ಕನಕಪುರ: ಮಕ್ಕಳು ತಮ್ಮ ದಿನನಿತ್ಯ ಅಭ್ಯಾಸದಲ್ಲಿ ಪತ್ರಿಕೆ ಯನ್ನು ಓದುವ ಅಭ್ಯಾಸ ಬೆಳಸಿಕೊಳ್ಳಬೇಕು ಎಂದು ನಗರದ ದಮ್ಮ ದಿವೀಗೆ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ ಮಲ್ಲಿಕಾರ್ಜುನ್ ತಿಳಿಸಿದರು.
ಕನಕಪುರ: ಮಕ್ಕಳು ತಮ್ಮ ದಿನನಿತ್ಯ ಅಭ್ಯಾಸದಲ್ಲಿ ಪತ್ರಿಕೆ ಯನ್ನು ಓದುವ ಅಭ್ಯಾಸ ಬೆಳಸಿಕೊಳ್ಳಬೇಕು ಎಂದು ನಗರದ ದಮ್ಮ ದಿವೀಗೆ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ ಮಲ್ಲಿಕಾರ್ಜುನ್ ತಿಳಿಸಿದರು.
ನಗರದ ಬ್ಲಾಸಮ್ ಶಾಲೆಯಲ್ಲಿ ಕನ್ನಡಪ್ರಭ ಮತ್ತು ಏಷ್ಯಾನೆಟ್ ವ ಸುವರ್ಣ ನ್ಯೂಸ್ ಆಯೋಜಿಸಿದ್ದ ತಾಲೂಕು ಮಟ್ಟದ ಚಿತ್ರಕಲಾ ಸ್ಪರ್ಧೆಯಲ್ಲಿ ವಿಜೇತ ಮಕ್ಕಳಿಗೆ ಬಹುಮಾನ ವಿತರಿಸಿ ಮಾತನಾಡಿದ ಅವರು, ಚಿತ್ರಕಲೆ ಸಂಸ್ಕೃತಿ, ಸಾಹಿತ್ಯ, ಪರಿಸರ, ವ್ಯಕ್ತಿ ಚಿತ್ರಗಳನ್ನು ಅನಾವರಣಗೊಳಿಸುವ ಒಂದು ವಿಶಿಷ್ಟ ಸಾಧನವಾಗಿದೆ. ಒಬ್ಬ ಅತ್ಯುತ್ತಮ ಚಿತ್ರ ಕಲಾವಿದ ಒಬ್ಬ ಮನುಷ್ಯ, ಸಮಾಜದ ಅಂಕುಡೊಂಕುಗಳನ್ನು ಸಮಾಜಕ್ಕೆ ತನ್ನ ಒಂದು ಚಿತ್ರದಿಂದ ತೋರಿಸಿಕೊಡುವುದು ಶ್ಲಾಘನೀಯ. ಇದಕ್ಕೆ ಉದಾಹರಣೆ ಎಂಬಂತೆ ದಿನಪತ್ರಿಕೆಗಳಲ್ಲಿ ವ್ಯಂಗ್ಯಚಿತ್ರ ಬಿಡಿಸುವ ಮೂಲಕ ಪ್ರಸ್ತುತ ರಾಜಕೀಯ, ಸಾಮಾಜಿಕ, ಧಾರ್ಮಿಕ ಆಚಾರ- ವಿಚಾರಗಳ ಬಗ್ಗೆ ಜನರಿಗೆ ತಲುಪಿಸುವುದು. ಮಕ್ಕಳು ದಿನಪತ್ರಿಕೆಗಳನ್ನು ಓದುವ ಅಭ್ಯಾಸ ಬೆಳಸಿ ಕೊಳ್ಳುವಂತೆ ಸಲಹೆ ನೀಡಿದರು.ಜಯ ಕರ್ನಾಟಕ ಜನಪರ ವೇದಿಕೆ ರಾಜ್ಯ ಸಲಹೆಗಾರ ಕುಮಾರಸ್ವಾಮಿ ಮಾತನಾಡಿ, ಮಕ್ಕಳಲ್ಲಿರುವ ಪ್ರತಿಭೆ
ಹೊರತರಲು ಇಂತಹ ಸ್ಪರ್ಧೆಗಳು ಪೂರಕ ವೇದಿಕೆ. ಕನ್ನಡಪ್ರಭ ಹಾಗೂ ಸುವರ್ಣ ನ್ಯೂಸ್ ಕಾರ್ಯ ಪ್ರಶಂಸನೀಯ. ಮಕ್ಕಳಲ್ಲಿ ಏಕಾಗ್ರತೆ ಹಾಗೂ ಸಮಾಜದ ಬಗ್ಗೆ ಕಾಳಜಿ ಬೆಳೆಸಿಕೊಳ್ಳಲು ಇಂತಹ ಸ್ಪರ್ಧೆಗಳು ಸಹಕಾರಿ. ಇಂದಿನ ಮಕ್ಕಳು ಮೊಬೈಲ್, ಟಿ.ವಿ ಗೀಳಿಗೆ ಬೀಳದೆ ತಮ್ಮ ದಿನನಿತ್ಯದ ಚಟುವಟಿಕೆಯ ಭಾಗವಾಗಿ ಚಿತ್ರಕಲೆಯನ್ನು ರೂಢಿಸಿಕೊಳ್ಳುವಂತೆ ಸಲಹೆ ನೀಡಿದರು.ಬಾಕ್ಸ್.............
