ವಾಣಿ ಶಿವರಾಂಗೆ ಕಾಂಗ್ರೆಸ್‌ ಟಿಕೆಟ್ ನೀಡಿ

| Published : Mar 19 2024, 12:46 AM IST

ಸಾರಾಂಶ

ನಿವೃತ್ತ ಐಎಎಸ್ ಅಧಿಕಾರಿ ದಿ. ಕೆ. ಶಿವರಾಂ ಪತ್ನಿ ವಾಣಿ ಶಿವರಾಂಗೆ ಕಾಂಗ್ರೆಸ್ ಪಕ್ಷ ಟಿಕೆಟ್ ನೀಡುವ ಮೂಲಕ ಸಹಕರಿಸಬೇಕು, ಆ ಮೂಲಕ ಕಾಂಗ್ರೆಸ್ ಪಕ್ಷದ ಮೇಲಿರುವ ಅವರ ಋಣ ತೀರಿಸುವ ನಿಟ್ಟಿನಲ್ಲಿ ಮುಂದಾಗಬೇಕು ಎಂದು ಛಲವಾದಿ ಮಹಾಸಭಾ ರಾಜ್ಯ ಪ್ರಭಾರಿ ಅಧ್ಯಕ್ಷ ಅಣಗಳ್ಳಿ ಬಸವರಾಜ್ ಆಗ್ರಹಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಕೊಳ್ಳೇಗಾಲನಿವೃತ್ತ ಐಎಎಸ್ ಅಧಿಕಾರಿ ದಿ. ಕೆ. ಶಿವರಾಂ ಪತ್ನಿ ವಾಣಿ ಶಿವರಾಂಗೆ ಕಾಂಗ್ರೆಸ್ ಪಕ್ಷ ಟಿಕೆಟ್ ನೀಡುವ ಮೂಲಕ ಸಹಕರಿಸಬೇಕು, ಆ ಮೂಲಕ ಕಾಂಗ್ರೆಸ್ ಪಕ್ಷದ ಮೇಲಿರುವ ಅವರ ಋಣ ತೀರಿಸುವ ನಿಟ್ಟಿನಲ್ಲಿ ಮುಂದಾಗಬೇಕು ಎಂದು ಛಲವಾದಿ ಮಹಾಸಭಾ ರಾಜ್ಯ ಪ್ರಭಾರಿ ಅಧ್ಯಕ್ಷ ಅಣಗಳ್ಳಿ ಬಸವರಾಜ್ ಆಗ್ರಹಿಸಿದ್ದಾರೆ.

ಕೆ ಶಿವರಾಂ ಈ ಹಿಂದೆ ಕಾಂಗ್ರೆಸ್ ಪಕ್ಷದಲ್ಲಿದ್ದ ವೇಳೆ ಕಾಂಗ್ರೆಸ್ ಪಕ್ಷದ ಘನತೆ -ಗೌರವ ಹೆಚ್ಚಿಸುವ ಕೆಲಸ ಮಾಡಿದ್ದಾರೆ. ಅಲ್ಲದೆ ದಲಿತರು ಸಿಎಂ ಆಗಬೇಕು ಎಂಬ ದೊಡ್ದ (ಕೂಗು) ಹೋರಾಟದಲ್ಲಿ ಮುಂಚೂಣಿ ನಾಯಕರಾಗಿ ಗುರುತಿಸಿಕೊಂಡಿದ್ದರು. ಕಾಂಗ್ರೆಸ್ ಪಕ್ಷಕ್ಕೆ ಅವರ ಕೊಡುಗೆ ಅಪಾರ ಮಲ್ಲಿಕಾರ್ಜುನ ಖರ್ಗೆ ಸಿಎಂ ಆಗಬೇಕು ಎಂಬ ಅಭಿಲಾಷೆ ಅವರದಾಗಿತ್ತು ಬದಲಾದ ಸನ್ನಿವೇಶದಲ್ಲಿ ಕಾಂಗ್ರೆಸ್ ಪಕ್ಷ ತೊರೆದ ಅವರು ಭಾರತೀಯ ಜನತಾ ಪಾರ್ಟಿಯಲ್ಲೂ ಗುರುತಿಸಿಕೊಂಡು ಅಲ್ಲು ಸಹ ತಮ್ಮದೇ ದಾಟಿಯಲ್ಲಿ ಕೊಡುಗೆ ನೀಡಿದ್ದಾರೆ. ಅವರ ನಿಧನದ ನಂತರ, ಬಿಜೆಪಿಗೆ ಅವರ ಪತ್ನಿ ವಾಣಿ ಶಿವರಾಂ ಅವರಿಗೆ ಟಿಕೆಟ್ ನೀಡುವಂತೆ ಮನವಿ ಸಲ್ಲಿಸಲಾಗಿತ್ತು ಆದರೆ ಕೊನೆ ಕ್ಷಣದಲ್ಲಿ ಬಿಜೆಪಿ ಸಹ ಅವರ ಕುಟುಂಬಕ್ಕೆ ದ್ರೋಹ ಮಾಡಿದೆ ಕಾಂಗ್ರೆಸ್ ಶಿವರಾಂ ಅವರ ಆತ್ಮಕ್ಕೆ ಶಾಂತಿ ಕೋರುವ ಮೂಲಕ ಅವರ ಕುಟುಂಬಕ್ಕೆ ಚಾಮರಾಜನಗರ ಲೋಕಸಭಾ ಕ್ಷೇತ್ರಕ್ಕೆ ಟಿಕೆಟ್ ನೀಡಬೇಕು ಎಂದರು.

