ಕನ್ನಡಪ್ರಭ ವಾರ್ತೆ ಬೈಲಹೊಂಗಲ ಅಖಂಡ ಭಾರತವನ್ನು ಬರಿ ಕಾಲ್ನಡಿಗೆಯಲ್ಲಿ ಸಂಚಾರ ಮಾಡಿದ ಶ್ರೀ ಗುರು ಸಿದ್ಧಾರೂಢರ ಗುರು ಪರಂಪರೆಗೆ ಐತಿಹಾಸಿಕ ಹಿನ್ನಲೆ ಇದೆ. ಆ ಮಹಾ ಮಹಿಮರು ಹಾಕಿಕೊಟ್ಟ ಭಕ್ತಿ ಮಾರ್ಗದಲ್ಲಿ ಪ್ರತಿಯೊಬ್ಬರು ಮುನ್ನಡೆದು ಸಾರ್ಥಕ ಬದುಕು ಕಟ್ಟಿಕೊಳ್ಳಬೇಕು ಎಂದು ಸಂಸದ ಜಗದೀಶ ಶೆಟ್ಟರ ಹೇಳಿದರು.
ಕನ್ನಡಪ್ರಭ ವಾರ್ತೆ ಬೈಲಹೊಂಗಲ
ಅಖಂಡ ಭಾರತವನ್ನು ಬರಿ ಕಾಲ್ನಡಿಗೆಯಲ್ಲಿ ಸಂಚಾರ ಮಾಡಿದ ಶ್ರೀ ಗುರು ಸಿದ್ಧಾರೂಢರ ಗುರು ಪರಂಪರೆಗೆ ಐತಿಹಾಸಿಕ ಹಿನ್ನಲೆ ಇದೆ. ಆ ಮಹಾ ಮಹಿಮರು ಹಾಕಿಕೊಟ್ಟ ಭಕ್ತಿ ಮಾರ್ಗದಲ್ಲಿ ಪ್ರತಿಯೊಬ್ಬರು ಮುನ್ನಡೆದು ಸಾರ್ಥಕ ಬದುಕು ಕಟ್ಟಿಕೊಳ್ಳಬೇಕು ಎಂದು ಸಂಸದ ಜಗದೀಶ ಶೆಟ್ಟರ ಹೇಳಿದರು.ಪಟ್ಟಣದ ಶ್ರೀನಗರದ ಸದ್ಗುರು ಶ್ರೀ ಗುರುಸಿದ್ದಾರೂಢ ಮಠದ ಮೂರನೇ ವರ್ಷದ ಜಾತ್ರಾ ಮಹೋತ್ಸವ ಅಂಗವಾಗಿ ನಡೆದ ಆಧ್ಯಾತಿಕ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು. ಭಾರತೀಯ ಸನಾತನ ಧರ್ಮದ ಎಲ್ಲ ಆಚರಣೆ, ಪರಂಪರೆ, ಪದ್ಧತಿಗಳಿಗೆ ಅದರದೆ ಆದ ಮಹತ್ವವಿದೆ. ಜಾತ್ರೆ, ಉತ್ಸವಗಳು, ಧಾರ್ಮಿಕ ಆಚರಣೆಗಳಲ್ಲಿ ಎಲ್ಲರೂ ಸಕ್ರೀಯವಾಗಿ ತೊಡಗಿಕೊಂಡು ಸಂಸ್ಕೃತಿ, ಸಂಪ್ರದಾಯವನ್ನು ಎತ್ತಿ ಹಿಡಿಯಬೇಕು. ಮಕ್ಕಳಿಗೂ ಸಂಸ್ಕಾರದ ಶಿಕ್ಷಣ ನೀಡಿ ಸುಂಸ್ಕೃತರನ್ನಾಗಿಸಬೇಕು. ಶ್ರೀಮಠದ ಏಳ್ಗೆಗೆ ಅಗತ್ಯ ಸಹಾಯ, ಸಹಕಾರ ನೀಡುವುದಾಗಿ ಅವರು ತಿಳಿಸಿದರು.ರಾಜ್ಯಸಭಾ ಸದಸ್ಯ ಈರಣ್ಣಾ ಕಡಾಡಿ ಮಾತನಾಡಿ, ಗುರು ಸಿದ್ಧಾರೂಢರ ಮಹಿಮೆಯ ಕುರಿತಾಗಿ ಸಾಂದರ್ಭಿಕವಾಗಿ ತಿಳಿಸಿದರು. ಅಲ್ಲದೇ, ಸಿದ್ಧಾರೂಢರ ಅಜ್ಜನವರ ತತ್ವ, ಉಪದೇಶಗಳನ್ನು ಎಲ್ಲರೂ ಪಾಲಿಸಬೇಕು ಎಂದರು.ಇಂಚಲ ಶಿವಯೋಗೀಶ್ವರಮಠದ ಪೀಠಾಧಿಪತಿ ಶಿವಾನಂದ ಭಾರತಿ ಸ್ವಾಮೀಜಿ ಆಶೀರ್ವಚನ ನೀಡಿದರು. ಮೂರುಸಾವಿರಮಠದ ಪ್ರಭುನೀಲಕಂಠ ಸ್ವಾಮೀಜಿ, ನೇಗಿನಹಾ ಅದ್ವೈತಾನಂದ ಭಾರತಿ ಸ್ವಾಮೀಜಿ, ಮಹಾಂತಯ್ಯ ಶಾಸ್ತ್ರಿ ಆರಾದ್ರಿಮಠ, ವೀರಯ್ಯ ಸ್ವಾಮೀಜಿ ಹಿರೇಮಠ ಸಾನ್ನಿಧ್ಯವಹಿಸಿದ್ದರು. ಶಾಸಕ ಮಹಾಂತೇಶ ಕೌಜಲಗಿ ಅಧ್ಯಕ್ಷತೆ ವಹಿಸಿದ್ದರು. ಅತಿಥಿಗಳಾಗಿ ಮಾಜಿ ಶಾಸಕರಾದ ಡಾ.ವಿಶ್ವನಾಥ ಪಾಟೀಲ, ಮಹಾಂತೇಶ ದೊಡಗೌಡರ, ಉದ್ಯಮಿ ವಿಜಯ ಮೆಟಗುಡ್ಡ, ಶಂಕರ ಮಾಡಲಗಿ, ಎಫ್.ಎಸ್.ಸಿದ್ಧನಗೌಡರ, ರುದ್ರಗೌಡ ಗೌಡತಿ ಆಗಮಿಸಿದ್ದರು.ಸಕಲ ವಾದ್ಯಮೇಳಗಳೊಂದಿಗೆ ಪಲ್ಲಕ್ಕಿ ಉತ್ಸವ, ಸುಮಂಗಲೆಯರ ಪೂರ್ಣಕುಂಭಮೇಳ ನಡೆಯಿತು.
ಸಿದ್ಧಾರೂಢ ಮಠ ಸೇವಾ ಮತ್ತು ಅಭಿವೃದ್ಧಿ ಸಂಘದಿಂದ, ಗುರು ಹಿರಿಯರಿಂದ ಶ್ರೀಮಠಕ್ಕೆ ಆಗಮಿಸಿದ ಪೂಜ್ಯರು ಹಾಗೂ ಗಣ್ಯರನ್ನು, ಶ್ರೀಮಠದ ಸೇವಾ ಕೈಂಕರ್ಯ ಕೈಗೊಂಡ ಭಕ್ತರನ್ನು ಸತ್ಕರಿಸಲಾಯಿತು.ಶ್ರೀನಗರ, ಪ್ರಭುನಗರ, ಬಸವ ನಗರ, ಬೈಲಹೊಂಗಲ ಸುತ್ತಮುತ್ತಲಿನ ವಿವಿಧ ಗ್ರಾಮಗಳ ಭಕ್ತರು ಭಾಗವಹಿಸಿ ಸಿದ್ಧಾರೂಢರ ದರ್ಶನದೊಂದಿಗೆ ಪ್ರಸಾದ ಸ್ವೀಕರಿಸಿ ಅಜ್ಜನ ಕೃಪೆಗೆ ಪಾತ್ರರಾದರು.
ವಕೀಲರ ಸಂಘದ ಉಪಾಧ್ಯಕ್ಷ ಎ.ಎಂ.ಸಿದ್ರಾಮನಿ ಸ್ವಾಗತಿಸಿದರು. ಶಿಕ್ಷಕ ಸಿದ್ದು ನೇಸರಗಿ ನಿರೂಪಿಸಿದರು. ಶಿಕ್ಷಕ ಆರ್.ಎನ್.ತಿರಕನ್ನವರ, ಎಸ್.ಕೆ.ದಾಸನಕೊಪ್ಪ ವಂದಿಸಿದರು. ಹೋಮ, ರುದ್ರಾಭಿಷೇಕ ಮತ್ತು ಮಹಾ ಪ್ರಸಾದದೊಂದಿಗೆ ಜಾತ್ರೆ ಸಂಪನ್ನಗೊಂಡಿತು.ಬೈಲಹೊಂಗಲ ಗುರು ಸಿದ್ಧಾರೂಢಮಠದ 3ನೇ ವರ್ಷದ ಜಾತ್ರಾ ಮಹೋತ್ಸವವನ್ನು ಸಂಸದ ಜಗದೀಶ ಶೆಟ್ಟರ ಉದ್ಘಾಟಿಸಿದರು. ರಾಜ್ಯಸಭಾ ಸದಸ್ಯ ಈರಣ್ಣಾ ಕಡಾಡಿ, ಇಂಚಲ ಶಿವಾನಂದ ಭಾರತಿ ಸ್ಚಾಮೀಜಿ, ಮಾಜಿ ಶಾಸಕ ಡಾ.ವಿಶ್ವನಾಥ ಪಾಟೀಲ, ಅನೇಕರು ಇದ್ದರು.