ಸಾರಾಂಶ
ಗ್ರಾಮೀಣ ಭಾಗದ ಬಡ ಮಕ್ಕಳಿಗೆ ಆಂಗ್ಲ ಮಾಧ್ಯಮದಲ್ಲಿ ಗುಣಮಟ್ಟದ ವಿದ್ಯಾಭ್ಯಾಸ ನೀಡಲು ಮಾಜಿ ಶಾಸಕ ಸಿ.ವೆಂಕಟೇಶಪ್ಪ ಕನಸು ಕಂಡಿದ್ದರು. ಅದರಂತೆ ಇಂದಿರಾ ಗಾಂಧಿಯವರ ಹೆಸರಿನಲ್ಲಿ ಇಂದಿರಾ ಶಾಲೆಯನ್ನು ಆರಂಭಿಸಿ ಹಣದಾಸೆಗೆ ಮುಂದಾಗದೆ, ಕಡಿಮೆ ವೆಚ್ಚದಲ್ಲಿ ಉತ್ತಮ ಶಿಕ್ಷಣವನ್ನು ನೀಡುತ್ತಿದ್ದರು. ಅವರು ಮೃತಪಟ್ಟ ನಂತರ ಅವರ ಮಕ್ಕಳು ಸಹ ಗುಣಮಟ್ಟದ ಶಿಕ್ಷಣವನ್ನು ನೀಡುತ್ತಾ ಬಂದಿದ್ದಾರೆ
ಕನ್ನಡಪ್ರಭ ವಾರ್ತೆ ಬಂಗಾರಪೇಟೆ
ಗ್ರಾಮೀಣ ಭಾಗದ ಮಕ್ಕಳು ಉತ್ತಮ ಶಿಕ್ಷಣ ಪಡೆದು ಐಎಎಸ್, ಐಪಿಎಸ್‌ನಂತಹ ಉನ್ನತ ಹುದ್ದೆಗಳನ್ನು ಪಡೆಯಬೇಕು ಜೊತೆಗೆ ರಾಜಕೀಯ ಕ್ಷೇತ್ರಕ್ಕೂ ಬಂದು ದೇಶ ಸೇವೆ ಮಾಡಬೇಕು ಎಂದು ಶಾಸಕ ಎಸ್.ಎನ್ ನಾರಾಯಣಸ್ವಾಮಿ ಹೇಳಿದರು. ತಾಲೂಕಿನ ಬೂದಿಕೋಟೆ ಗ್ರಾಮದ ಇಂದಿರಾ ಶಾಲೆಯ ೧೯ನೇ ವಾರ್ಷಿಕೋತ್ಸವದಲ್ಲಿ ಮಾತನಾಡಿ, ಸಿ.ವೆಂಕಟೇಶಪ್ಪನವರು ೩ ಬಾರಿ ಶಾಸಕರಾಗಿ ಆಯ್ಕೆಯಾಗಲು ಉಕ್ಕಿನ ಮಹಿಳೆ ಇಂದಿರಾ ಗಾಂಧಿಯವರೇ ಕಾರಣ ಎ₹ದರು.ಆಂಗ್ಲ ಮಾಧ್ಯಮ ಶಾಲೆ
ಗ್ರಾಮೀಣ ಭಾಗದ ಬಡ ಮಕ್ಕಳಿಗೆ ಆಂಗ್ಲ ಮಾಧ್ಯಮದಲ್ಲಿ ಗುಣಮಟ್ಟದ ವಿದ್ಯಾಭ್ಯಾಸ ನೀಡಲು ಮಾಜಿ ಶಾಸಕ ಸಿ.ವೆಂಕಟೇಶಪ್ಪ ಕನಸು ಕಂಡಿದ್ದರು. ಅದರಂತೆ ಇಂದಿರಾ ಗಾಂಧಿಯವರ ಹೆಸರಿನಲ್ಲಿ ಇಂದಿರಾ ಶಾಲೆಯನ್ನು ಆರಂಭಿಸಿ ಹಣದಾಸೆಗೆ ಮುಂದಾಗದೆ, ಕಡಿಮೆ ವೆಚ್ಚದಲ್ಲಿ ಉತ್ತಮ ಶಿಕ್ಷಣವನ್ನು ನೀಡುತ್ತಿದ್ದರು. ಅವರು ಮೃತಪಟ್ಟ ನಂತರ ಅವರ ಮಕ್ಕಳು ಸಹ ಗುಣಮಟ್ಟದ ಶಿಕ್ಷಣವನ್ನು ನೀಡುತ್ತಾ ಬಂದಿದ್ದಾರೆ ಎಂದರು. ಶಾಲೆಗಳಲ್ಲಿ ಮಕ್ಕಳಿಗೆ ಬಡವ, ಶ್ರೀಮಂತ ಮತ್ತು ಜಾತಿ ಬೇದಗಳ ತಾರತಮ್ಯ ಎದುರಾಗಬಾರದು ಹಾಗೂ ಎಲ್ಲರೂ ಸಮಾನರು ಎಂಬ ಉದ್ದೇಶದಿಂದ ಇಂದಿರಾ ಗಾಂಧಿಯವರು ಸಮವಸ್ತ್ರವನ್ನು ಜಾರಿಗೆ ತಂದರು. ಮಕ್ಕಳಲ್ಲಿ ಪರಸ್ಪರ ಪ್ರೀತಿಯನ್ನು ತುಂಬಿ, ನಮ್ಮ ಸಂಸ್ಕೃತಿ ಸಂಪ್ರದಾಯವನ್ನು ಕಲಿಸಿಕೊಡಬೇಕು ಜೊತೆಗೆ ರಾಜ್ಯ ಹಾಗೂ ದೇಶದ ಬಗ್ಗೆ ಗೌರವ ಮತ್ತು ದೇಶ ಭಕ್ತಿಯನ್ನು ಕಲಿಸಬೇಕು ಎಂದರು.ವಿದ್ಯಾರ್ಥಿಗಳಿಗೆ ತಾಳ್ಮೆ ಅಗತ್ಯಕನ್ನಡ ಸಂಘದ ಅಧ್ಯಕ್ಷ ಪಲ್ಲವಿ ಮಣಿ ಮಾತನಾಡಿ, ಇಂದಿನ ಮಕ್ಕಳು ಮುಂದಿನ ಭವಿಷ್ಯದ ರುವಾರಿಗಳಾಗಿರುತ್ತಾರೆ. ಎಲ್ಲವೂ ವಿಫಲವಾದಾಗ ತಾಳ್ಮೆ ಸಫಲವಾಗುತ್ತದೆ. ಆದ್ದರಿಂದ ವಿದ್ಯಾರ್ಥಿಗಳು ಮತ್ತು ಪೋಷಕರಿಗೆ ತಾಳ್ಮೆ ಬಹಳ ಮುಖ್ಯ. ಅದನ್ನು ಕಳೆದುಕೊಂಡರೆ ಗುರಿಯನ್ನು ತಲುಪಲು ಸಾಧನೆಯನ್ನು ಮಾಡಲು ಸಾಧ್ಯವಾಗುವುದಿಲ್ಲ. ಆದರೆ ಅಹಂ ಇರಬಾರದು. ಜೊತೆಗೆ ನಾನು ಎಂಬುದನ್ನು ಬಿಟ್ಟು ನಾವು ಎಂಬುದನ್ನು ರೂಡಿಸಿಕೊಂಡರೆ ಜೀವನದಲ್ಲಿ ಏನನ್ನಾದರೂ ಸಾಧಿಸಬಹುದು. ಈ ನಿಟ್ಟಿನಲ್ಲಿ ಇಲ್ಲಿನ ಶಿಕ್ಷಕರು ಮಕ್ಕಳ ಸರ್ವತೋಮುಖ ಅಭಿವೃದ್ದಿಗೆ ಮುಂದಾಗಲಿ ಎಂದರು.ಈ ವೇಳೆ ಇಂದಿರಾ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಬಿವಿ.ಕೃಷ್ಣ, ನಿರ್ದೇಶಕ ಬಿವಿ.ನಾಗೇಶ್, ಪ್ರಾಂಶುಪಾಲೆ ಗೀತಾ, ತಾ.ಪಂ ಮಾಜಿ ಅಧ್ಯಕ್ಷ ಮಹದೇವ್, ಗ್ರಾಪಂ ಅಧ್ಯಕ್ಷ ಮಂಜುನಾಥ, ಸಮಾಜ ಸೇವಕ ಎ.ಬಾಬು, ವಿಎಸ್‌ಎಸ್‌ಎನ್ ಮಾಜಿ ಅಧ್ಯಕ್ಷ ಆರ್.ವಿಜಯಕುಮಾರ್, ಭೋವಿ ಸಂಘದ ಅಧ್ಯಕ್ಷ ಎಸ್.ನಾರಾಯಣ ಇದ್ದರು.