ಸಾರಾಂಶ
ಕನ್ನಡಪ್ರಭ ವಾರ್ತೆ ನಂಜನಗೂಡು ತಾಲೂಕಿನ ವೀರೇದೇವನಪುರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನಿರ್ದೇಶಕರ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿತ ವಿಜಯ್ ಕುಮಾರ್ ಬಣದ ಅಭ್ಯರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಗೆಲುವು ಸಾಧಿಸುವ ಮೂಲಕ ಮೇಲುಗೈ ಸಾಧಿಸಿದ್ದಾರೆ. ವೀರೇದೇವನಪುರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ 12 ನಿರ್ದೇಶಕರ ಪೈಕಿ ಮಹಿಳಾ ಕ್ಷೇತ್ರದ ಸೌಭಾಗ್ಯ ಶ್ರೀನಿವಾಸಮೂರ್ತಿ, ಪಾರ್ವತಮ್ಮ, ಎಸ್ಟಿ ಮೀಸಲು ಕ್ಷೇತ್ರದಿಂದ ಸ್ವಾಮಿನಾಯಕ, ಬಿಸಿಎಂ (ಎ) ದೊಡ್ಡ ಮಾದೇಗೌಡ ಸೇರಿದಂತೆ ನಾಲ್ವರು ನಿರ್ದೇಶಕರು ಅವಿರೋಧವಾಗಿ ಆಯ್ಕೆಯಾಗಿದ್ದರು. ಉಳಿದ 8 ಸ್ಥಾನಗಳಿಗೆ ಭಾನುವಾರ ಚುನಾವಣೆಯನ್ನು ನಡೆಸಲಾಯಿತು. 8 ಸ್ಥಾನಗಳಿಗೆ ಒಟ್ಟು 14 ಮಂದಿ ಸ್ಪರ್ಧೆ ಸಾಲಗಾರರ ಸಾಮಾನ್ಯ ಕ್ಷೇತ್ರದಿಂದ ಕಾಂಗ್ರೆಸ್ ಬೆಂಬಲಿತ ವಿಜಯಕುಮಾರ್, ದೊರೆಸ್ವಾಮಿ, ಕುಳ್ಳಯ್ಯ, ನಾಗರಾಜು, ಬಸವೇಗೌಡ ಆಯ್ಕೆಯಾದರು. ಬಿಸಿಎಂ(ಬಿ) ಮೀಸಲು ಕ್ಷೇತ್ರದಿಂದ ಗುರುಸಿದ್ದಪ್ಪ ಎಸ್ಸಿ ರಂಗದಾಸ್, ಸಾಲಗಾರರಲ್ಲದ ಕ್ಷೇತ್ರದಿಂದ ಬದನವಾಳು ಮಹೇಶ್ ಜಯ ಸಾಧಿಸುವ ಮೂಲಕ ಆಯ್ಕೆಯಾದರು. ಮುಖಂಡರಾದ ಸುರೇಶ್, ಎನ್.ಎಂ. ಮಂಜುನಾಥ್, ಸೋಮು, ಗ್ರಾಮಸ್ಥರು ಮತ್ತು ರೈತರು ಇದ್ದರು.