ಐಎನ್ಟಿಯುಸಿ ಗೊವಿಂದರಾಜು 4 ಸಂಹಿತೆಗಳನ್ನು ರಾಜ್ಯದಲ್ಲಿ ಜಾರಿ ಮಾಡಬಾರದು ಎಂದರು. ರಂಗನಾಥ್ ಮಾತನಾಡಿ ಉದ್ಯೋಗ ಖಾತರಿ ಯೊಜನೆ ನಾಶಮಾಡಲು ಬಿಡಬಾರದು ಎಂದು ಆಗ್ರಹಿಸಿದರು.
ಕನ್ನಡಪ್ರಭ ವಾರ್ತೆ, ತುಮಕೂರು
ಕಾರ್ಮಿಕ ವಿರೋಧಿ 4 ಸಂಹಿತೆಗಳನ್ನು ಜಾರಿ ವಿರೋಧಿಸಿ, ಗ್ರಾಮಿಣ ಉದ್ಯೋಗ ಖಾತ್ರಿ ಯೋಜನೆ ಪುನರ್ ಸ್ಥಾಪಿಸಿ, ಎಲ್ಲಾ ಗುತ್ತಿಗೆ ಕಾರ್ಮಿಕರಿಗೆ ಸೇವೆಗಳನ್ನು ಕಾಯಂ ಮಾಡಿ, 12 ಗಂಟೆಯ ದುಡಿಮೆ ಕಾನೂನು ಹಿಂಪಡೆಯುವುದು ಸೇರಿದಂತೆ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಗುರುವಾರ ನಡೆದ ಪ್ರತಿಭಟನೆಯಲ್ಲಿ ಬಿಎಸ್ಎನ್ಎಲ್ ಕಚೇರಿಗೆ ಮುತ್ತಿಗೆ ಹಾಕಲು ಯತ್ನಿಸಿದ ಪ್ರತಿಭಟನಾಕಾರರನ್ನು ಬಂಧಿಸಿದ ಘಟನೆ ನಡೆದಿದೆ.ಕನಿಷ್ಠ ವೇತನ ಮಾಸಿಕ 41 ಸಾವಿರ ನಿಗದಿ ಮಾಡಿ, ನಿಗದಿತ ಕಾಲಾವಧಿ ದುಡಿಮೆ ಅವಕಾಶ ನೀಡಿ, ಕಾಯಂ ಕೆಲಸಗಳೆ ಇಲ್ಲದಂತೆ ಮಾಡುವುದನ್ನು ವಿರೋಧಿಸಿ ಕಾರ್ಮಿಕ ಸಂಘಟನೆಗಳ ಜಂಟಿ ಸಮಿತಿ ಮತ್ತು ಸಂಯುಕ್ತ ಹೋರಾಟ ಕರ್ನಾಟಕ ಜಂಟಿಯಾಗಿ ಕರೆ ನೀಡಿದ್ದ ಅಖಿಲ ಭಾರತ ಸಾರ್ವತ್ರಿಕ ಮುಷ್ಕರದ ಭಾಗವಾಗಿ ತುಮಕೂರು ನಗರದಲ್ಲಿ ಸಾವಿರಾರು ರೈತ- ಕಾರ್ಮಿಕರು ಟೌನ್‌ಹಾಲ್ ಮುಂಭಾಗ ಸಮಾವೇಶಗೊಂಡು ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ಮಾಡಿ ಬಿಎಸ್ಎನ್ಎಲ್ ಕಚೇರಿ ಎದುರು ಮುತ್ತಿಗೆ ಹಾಕಿದರು.
