ಸಾರಾಂಶ
ತುಮುಲ್ ನಿರ್ದೇಶಕರಾಗಿ ಆಯ್ಕೆಯಾದ ಚಂದ್ರಶೇಖರರೆಡ್ಡಿ ಅವರಿಗೆ ತಾಲೂಕಿನ ಬೆಳ್ಳಿಬಟ್ಟಲು ಗ್ರಾಮದ ಹಾಲು ಉತ್ಪಾದಕ ಸಂಘದ ಕಾರ್ಯಕಾರಿ ಸಮಿತಿ ವತಿಯಿಂದ ಮಂಗಳವಾರ ಬೆಳ್ಳಿಯ ಬಟ್ಟಲು ಉಡುಗೊರೆಯಾಗಿ ನೀಡಿ ಗೌರವಿಸಲಾಯಿತು.
ಕನ್ನಡಪ್ರಭವಾರ್ತೆ ಪಾವಗಡ
ತುಮುಲ್ ನಿರ್ದೇಶಕರಾಗಿ ಆಯ್ಕೆಯಾದ ಚಂದ್ರಶೇಖರರೆಡ್ಡಿ ಅವರಿಗೆ ತಾಲೂಕಿನ ಬೆಳ್ಳಿಬಟ್ಟಲು ಗ್ರಾಮದ ಹಾಲು ಉತ್ಪಾದಕ ಸಂಘದ ಕಾರ್ಯಕಾರಿ ಸಮಿತಿ ವತಿಯಿಂದ ಮಂಗಳವಾರ ಬೆಳ್ಳಿಯ ಬಟ್ಟಲು ಉಡುಗೊರೆಯಾಗಿ ನೀಡಿ ಗೌರವಿಸಲಾಯಿತು.ಈ ವೇಳೆ ಮಾತನಾಡಿದ ಚಂದ್ರಶೇಖರರೆಡ್ಡಿ ಸ್ಥಳೀಯ ಡೈರಿ ಸದಸ್ಯರಿಂದ ಬೆಳ್ಳಿಯ ಬಟ್ಟಲು ನೀಡಿ ಗೌರವಿಸಿದ್ದು ಅತ್ಯಂತ ಸಂತಸ ತಂದಿದೆ. ಸ್ಥಳೀಯ ಹಾಲು ಉತ್ಪಾದಕ ಸಂಘಗಳ ಸದಸ್ಯರಿಗೆ ಅನುಕೂಲ ಕಲ್ಪಿಸುವ ಹಿನ್ನೆಲೆಯಲ್ಲಿ ಹಸುಗಳ ಖರೀದಿಗೆ ಸಾಲಸೌಲಭ್ಯ, ಆರೋಗ್ಯ ವಿಮೆ, ಶಾಲಾ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ಮಕ್ಕಳ ಶೈಕ್ಷಣಿಕ ಪ್ರಗತಿಗೆ ಪ್ರೋತ್ಸಾಹ ಹಾಗೂ ನಂದಿನಿ ಹಾಸ್ಟೆಲ್ ನಲ್ಲಿ ಸೀಟು, ಹೈನುಗಾರಿಕೆ ಉತ್ತೇಜನ ಹಾಗೂ ರೈತರ ಪ್ರಗತಿ ಸೇರಿದಂತೆ ಗ್ರಾಮದ ಪ್ರಗತಿಗೆ ವಿಶೇಷ ಒತ್ತು ನೀಡಲಿದ್ದು, ಜಿಲ್ಲಾ ಹಾಲು ಒಕ್ಕೂಟದ ನಿಯಮನುಸಾರ ಸೌಲಭ್ಯ ಕಲ್ಪಿಸಲು ಬದ್ದರಾಗಿದ್ದೇವೆ. ರೈತರ ಪ್ರಗತಿ ಹಿನ್ನಲೆಯಲ್ಲಿ ತಾಲೂಕಿನಲ್ಲಿ ಇನ್ನೂ ಹೆಚ್ಚು ಡೈರಿಗಳನ್ನು ಸ್ಥಾಪಿಸಲು ಅಸಕ್ತಿ ವಹಿಸಲಾಗಿದ್ದು ಇನ್ನೂ ಗ್ರಾಮಗಳ ಡೈರಿಗಳ ಪ್ರಗತಿಗೆ ಹೆಚ್ಚಿನ ಸಹಕಾರ ಹಾಗೂ ಪ್ರೋತ್ಸಾಹ ನೀಡುವ ಭರವಸೆ ವ್ಯಕ್ತಪಡಿಸಿದರು.
ಇದೇ ವೇಳೆ ತಾಲೂಕಿನ ರಂಗಸಮುದ್ರ ಗ್ರಾಪಂ ಅಧ್ಯಕ್ಷೆ ಮಾರಕ್ಕ,ಸದಸ್ಯರಾದ ಅಕ್ಕಮ್ಮ, ಮಹದೇವಮ್ಮ,ಗೋಪಾಲಕೃಷ್ಣಸ್ವಾಮಿ, ಬಿ.ಸಿ.ರಾಮಪ್ಪ,ಮಚ್ಚಪ್ಪ, ಗೋಪಾಲ್, ಬಿ.ಆರ್.ಗೋಪಾಲಕೃಷ್ಣ, ಬಿ.ಒ.ಈಶ್ವರಪ್ಪ, ಎನ್.ಪ್ರಕಾಶ್, ಬಿ.ಟಿ.ನಾಗರಾಜು, ಬಿ.ಎಂ.ತಿಪ್ಪೇಸ್ವಾಮಿ, ಚಂದ್ರಶೇಖರ್, ಬಾಬಾಸಾಬ್, ಮಹದೇವಮ್ಮ, ಭಾಗ್ಯಮ್ಮ ಚಂದನಮ್ಮ, ಪಾರ್ವತಮ್ಮ , ಬಿ.ಆರ್.ಶಿವಣ್ಣ, ಬಿ.ಎ.ರಾಮಕೃಷ್ಣ , ಬಿ.ಎಂ.ರಮೇಶ್ ಇತರರಿದ್ದರು.