ಕಡೂರು, ಶಿಕ್ಷಣದ ಜೊತೆಗೆ ಕ್ರೀಡಾ ಚಟುವಟಿಕೆಗಳಿಗೂ ವಿದ್ಯಾರ್ಥಿಗಳು ಪ್ರಾಮುಖ್ಯತೆ ನೀಡಿದರೆ ಆರೋಗ್ಯವಂತರಾಗಿ ಶಿಕ್ಷಣ ಕಲಿತು ಬದುಕು ರೂಪಿಸಿ ಕೊಳ್ಳಲು ಸಾಧ್ಯ ಎಂದು ಪುರಸಭಾಧ್ಯಕ್ಷ ಭಂಡಾರಿ ಶ್ರೀನಿವಾಸ್ ಹೇಳಿದರು.

ಅಂಬೇಡ್ಕರ್ ಕ್ರೀಡಾಂಗಣದಲ್ಲಿ ತಾಲೂಕು ಮಟ್ಟದ ಕ್ರೀಡಾಕೂಟ

ಕನ್ನಡಪ್ರಭ ವಾರ್ತೆ, ಕಡೂರು

ಶಿಕ್ಷಣದ ಜೊತೆಗೆ ಕ್ರೀಡಾ ಚಟುವಟಿಕೆಗಳಿಗೂ ವಿದ್ಯಾರ್ಥಿಗಳು ಪ್ರಾಮುಖ್ಯತೆ ನೀಡಿದರೆ ಆರೋಗ್ಯವಂತರಾಗಿ ಶಿಕ್ಷಣ ಕಲಿತು ಬದುಕು ರೂಪಿಸಿ ಕೊಳ್ಳಲು ಸಾಧ್ಯ ಎಂದು ಪುರಸಭಾಧ್ಯಕ್ಷ ಭಂಡಾರಿ ಶ್ರೀನಿವಾಸ್ ಹೇಳಿದರು.

ಪಟ್ಟಣದ ಅಂಬೇಡ್ಕರ್ ಕ್ರೀಡಾಂಗಣದಲ್ಲಿ ದೀಕ್ಷಾ ವಿದ್ಯಾಮಂದಿರ ಶಾಲೆ ಮತ್ತು ಶಿಕ್ಷಣ ಇಲಾಖೆ ಸಹಯೋಗದಲ್ಲಿ ನಡೆದ 2024-25ನೇ ಸಾಲಿನ ಹಿರಿಯ ಪ್ರಾಥಮಿಕ ಶಾಲೆಗಳ ತಾಲೂಕು ಮಟ್ಟದ ಗುಂಪು ಆಟಗಳ ಕ್ರೀಡಾಕೂಟ ಉದ್ಘಾಟಿಸಿ ಮಾತನಾಡಿದರು. ವಿದ್ಯಾರ್ಥಿಗಳು ಪ್ರಮುಖವಾಗಿ ಮೊಬೈಲ್ ಗೀಳಿಗೆ ದಾಸರಾಗದೆ ದೇಹ ದಂಡಿಸುವ ಕ್ರೀಡಾ ಚಟುವಟಿಕೆಗಳಲ್ಲಿ ಹೆಚ್ಚು ತೊಡಗಿಸಿಕೊಂಡಾಗ ಬೌದ್ದಿಕ ಸಾಮರ್ಥ್ಯ ವೃದ್ಧಿಸಿಕೊಳ್ಳಲು ಹೆಚ್ಚು ಸಹಕಾರಿ. ಈ ನಿಟ್ಟಿನಲ್ಲಿ ಗುಂಪು ಆಟಗಳು ಕೇವಲ ಕ್ರೀಡಾಕೂಟಕ್ಕೆ ಸೀಮಿತವಾಗದೆ ಪ್ರತಿನಿತ್ಯದ ಕ್ರೀಡಾಭ್ಯಾಸಗಳಾಗಬೇಕು. ಶಿಕ್ಷಕರು ಮಕ್ಕಳ ಪ್ರತಿಭೆಗೆ ಪ್ರೋತ್ಸಾಹಿಸಬೇಕು ಎಂದರು.ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಕೆ.ಎಂ.ಹರೀಶ್ ಮಾತನಾಡಿ, ಆರೋಗ್ಯಯುತ ಬದುಕು ರೂಪಿಸಿಕೊಳ್ಳಲು ಕ್ರೀಡೆಗಳ ಅಗತ್ಯವಿದೆ. ಆಟಗಳನ್ನು ಸೋಲು-ಗೆಲುವಿಗೆ ಸೀಮಿತಗೊಳಿಸದೆ ನಿಮ್ಮ ಭಾಗವಹಿಸಿಕೆ ಬಹು ಮುಖ್ಯ. ಮಕ್ಕಳು ಬಾಲ್ಯದಲ್ಲಿಯೇ ಕ್ರೀಡಾಚಟುವಟಿಕೆಗಳಲ್ಲಿ ತೊಡಗಿಸಿದರೆ ಭವಿಷ್ಯದ ಕ್ರೀಡಾ ಕ್ಷೇತ್ರದಲ್ಲಿ ಮತ್ತಷ್ಟು ಎತ್ತರಕ್ಕೆ ಬೆಳೆಯಲು ಸಾಧ್ಯ ಎಂದರು.ತಾಲೂಕು ಮಟ್ಟದ ಗುಂಪು ಆಟಗಳ ಕ್ರೀಡಾಕೂಟದಲ್ಲಿ 5 ವಲಯಗಳಿಂದ ಸುಮಾರು 600 ಕ್ಕೂ ಹೆಚ್ಚು ಕ್ರೀಡಾಪಟುಗಳು ಭಾಗವಹಿಸಿದ್ದರು.