ಅಂತರಸನಹಳ್ಳಿ, ಸತ್ಯಮಂಗಲ, ವಸಂತನರಸಾಪುರ, ಹಿರೇಹಳ್ಳಿ ಕೈಗಾರಿಕಾ ಪ್ರದೇಶದಿಂದ ಕೆಲಸಕ್ಕೆ ಹಾಜರಾಗದ ಸಾವಿರಾರು ಕಾರ್ಮಿಕರು ಮುಷ್ಕರದಲ್ಲಿ ಬಾಗಿಯಾದರು. ಅಂಗನವಾಡಿ, ಬಿಸಿಯೂಟ. ಅಶಾ, ಮುನಿಸಿಪಲ್ , ಅಸ್ವತ್ರೆ, ಹಮಾಲಿ ಕಾರ್ಮಿಕರು. ಫುಟ್‌ಪಾತ್ ವ್ಯಾಪಾರಿಗಳು. ಬ್ಯಾಂಕ್ ನೌಕರರು. ವಿಮಾ ನೌಕರರು. ಮುಷ್ಕರದಲ್ಲಿ ಭಾಗಿಯಾಗಿದ್ದರು.ರೈತ ಸಂಘದ ಜಿಲ್ಲಾಧ್ಯಕ್ಷರಾದ ಎ. ಗೋವಿಂದ ರಾಜು ಅವರು ಮೆರವಣಿಗಗೆ ಚಾಲನೆ ನೀಡಿದರು. ಪ್ರಸ್ತಾವಿಕವಾಗಿ ಜೆಸಿಟಿಯು ಜಿಲ್ಲಾ ಸಂಚಾಲಕರಾದ ಕಂಬೆಗೌಡ ಅವರು ಮಾತನಾಡಿ ಈ ಐತಿಹಾಸಿಕ ಮುಷ್ಕರಕ್ಕೆ ಎಲ್ಲರೂ ಕೈಜೋಡಿಸಲು ಮನವಿ ಮಾಡಿದರು. ಮಂಡಿಪೇಟೆ ಸರ್ಕಲ್ ನಲ್ಲಿ ಪ್ರತಿಭಟನಾ ಮೆರವಣಿಗೆಯನ್ನು ಕುರಿತು ಮಾತನಾಡಿದ ಎಐಯುಟಿಯುಸಿ ಜಿಲ್ಲಾ ಸಂಚಾಲಕರಾದ ಮಂಜುಳ ಗೋನಾವರ ಅವರು, ಸರ್ಕಾರಗಳು ನಿರಂತರವಾಗಿ ಜನವಿರೋಧಿಯಾಗಿ ವರ್ತಿಸುತ್ತಿವೆ. ಹೋರಾಟವೆ ಜನರಿಗೆ ಇರುವ ದಾರಿ. ವರ್ತಕರಾದಿಯಾಗಿ ಎಲ್ಲರು ಕೈಜೋಡಿಸಬೇಕೆಂದು ಮನವಿ ಮಾಡಿದರು.
ಉರಿಯುವ ಬಿಸಿಲಿನಲ್ಲೂ ಬಿಎಸ್ಎನ್ಎಲ್ ಮುಂದೆ ಧರಣಿಕಾರರನ್ನು ಉದ್ದೆಶಿಸಿ ಸಿಐಟಿಯು ಜಿಲ್ಲಾಧ್ಯಕ್ಷ ಸೈಯದ್ ಮುಜೀಬ್ ಮಾತನಾಡಿ ಜನತೆ- ರೈತ – ಕಾರ್ಮಿಕರಿಗೆ ಮಾರಕವಾದ ಸರ್ಕಾರದ ನೀತಿಗಳು ಬಂಡವಾಳಗಾರ- ಕಾರ್ಪೂರೇಟ್ ಕಂಪನಿಗಳ ಲಾಭದ ಗ್ಯಾರೆಂಟಿಯನ್ನು ಮಾತ್ರ ನೋಡುತ್ತಿವೆ. ಕಾರ್ಮಿಕ- ರೈತರು-ಜನತೆ ನೀತಿ ಅಧಾರಿತವಾಗಿ ಮತ ನೀಡಲು, ಅಸಮಾನತೆ ಹೆಚ್ಚಿಸುವ ನೀತಿ ಸೊಲಿಸಲು ಕರೆ ನೀಡಿದರು.ಎಐಟಿಯುಸಿ ಜಿಲ್ಲಾ ಕಾರ್ಯಧ್ಯಕ್ಷ ಗಿರೀಶ್ ಮಾತನಾಡಿ ಸ್ವದೇಶಿ ಎಂದು ಹೇಳಿ ಅಧಿಕಾರ ಹಿಡಿದ ಬಿಜೆಪಿ ಅಮೆರಿಕ ದೇಶಕ್ಕೆ ಭಾರತವನ್ನು ಒತ್ತೆ ಇಟ್ಟಿದೆ. ನಾವು ಎಲ್ಲಿ ಪೆಟ್ರೋಲ್ ಖರಿದಿಸಬೇಕು. ಎಂಬು ಅವರೆ ಹೇಳುತ್ತಾರೆ. ಭಾರತವನ್ನು ಮತ್ತೆ ಅವರ ಗುಲಾಮಗಿರಿಗೆ ಬಿಜೆಪಿ ತಂದು ನಿಲ್ಲಿಸಿದೆ ಎಂದು ಹೇಳಿದರು.
