭೆ

| Published : Feb 09 2025, 01:32 AM IST

ಸಾರಾಂಶ

ದೇಯಿ ಬೈದೆದಿ ಕೋಟಿ ಚೆನ್ನಯ ಮೂಲಸ್ಥಾನ ಶ್ರೀ ಕ್ಷೇತ್ರ ಗೆಜ್ಜೆಗಿರಿಯಲ್ಲಿ ಮಾರ್ಚ್ 1ರಿಂದ ಮಾರ್ಚ್ 5ರ ತನಕ ನಡೆಯುವ ವಾರ್ಷಿಕ ಜಾತ್ರಾ ಮಹೋತ್ಸವವನ್ನು ಯಶಸ್ಸುಗೊಳಿಸುವ ಬಗ್ಗೆ ಬೆಳ್ತಂಗಡಿ ತಾಲೂಕಿನ ಚಾರ್ಮಾಡಿ ತೋಟತ್ತಾಡಿ ಚಿಬಿದ್ರೆ ಗ್ರಾಮಗಳ ಗೆಜ್ಜೆಗಿರಿಯ ಭಕ್ತರ ಸಮಾಲೋಚನ ಸಭೆ ಶುಕ್ರವಾರ ನಡೆಯಿತು.

ಕನ್ನಡಪ್ರಭ ವಾರ್ತೆ ಬೆಳ್ತಂಗಡಿ

ದೇಯಿ ಬೈದೆದಿ ಕೋಟಿ ಚೆನ್ನಯ ಮೂಲಸ್ಥಾನ ಶ್ರೀ ಕ್ಷೇತ್ರ ಗೆಜ್ಜೆಗಿರಿಯಲ್ಲಿ ಮಾರ್ಚ್ 1ರಿಂದ ಮಾರ್ಚ್ 5ರ ತನಕ ನಡೆಯುವ ವಾರ್ಷಿಕ ಜಾತ್ರಾ ಮಹೋತ್ಸವವನ್ನು ಯಶಸ್ಸುಗೊಳಿಸುವ ಬಗ್ಗೆ ಬೆಳ್ತಂಗಡಿ ತಾಲೂಕಿನ ಚಾರ್ಮಾಡಿ ತೋಟತ್ತಾಡಿ ಚಿಬಿದ್ರೆ ಗ್ರಾಮಗಳ ಗೆಜ್ಜೆಗಿರಿಯ ಭಕ್ತರ ಸಮಾಲೋಚನ ಸಭೆ ಶುಕ್ರವಾರ ನಡೆಯಿತು.

ಶ್ರೀ ಗುರುನಾರಾಯಣ ಸೇವಾ ಸಂಘ ಚಾರ್ಮಾಡಿ ಅಧ್ಯಕ್ಷ, ಉಜಿರೆ ಜಿಲ್ಲಾ ಪಂಚಾಯಿತಿ ಕ್ಷೇತ್ರದ ವಲಯ ಸಂಚಾಲಕ ಯಶೋಧರ ಪೂಜಾರಿ ಸಭೆಯ ಅಧ್ಯಕ್ಷತೆ ವಹಿಸಿ, ಜಾತ್ರೋತ್ಸವದ ಆಮಂತ್ರಣ ಪತ್ರಿಕೆಯನ್ನು ಬಿಡುಗಡೆಗೊಳಿಸಿದರು.

ಶ್ರೀ ಕ್ಷೇತ್ರ ಗೆಜ್ಜಗಿರಿ ಜಾತ್ರೋತ್ಸವ ಸಮಿತಿಯ ಬೆಳ್ತಂಗಡಿ ತಾಲೂಕಿನ ಪ್ರಧಾನ ಸಂಚಾಲಕ ನಿತ್ಯಾನಂದ ನಾವರ, ಶ್ರೀ ಕ್ಷೇತ್ರದಲ್ಲಿ ನಡೆಯುವ ಮಡಿಲು ಸೇವೆ ಹಾಗೂ ಉತ್ಸವದ ಮಾಹಿತಿ ನೀಡಿದರು.

ವೇದಿಕೆಯಲ್ಲಿ ಗುರುನಾರಾಯಣಸ್ವಾಮಿ ಸೇವಾ ಸಂಘ ತೋಟತ್ತಾಡಿ ಅಧ್ಯಕ್ಷ ಸನತ್ ಕೋಟ್ಯಾನ್, ಚಿಬಿದ್ರೆ ಗುರು ನಾರಾಯಣ ಸೇವಾ ಸಂಘದ ಅಧ್ಯಕ್ಷ ರತ್ನಾಕರ ಪೂಜಾರಿ ಅಂತರ, ಗುರುನಾರಾಯಣ ಸ್ವಾಮಿ ಸೇವಾ ಸಂಘ ಚಾರ್ಮಾಡಿ ಕೋಶಾಧಿಕಾರಿ ಸದಾಶಿವ ಪೂಜಾರಿ, ಮಹಿಳಾ ಬಿಲ್ಲವ ವೇದಿಕೆ ಚಾರ್ಮಾಡಿ ಅಧ್ಯಕ್ಷ ಕೇಶವತಿ ಭೀಮಂಡೆ, ಉಪಸ್ಥಿತರಿದ್ದರು.

ರತ್ನಾಕರ ಪೂಜಾರಿ ಚಾರ್ಮಾಡಿ, ಉಮೇಶ್ ಪೂಜಾರಿ ಚಾರ್ಮಾಡಿ, ಸತೀಶ್ ಚಾರ್ಮಾಡಿ, ದಯಾನಂದ ವಲಸಾರಿ, ಶ್ರೀಧರ ಪೂಜಾರಿ, ಉಮೇಶ್ ಭೀಟಿಗೆ, ನಿಶಾಂತ್ ಭೀಮಂಡೆ ಹಾಗೂ ಗ್ರಾಮಸ್ಥರು ಸೇರಿದ್ದರು.

ಗುರುನಾರಾಯಣಸ್ವಾಮಿ ಸೇವಾ ಸಂಘ ಚಾರ್ಮಾಡಿ ಪ್ರಧಾನ ಕಾರ್ಯದರ್ಶಿ ರಾಜೇಶ್ ಬಂಗಲೆಗುಡ್ಡೆ ಕಾರ್ಯಕ್ರಮ ನಿರೂಪಿಸಿ, ಅತಿಥಿಗಳನ್ನು ಸ್ವಾಗತಿಸಿದರು. ಸದಾಶಿವ ಪೂಜಾರಿ ವಂದಿಸಿದರು.