ವಾಣಿ ಶಿವರಾಂ ಮೈಸೂರು ಜಿಲ್ಲೆಯ ಮೊಮ್ಮಗಳು. ನಮ್ಮ ಚಾಮರಾಜನಗರ ಜಿಲ್ಲೆಯ ಸೊಸೆ ಎಂಬುದನ್ನ ಕಾಂಗ್ರೆಸ್ ನಾಯಕರು ಮನಗಂಡು ಅವರಿಗೆ ಅವಕಾಶ ಕಲ್ಪಿಸಬೇಕು ಒಂದು ವೇಳೆ ಕಾಂಗ್ರೆಸ್ ಸಹ ಅವಕಾಶ ನೀಡದಿದ್ದಲ್ಲಿ ಅವರನ್ನು ಪಕ್ಷೇತರ ಅಭ್ಯರ್ಥಿಯನ್ನಾಗಿ ಚಾಮರಾಜನಗರ ಮೀಸಲು ಲೋಕಸಭಾ ಕ್ಷೇತ್ರದಿಂದ ನಿಲ್ಲಿಸಬೇಕಾಗುತ್ತದೆ ಇದು ನನ್ನೊಬ್ಬನ ಅಭಿಲಾಷೆಯಲ್ಲ ಸಾವಿರಾರು ಅಭಿಮಾನಿಗಳು ಮತ್ತು ಅವರ ಬೆಂಬಲಿಗರು ಅಭಿಮಾನಿಗಳು ಮತ್ತು ಛಲವಾದಿ ಮುಖಂಡರೆಲ್ಲರ ಅಭಿಪ್ರಾಯವಾಗಿದೆ ಎಂದು ಹೇಳಿದರು.ಕೆ ಶಿವರಾಂ ತಮ್ಮಬದುಕಿನದ್ದಕ್ಕೂ ದಲಿತರು, ಬಡವರ ಸೇವೆಯ ಮೂಲಕ ಗುರುತಿಸಿಕೊಂಡರು ಐಎಎಸ್ ಅಧಿಕಾರಿಯಾಗಿದ್ದ ವೇಳೆ ಅವರು ದಲಿತ ಸಮಾಜಕ್ಕೆ ನೀಡಿದ ಕೊಡುಗೆ ಮತ್ತು ಸೇವೆ ಬಣ್ಣಿಸಲಾಗದ್ದು ಬಿಜೆಪಿ 2 ಬಾರಿ ಟಿಕೆಟ್ ನೀಡದೆ ಅವರನ್ನು ಪಕ್ಷದಲ್ಲಿ ಬಳಸಿಕೊಂಡು ದ್ರೋಹ ಮಾಡಿದೆ . ಈ ಬಾರಿ ಟಿಕೆಟ್ ತಂದೆ ತರುವೆ ಎಂಬ ಅಭಿಲಾಷೆಯನ್ನು ಹೊಂದಿದ್ದರು ಆದರೆ ವಿಧಿ ಅವರನ್ನು ಬಿಡಲಿಲ್ಲ. ಈ ಹಿನ್ನೆಲೆ ಬಿಜೆಪಿ ಮಾನವೀಯ ದೃಷ್ಟಿಯಿಂದ ಅವರ ಕುಟುಂಬಕ್ಕೆ ಆದ್ಯತೆ ನೀಡಬೇಕಿತ್ತು. ಆದರೆ, ಅವರಿಗೆ ವಿನಂತಿಸಿದ್ದರೂ ಸಹ ನೀಡಲಿಲ್ಲ . ಇದು ದುರಂತವೆ ಸರಿ ಕಾಂಗ್ರೆಸ್ ಪಕ್ಷ ಈ ವಾಸ್ತವ ಸತ್ಯವನ್ನ ಅರಿತು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಸಿಎಂ ಸಿದ್ದರಾಮಯ್ಯ ಹಾಗೂ ಕಾಂಗ್ರೆಸ್ ಪಕ್ಷ ಹಿರಿಯರು ಈ ಮನವಿಯನ್ನ ಪರಿಗಣಿಸಬೇಕು ಎಂದಿದ್ದಾರೆ.