ಐಎನ್ಟಿಯುಸಿ ಗೊವಿಂದರಾಜು 4 ಸಂಹಿತೆಗಳನ್ನು ರಾಜ್ಯದಲ್ಲಿ ಜಾರಿ ಮಾಡಬಾರದು ಎಂದರು. ರಂಗನಾಥ್ ಮಾತನಾಡಿ ಉದ್ಯೋಗ ಖಾತರಿ ಯೊಜನೆ ನಾಶಮಾಡಲು ಬಿಡಬಾರದು ಎಂದು ಆಗ್ರಹಿಸಿದರು.ಹೋರಾಟದಲ್ಲಿ ಸಿಐಟಿಯು ಷಣ್ಮಗಪ್ಪ. ಸುಜಿತ್ ನಾಯಕ್, ರಂಗಧಾಮಯ್ಯ, ಶಿವಕುಮಾರ್ ಸ್ವಾಮಿ. ಫೀಟ್ ವೆಲ್ ಕಾರ್ಮಿಕ ಸಂಘದ ಅಧ್ಯಕ್ಷ ಮುತ್ತುರಾಜ್, ಅಂಗನವಾಡಿ ನೌಕರರ ಸಂಘದ ಅಧ್ಯಕ್ಷೆ ಗೌರಮ್ಮ. ಗಂಗಮ್ಮ. ಜಬಿನಾ, ಹಮಾಲಿ ಕಾರ್ಮಿಕರ ಸಂಘದ ನಾಗರಾಜು. ಗ್ರಾಮ ಪಂಚಾಯಿತಿ ನೌಕರರ ಸಂಘದ ನಾಗೇಶ, ಯೋಗಿಶ್. ವಿಶಾಕ ಕಾರ್ಮಿಕ ಸಂಘದ ಸ್ಟಾಲಿ ಸುಕುಮಾರ್, ಎಐಟಿಯುಸಿ ಚಂದ್ರಶೇಖರ್, ರಮೇಶ್ , ರವಿಪ್ರಸಾದ್ ಅಶೋಕ್ ಕುಮಾರ್ ರಾಣಿ ಇಂಜಿನ್, ಸಿಪ್ಸಾ ಯೊಗೀಶ್, ರಮೇಶ್, ಐಎನ್‌ಟಿಯುಸಿ ನವಾಜ್, ಜಗದಿಶ್ , ಮುನಿಸಿಪಾಲ್ ಕಾರ್ಮಿಕರ ಸಂಘದ ಮಾರುತಿ, ಪ್ರಕಾಶ್, ಮಂಜುನಾಥ್, ಕುಮಾರ್ ಅಶಾ ನೌಕರರ ಸಂಘದ ರೇಖಾ, ಕಟ್ಟಡ ಕಾರ್ಮಿಕರ ಸಂಘದ ಕಲೀಲ್, ಪ್ರೇರಣಾ ಟ್ರೆಸ್ಟ್ ಬಾಬು ಮಾನಸೆ, ಪಿ.ಎಫ್ ಪಿಂಚಣಿದಾರರ ಸಂಘದ ಟಿ.ಜಿ. ಶಿವಲಿಂಯ್ಯ, ಜನವಾದಿ ಮಹಿಳಾ ಸಂಘದ ಟಿ.ಆರ್. ಕಲ್ಪನಾ ಮತ್ತಿತರರು ಮುಂದಾಳತ್ವ ವಹಿಸಿದ್ದರು.