ಸವಳಂಗ ಗ್ರಾಪಂ ಅಧ್ಯಕ್ಷರಾಗಿ ಗಿರೀಶ್‌ ಪಾಟೀಲ್‌ ಆಯ್ಕೆ

| Published : Jun 21 2024, 01:08 AM IST

ಸಾರಾಂಶ

ನ್ಯಾಮತಿ ತಾಲೂಕಿನ ಸವಳಂಗ ಗ್ರಾಮ ಪಂಚಾಯಿತಿ ಅಧ್ಯಕ್ಷರ ಆಯ್ಕೆಗೆ ಲಾಟರಿ ಮೂಲಕ ಚುನಾವಣೆ ನಡೆದಿದ್ದು, ನೂತನ ಅಧ್ಯಕ್ಷರಾಗಿ ಗಿರೀಶ್‌ ಪಾಟೀಲ್‌ ಆಯ್ಕೆಯಾಗಿದ್ದಾರೆ.

ನ್ಯಾಮತಿ: ತಾಲೂಕಿನ ಸವಳಂಗ ಗ್ರಾಮ ಪಂಚಾಯಿತಿ ಅಧ್ಯಕ್ಷರ ಆಯ್ಕೆಗೆ ಲಾಟರಿ ಮೂಲಕ ಚುನಾವಣೆ ನಡೆದಿದ್ದು, ನೂತನ ಅಧ್ಯಕ್ಷರಾಗಿ ಗಿರೀಶ್‌ ಪಾಟೀಲ್‌ ಆಯ್ಕೆಯಾಗಿದ್ದಾರೆ.

ಗ್ರಾಮ ಪಂಚಾಯಿತಿಯು 13 ಸದಸ್ಯ ಬಲ ಹೊಂದಿದೆ. ಹಿಂದಿನ ಅಧ್ಯಕ್ಷರ ರಾಜೀನಾಮೆಯಿಂದ ತೆರವಾಗಿದ್ದ ಸ್ಥಾನಕ್ಕೆ ಬುಧವಾರ ಚುನಾವಣೆ ನಡೆಯಿತು. ಅಧ್ಯಕ್ಷ ಸ್ಥಾನಕ್ಕೆ ನಾಗರಾಜ ನಾಯ್ಕ, ಬಸವರಾಜಪ್ಪ ಮತ್ತು ಗಿರೀಶ್‌ ಪಾಟೀಲ್‌ ನಾಮಪತ್ರ ಸಲ್ಲಿಸಿದ್ದರು.

ಚುನಾವಣೆಯಲ್ಲಿ ತೀರ್ವ ಪೈಪೋಟಿ ನಡೆದು ಬಸವರಾಜಪ್ಪ ಮತ್ತು ಗಿರೀಶ್‌ ಪಾಟೀಲ್‌ ತಲಾ 6 ಮತಗಳು ಲಭಿಸಿದ್ದವು. 1 ಮತ ಅಸಿಂಧುವಾಗಿದ್ದರಿಂದ ನಾಗರಾಜ ನಾಯ್ಕ ಅವರಿಗೆ ಯಾವುದೇ ಮತ ಲಭಿಸಲಿಲ್ಲ.

ಬಸವರಾಜಪ್ಪ ಮತ್ತು ಗಿರೀಶ್‌ ಪಾಟೀಲ್‌ಗೆ ಸಮಮತ ಬಂದ ಹಿನ್ನೆಲೆ ಲಾಟರಿ ಮುಖಾಂತರ ಆಯ್ಕೆಗೆ ನಿರ್ಧರಿಸಲಾಯಿತು. ಅಂತೆಯೇ, ನಡೆದ ಲಾಟರಿ ಆಯ್ಕೆಯಲ್ಲಿ ಗಿರೀಶ್‌ ಪಾಟೀಲ್‌ ಅಧ್ಯಕ್ಷರಾಗಿ ಆಯ್ಕೆಯಾದರು. ಚುನಾವಣಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿದ ಪ್ರಭಾರ ಬಿಇಒ ತಿಪ್ಪೇಸ್ವಾಮಿ ಅಧ್ಯಕ್ಷರ ಆಯ್ಕೆ ಘೋಷಣೆ ಮಾಡಿದರು.

ಈ ಸಂದರ್ಭ ಉಪಾಧ್ಯಕ್ಷೆ ನಿಂಗಮ್ಮ, ಸದಸ್ಯರಾದ ರಾಜಪ್ಪ, ಬಸವರಾಜಪ್ಪ, ಲಲಿತಮ್ಮ, ರತ್ನಮ್ಮ, ಗಾಯಿತ್ರಿ, ರುಕ್ಮಿಣಿಬಾಯಿ, ನೀಲಾಬಾಯಿ, ನೇತ್ರಾವತಿ, ಕೃಷ್ಣಪ್ಪ, ವಸಂತಾ ಸೇರಿದಂತೆ ಗ್ರಾಪಂ ಅಭಿವೃದ್ಧಿ ಅಧಿಕಾರಿ, ಸಿಬ್ಬಂದಿ ಇದ್ದರು.

- - - (ಫೋಟೋ: ಗಿರೀಶ್‌ ಪಾಟೀಲ್‌)