ಬಾಲಕಿ ಹತ್ಯೆ ಪ್ರಕರಣ: ಹಿಂದೂ ಜಾಗರಣಾ ವೇದಿಕೆ ಖಂಡನೆ, ಕಠಿಣ ಶಿಕ್ಷೆಗೆ ಆಗ್ರಹ

| Published : May 12 2024, 01:20 AM IST

ಬಾಲಕಿ ಹತ್ಯೆ ಪ್ರಕರಣ: ಹಿಂದೂ ಜಾಗರಣಾ ವೇದಿಕೆ ಖಂಡನೆ, ಕಠಿಣ ಶಿಕ್ಷೆಗೆ ಆಗ್ರಹ
Share this Article
  • FB
  • TW
  • Linkdin
  • Email

ಸಾರಾಂಶ

ವಿದ್ಯಾರ್ಥಿನಿ ಮೀನಾಳ ಹತ್ಯೆ ಖಂಡನೀಯ. ಇದೊಂದು ಹೇಯ ಕೃತ್ಯ ಎಂದು ಹಿಂದೂ ಜಾಗರಣ ವೇದಿಕೆ ಜಿಲ್ಲಾ ಸಂಯೋಜಕ ಕುಕ್ಕೇರ ಅಜಿತ್‌ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಮಡಿಕೇರಿ

ಸೋಮವಾರಪೇಟೆ ತಾಲೂಕಿನ ಸೂರ್ಲಬ್ಬಿಯಲ್ಲಿ ನಡೆದ ವಿದ್ಯಾರ್ಥಿನಿ ಮೀನಾಳ ಹತ್ಯೆ ಖಂಡನೀಯ ಮತ್ತು ಇದೊಂದು ಹೇಯ ಕೃತ್ಯವೆಂದು ಹಿಂದೂ ಜಾಗರಣಾ ವೇದಿಕೆಯ ಕೊಡಗು ಜಿಲ್ಲಾ ಸಂಯೋಜಕ್ ಕುಕ್ಕೇರ ಅಜಿತ್‌ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಪತ್ರಿಕಾ ಪ್ರಕಟಣೆ ನೀಡಿರುವ ಅವರು ಭಾರತೀಯ ಕಾನೂನಿನಡಿ ಮದುವೆ ಮಾಡಿಕೊಳ್ಳಲು ಪುರುಷರಿಗೆ ಕನಿಷ್ಠ 21 ವರ್ಷ ಹಾಗೂ ಯುವತಿಯರಿಗೆ ಕನಿಷ್ಠ 18ವರ್ಷ ಪೂರ್ಣಗೊಂಡಿರಬೇಕು. ಆದರೆ ಎರಡು ವರ್ಷ ಕಾಯುವ ತಾಳ್ಮೆಯಿಲ್ಲದ 32 ವರ್ಷದ ಆರೋಪಿ 16 ವರ್ಷದ ಬಾಲಕಿಯ ರುಂಡ ಕತ್ತರಿಸಿ ಕೊಲೆ ಮಾಡಿರುವುದನ್ನು ತೀವ್ರವಾಗಿ ಖಂಡಿಸುವುದಾಗಿ ತಿಳಿಸಿದ್ದಾರೆ.

ದೇಶಕ್ಕೆ ಅಪಾರ ಕೊಡುಗೆ ನೀಡಿರುವ ಖ್ಯಾತಿಯ ಪುಟ್ಟ ಜಿಲ್ಲೆ ಕೊಡಗಿನಲ್ಲಿ ಈ ರೀತಿಯ ಘಟನೆ ದೇಶಕ್ಕೆ ಅಪಾರ ಕೊಡುಗೆ ನೀಡಿರುವ ಖ್ಯಾತಿಯ ಪುಟ್ಟ ಜಿಲ್ಲೆ ಕೊಡಗಿನಲ್ಲಿ ಈ ರೀತಿಯ ಘಟನೆ ನಡೆದಿರುವುದು ಸಜ್ಜನ ನಾಗರಿಕ ಸಮಾಜ ತಲೆತಗ್ಗಿಸುವಂತೆ ಮಾಡಿದೆ. ದುಷ್ಕೃತ್ಯ ಎಸಗಿರುವ ಆರೋಪಿಗೆ ಕಾನೂನಿನಡಿ ಶಿಕ್ಷೆ ವಿಧಿಸಬೇಕು ಮತ್ತು ಪೊಲೀಸ್‌ ಇಲಾಖೆ ನಾಗರಿಕ ಸಮಾಜಕ್ಕೆ ಅಭಯ ನೀಡಬೇಕು ಎಂದು ಆಗ್ರಹಿಸಿದ್ದಾರೆ.