ಈ ಸಂದರ್ಭದಲ್ಲಿ ಪುರಸಭಾ ಉಪಾಧ್ಯಕ್ಷ ಮಂಜುಳಾ ಚಂದ್ರು, ಜಿಲ್ಲಾ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಭೈರೇಗೌಡ, ದೀಕ್ಷಾ ಶಾಲೆ ಪ್ರಾಚಾರ್ಯ ನವೀನ್ ಡಿ. ಅಲ್ಮೆಡಾ, ಕೆ.ನಾಗರಾಜಪ್ಪ, ಕ್ರೀಡಾಧಿಕಾರಿ ಎಚ್.ಎಲ್. ಮುರುಳಿಧರ್, ಎಂ.ಲಿಂಗರಾಜು, ಬಿ.ಆನಂದಪ್ಪ, ಲತಾಮಣಿ, ಆಂಜನೇಯ ಮತ್ತಿತರು ಹಾಜರಿದ್ದರು.20ಕೆಕೆಡಿಯು1.ಕಡೂರಿನ ಅಂಬೇಡ್ಕರ್ ಕ್ರೀಡಾಂಗಣದಲ್ಲಿ ನಡೆದ ಹಿರಿಯ ಪ್ರಾಥಮಿಕ ಶಾಲೆಗಳ ತಾಲೂಕು ಮಟ್ಟದ ಗುಂಪು ಆಟಗಳ ಕ್ರೀಡಾಕೂಟವನ್ನು ಪುರಸಭಾಧ್ಯಕ್ಷ ಭಂಡಾರಿಶ್ರೀನಿವಾಸ್ ಉದ್ಘಾಟಿಸಿದರು.

20ಕೆಕೆಡಿಯು1ಎ

ಕಡೂರು ಪಟ್ಟಣದ ಅಂಬೇಡ್ಕರ್ ಕ್ರೀಡಾಂಗಣದಲ್ಲಿ ದೀಕ್ಷಾ ವಿದ್ಯಾಮಂದಿರ ಶಾಲೆ ಮತ್ತು ಶಿಕ್ಷಣ ಇಲಾಖೆ ಸಹಯೋಗದಲ್ಲಿ ನಡೆದ ಹಿರಿಯ ಪ್ರಾಥಮಿಕ ಶಾಲೆಗಳ ತಾಲೂಕು ಮಟ್ಟದ ಗುಂಪು ಆಟಗಳ ಕ್ರೀಡಾಕೂಟದಲ್ಲಿ ಪುರಸಭಾಧ್ಯಕ್ಷ ಭಂಡಾರಿ ಶ್ರೀನಿವಾಸ್ ಕ್ರೀಡಾಜ್ಯೋತಿ ಸ್ವೀಕರಿಸಿದರು.