ಸಾರಾಂಶ
ಮಾಗಡಿ: ಪಟ್ಟಣದ ಐತಿಹಾಸಿಕ ತಿರುಮಲೆ ಶ್ರೀ ರಂಗನಾಥಸ್ವಾಮಿ ದೇವರಿಗೆ 1.30 ಕೋಟಿ ಮೌಲ್ಯದ ಚಿನ್ನಾಭರಣವನ್ನು ದೇವಸ್ಥಾನದ ಅರ್ಚಕರ ಕುಟುಂಬದಿಂದ ಸಮರ್ಪಣೆ ಮಾಡಲಾಗುತ್ತಿದೆ.
ಮಾಗಡಿ: ಪಟ್ಟಣದ ಐತಿಹಾಸಿಕ ತಿರುಮಲೆ ಶ್ರೀ ರಂಗನಾಥಸ್ವಾಮಿ ದೇವರಿಗೆ 1.30 ಕೋಟಿ ಮೌಲ್ಯದ ಚಿನ್ನಾಭರಣವನ್ನು ದೇವಸ್ಥಾನದ ಅರ್ಚಕರ ಕುಟುಂಬದಿಂದ ಸಮರ್ಪಣೆ ಮಾಡಲಾಗುತ್ತಿದೆ.
ದೇವಾಲಯದ ಪ್ರಧಾನ ಅರ್ಚಕರಾಗಿದ್ದ ಕಲ್ಯಾಣಿ ವೆಂಕಟರಂಗಾಚಾರ್ ಅಯ್ಯಂಗಾರ್ ಕುಟುಂಬದ ವತಿಯಿಂದ, ಶ್ರೀ ರಂಗನಾಥ ಸ್ವಾಮಿಯ ಮೂಲ ವಿಗ್ರಹಕ್ಕೆ ಅಭಯ ಹಸ್ತ, ಗದ ಹಸ್ತಗಳನ್ನು ಶೀಘ್ರದಲ್ಲೇ ಸಮರ್ಪಣೆ ಮಾಡಲಾಗುತ್ತದೆ ಎಂದು ಅರ್ಚಕರ ಮೊಮ್ಮಗ ಸಂತೋಷ್ ಅಯ್ಯಂಗಾರ್ ತಿಳಿಸಿದ್ದಾರೆ.ಶ್ರೀರಂಗನಾಥ ಸ್ವಾಮಿ ದೇವರ ಕೃಪೆಯಿಂದ ನಮ್ಮ ಕುಟುಂಬಕ್ಕೆ ಸಾಕಷ್ಟು ಅನುಕೂಲವಾಗಿದ್ದು ದೇವರಿಗಾಗಿ ಏನಾದರೂ ಸಮರ್ಪಣೆ ಮಾಡಬೇಕೆಂದು ಕುಟುಂಬಸ್ಥರು ತೀರ್ಮಾನ ಮಾಡಿದ್ದೆವು. ಈಗ ದೇವರಿಗೆ ಚಿನ್ನದ ಅಭಯ ಹಸ್ತ ಮತ್ತು ಗದಹಸ್ತವನ್ನು ನೀಡಲಾಗುತ್ತಿದ್ದು ಇದನ್ನು ಭಾರತೀಯ ಸೇನೆ, ರೈತರು ಹಾಗೂ ಲೋಕಕಲ್ಯಾಣಾರ್ಥವಾಗಿ ಸಮರ್ಪಣೆ ಮಾಡಲಾಗುತ್ತಿದೆ. ಮುಂದೆ ಸಮರ್ಪಣಾ ದಿನಾಂಕವನ್ನು ತಿಳಿಸಲಾಗುತ್ತದೆ ಎಂದು ಸಂತೋಷ್ ಹೇಳಿದ್ದಾರೆ.
ಉದ್ಯಮಿ ಸತೀಶ್ ಈಗಾಗಲೇ ಒಂದು ಕೋಟಿ ವೆಚ್ಚದ ವಜ್ರದ ಕಿರೀಟ ಹಾಗೂ ಪಾದುಕೆಗಳನ್ನ ಸಮರ್ಪಣೆ ಮಾಡಿದ್ದಾರೆ. ಪೋಟೋ 1ಮಾಗಡಿ1:ಮಾಗಡಿ ಪಟ್ಟಣದ ಐತಿಹಾಸಿಕ ಶ್ರೀ ರಂಗನಾಥ ಸ್ವಾಮಿಗೆ ಚಿನ್ನದ ಅಭಯ ಹಸ್ತ ಹಾಗೂ ಗದಹಸ್ತ ಸಮರ್ಪಣೆ ಮಾಡಲಿದ್ದಾರೆ.