ಸ್ಪರ್ಧೆಯಲ್ಲಿ ವಿಜೇತರಾದ ಮಕ್ಕಳು8ನೇ ತರಗತಿ ವಿಭಾಗ:
ಪೋದಾರ್ ಅಂತಾರಾಷ್ಟ್ರೀಯ ಶಾಲೆಯ ಮಹಿತ್ ಗೌಡ.ಆರ್ ಪ್ರಥಮ ಸ್ಥಾನ, ಲೀಲಾವತಿ ಎಸ್ ದ್ವಿತೀಯ ಸ್ಥಾನ, ಬ್ಲಾಸಮ್ ಶಾಲೆಯ ಸೂರಜ್ ಅವಿನಾಶ್ ತೃತೀಯ ಸ್ಥಾನ ಹಾಗೂ ಮಾನಸ ಆಂಗ್ಲ ಶಾಲೆಯ ವರ್ಷ.ಆರ್, ಪೋದಾರ್ ಅಂತಾರಾಷ್ಟ್ರೀಯ ಶಾಲೆಯ ಪ್ರಿಯಾಂಕ.ಪಿ ಸಮಾಧಾನಕರ ಬಹುಮಾನ.9ನೇ ತರಗತಿ ವಿಭಾಗ:
ಬ್ಲಾಸಮ್ ಶಾಲೆಯ ಕೀರ್ತನ ಎಸ್.ಎಸ್.ಪ್ರಥಮ ಸ್ಥಾನ, ಸೆಂಟ್ ಮೈಕಲ್ ಆಂಗ್ಲ ಶಾಲೆಯ ಜನನಿ. ಜೆ ದ್ವಿತೀಯ ಸ್ಥಾನ, ಚೈತ್ರ ಎಚ್.ಎಸ್, ಆರ್‌ಜಿಎಚ್ಎಸ್ ತೃತೀಯ ಸ್ಥಾನ ಹಾಗೂ ಆದರ್ಶ ವಿದ್ಯಾಲಯದ ಭರತ್ ರಾಜ್ ಎಂ.ಜೆ ಮತ್ತು ಮಾನಸ ಆಂಗ್ಲ ಶಾಲೆಯ ರಂಜನಿ.ಬಿ ಸಮಾಧಾನಕರ ಬಹುಮಾನ.10ನೇ ತರಗತಿ ವಿಭಾಗ:
ಬ್ಲಾಸಮ್ ಶಾಲೆಯ ಕಾವ್ಯ ಕೆ.ಜೆ ಪ್ರಥಮ, ಚಂದನ.ಎಸ್ ದ್ವಿತೀಯ ಸ್ಥಾನ, ಸೇಂಟ್ ಮೈಕಲ್ ಆಂಗ್ಲ ಶಾಲೆ ಸುರಕ್ಷಿತ್ ಗೌಡ ತೃತೀಯ ಸ್ಥಾನ ಹಾಗೂ ಬ್ಲಾಸಮ್ ಶಾಲೆಯ ಭೂಮಿಕಾ.ಎಸ್, ಸೃಜನ್.ಎನ್ ಸಮಾಧಾನಕರ ಬಹುಮಾನ ಪಡೆದುಕೊಂಡರು.ಕೆ ಕೆ ಪಿ ಸುದ್ದಿ 02(1):
ಕನಕಪುರದ ಬ್ಲಾಸಮ್ ಶಾಲಾ ಆವರಣದಲ್ಲಿ ಕನ್ನಡಪ್ರಭ ಮತ್ತು ಏಷ್ಯಾನೆಟ್ ವ ಸುವರ್ಣ ನ್ಯೂಸ್ ಆಯೋಜಿಸಿದ್ದ ತಾಲೂಕು ಮಟ್ಟದ ಚಿತ್ರಕಲಾ ಸ್ಪರ್ಧೆಯಲ್ಲಿ ಭಾಗವಹಿಸಿದ್ದ ಮಕ್ಕಳು.ಕೆ ಕೆ ಪಿ ಸುದ್ದಿ 2(2):
ಕನ್ನಡಪ್ರಭ ಮತ್ತು ಏಷ್ಯಾನೆಟ್ ವ ಸುವರ್ಣ ನ್ಯೂಸ್ ಆಯೋಜಿಸಿದ್ದ ತಾಲೂಕು ಮಟ್ಟದ ಚಿತ್ರಕಲಾ ಸ್ಪರ್ಧೆಯಲ್ಲಿ ವಿಜೇತರಾದ ಮಕ್ಕಳಿಗೆ ಗಣ್ಯರು ಬಹುಮಾನ ವಿತರಿಸಿದರು.