ಬಸವ ಜಯಂತಿ ಪ್ರಯುಕ್ತ ಲಿಂಗದೀಕ್ಷೆ

| Published : May 13 2024, 01:06 AM IST

ಸಾರಾಂಶ

ಚಿಕ್ಕೋಡಿ: ದೇಹವನ್ನು ದೇವಾಲಯವನ್ನಾಗಿಸುವ ಉದ್ದೇಶವೇ ಲಿಂಗದೀಕ್ಷಾ ಕಾರ್ಯಕ್ರಮ ಎಂದು ಚಿಕ್ಕೋಡಿ ಸಂಪಾದನಾ ಚರಮೂರ್ತಿ ಮಠದ ಶ್ರೀ ಸಂಪಾದನಾ ಮಹಾಸ್ವಾಮಿಗಳು ಹೇಳಿದರು.

ಚಿಕ್ಕೋಡಿ: ದೇಹವನ್ನು ದೇವಾಲಯವನ್ನಾಗಿಸುವ ಉದ್ದೇಶವೇ ಲಿಂಗದೀಕ್ಷಾ ಕಾರ್ಯಕ್ರಮ ಎಂದು ಚಿಕ್ಕೋಡಿ ಸಂಪಾದನಾ ಚರಮೂರ್ತಿ ಮಠದ ಶ್ರೀ ಸಂಪಾದನಾ ಮಹಾಸ್ವಾಮಿಗಳು ಹೇಳಿದರು.

ಪಟ್ಟಣದ ಚರಮೂರ್ತಿ ಮಠದಲ್ಲಿ ಬಸವಜಯಂತಿ ಅಂಗವಾಗಿ ಆಯೋಜಸಿದ್ದ ಲಿಂಗದೀಕ್ಷೆ ಕಾರ್ಯಕ್ರಮದ ಸಾನಿಧ್ಯ ವಹಿಸಿ ಮಾತನಾಡಿ, ಅಷ್ಟಾವರಣಗಳಲ್ಲಿ ಬರುವ ಲಿಂಗವನ್ನು ಭಕ್ತರಾದವರು ಗುರುಗಳ ಲಿಂಗ ಹಸ್ತದಿಂದ ಲಿಂಗಧಾರಣೆ ಮಾಡಿಕೊಂಡು ನಿತ್ಯ ಲಿಂಗಪೂಜೆಯಲ್ಲಿ ತೊಡಗಬೇಕು. ಬೆಳಿಗ್ಗೆ ಲಿಂಗಪೂಜೆಯಿಂದ ನಮ್ಮ ಕೆಲಸ ಕಾರ್ಯಗಳು ಪ್ರಾರಂಭವಾಗುವಂತೆ ನೋಡಿಕೊಳ್ಳಬೇಕು ಎಂದು ಹೇಳಿದರು.

ಲಿಂಗಪೂಜೆಯ ಜೊತೆಗೆ ಕಾಯಕ ಪೂಜೆಯನ್ನು ನಡೆಯಬೇಕು, ನಾವು ನಿತ್ಯ ಮಾಡುವ ಕಾಯಕವನ್ನು ಮನಪೂರ್ವಕ ಮಾಡಬೇಕು. ತನು ವಂಚನೆ, ಮನ ವಂಚನೆ, ಧನ ವಂಚನೆ ಮಾಡಿದರೆ ಅದು ಕಾಯಕ ಎನಿಸುವುದಿಲ್ಲ. ಸತ್ಯ ಶುದ್ದಕಾಯಕದಲ್ಲಿ ನೆಮ್ಮದಿಯನ್ನು ಕಾಣಬೇಕು. ನಾವು ಕಾಯಕ ಮಾಡಿ ಗಳಿಸಿದ ಹಣದಲ್ಲಿ ಸ್ವಲ್ಪ ಭಾಗ ದಾಸೋಹಕ್ಕಾಗಿ ಮೀಸಲಿಡಬೇಕು ಎಂದು ಆಶೀರ್ವಚನ ನೀಡಿದರು.

ಕಬ್ಬೂರ ರೇವಣಸಿದ್ದ ಮಠದ ಷ.ಬ್ರ.ಶ್ರೀ ರೇವಣಸಿದ್ದ ಶಿವಾಚಾರ್ಯ ಮಹಾಸ್ವಾಮಿಗಳು ಲಿಂಗದೀಕ್ಷೆ ಅಯ್ಯಾಚಾರವನ್ನು ನೆರವೇರಿಸಿದರು.