ಅರಣ್ಯ ಭೂಮಿಯಲ್ಲಿ ಮನೆ ಕಟ್ಟಿಕೊಂಡವರ ಮಾಹಿತಿ ನೀಡಿ-ಶಾಸಕ ಬಣಕಾರ

| Published : Jun 21 2024, 01:08 AM IST

ಅರಣ್ಯ ಭೂಮಿಯಲ್ಲಿ ಮನೆ ಕಟ್ಟಿಕೊಂಡವರ ಮಾಹಿತಿ ನೀಡಿ-ಶಾಸಕ ಬಣಕಾರ
Share this Article
  • FB
  • TW
  • Linkdin
  • Email

ಸಾರಾಂಶ

ಹಿರೇಕೆರೂರ ತಾಲೂಕಿನಲ್ಲಿ ಅರಣ್ಯ ಭೂಮಿಯಲ್ಲಿ ಅನಧಿಕೃವಾಗಿ ಮನೆಯನ್ನು ಕಟ್ಟಿಕೊಂಡರುವವರ ಬಗ್ಗೆ ಹಾಗೂ ಶುದ್ಧ ಕುಡಿಯುವ ನೀರಿನ ಘಟಕಗಳ ಸ್ಥಿತಿಗತಿ ಕುರಿತು ಅರಣ್ಯ ಮತ್ತು ಜಿಪಂ ಅಧಿಕಾರಿಗಳು ಸಂಪೂರ್ಣ ಸವಿವರವನ್ನು ನನಗೆ ನೀಡುವಂತೆ ಶಾಸಕ ಯು.ಬಿ.ಬಣಕಾರ ಸಭೆಯಲ್ಲಿ ತಿಳಿಸಿದರು.

ಹಿರೇಕೆರೂರ: ತಾಲೂಕಿನ ಅರಣ್ಯ ಭೂಮಿಯಲ್ಲಿ ಅನಧಿಕೃತವಾಗಿ ಮನೆಯನ್ನು ಕಟ್ಟಿಕೊಂಡಿರುವವರ ಬಗ್ಗೆ ಹಾಗೂ ಶುದ್ಧ ಕುಡಿಯುವ ನೀರಿನ ಘಟಕಗಳ ಸ್ಥಿತಿಗತಿ ಕುರಿತು ಅರಣ್ಯ ಮತ್ತು ಜಿಪಂ ಅಧಿಕಾರಿಗಳು ಸಂಪೂರ್ಣ ಸವಿವರವನ್ನು ನನಗೆ ನೀಡುವಂತೆ ಶಾಸಕ ಯು.ಬಿ. ಬಣಕಾರ ಸಭೆಯಲ್ಲಿ ತಿಳಿಸಿದರು.ಪಟ್ಟಣದ ತಹಸೀಲ್ದಾರ್ ಕಚೇರಿಯ ಸಭಾಭವನದಲ್ಲಿ ಏರ್ಪಡಿಸಿದ್ದ ತಾಲೂಕಿನ ಶುದ್ಧ ಕುಡಿಯುವ ನೀರಿನ ಘಟಕಗಳು ಸ್ಥಿತಿಗತಿ ಮತ್ತು ಅರಣ್ಯ ಭೂಮಿಯಲ್ಲಿ ಅನಧಿಕೃತವಾಗಿ ಮನೆ ನಿರ್ಮಿಸಿಕೊಂಡವರಿಗೆ ಪಟ್ಟಾ ಕೊಡುವ ಬಗ್ಗೆ ಮಾಹಿತಿ ಸಂಗ್ರಹಿಸುವ ಸಭೆಯಲ್ಲಿ ಅವರು ಮಾತನಾಡಿದರು.

ತಾಲೂಕಿನಲ್ಲಿ ರೋಗಗಳು ಹಬ್ಬ ತೊಡಗಿದ್ದು, ಶುದ್ಧ ಕುಡಿಯುವ ನೀರಿನ ಘಟಕಗಳ ಸ್ಥಿತಿಗತಿ ಬಗ್ಗೆ ಜಿಪಂ ಅಧಿಕಾರಿಗಳು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿ, ನನಗೆ ವರದಿ ನೀಡಬೇಕು ಹಾಗೂ ಅರಣ್ಯ ಇಲಾಖೆಯ ಅಧಿಕಾರಿಗಳು ಅರಣ್ಯ ಭೂಮಿಯಲ್ಲಿ ಮನೆ ನಿರ್ಮಿಸಿಕೊಂಡವರ ಕುರಿತು ಮಾಹಿತಿಯನ್ನು ನೀಡಬೇಕು. ಇದರಲ್ಲಿ ಯಾವುದೆ ಲೋಪ ದೋಷಗಳಾಗಬಾರದು. ಅರ್ಹ ಫಲಾನುಭವಿಗಳ ಮಾಹಿತಿಯನ್ನು ಮಾತ್ರ ನೀಡಬೇಕು ಎಂದರು.ಉಪವಿಭಾಗಾಧಿಕಾರಿ ಕೆ.ಚನ್ನಪ್ಪ, ತಹಸೀಲ್ದಾರ್‌ ಎಚ್. ಪ್ರಭಾಕರಗೌಡ, ಕೆ. ಗುರುಬಸವರಾಜ, ತಾಪಂ ಇಒಗಳಾದ ಕೆ.ಬಿ. ಮಲ್ಲಾಡದ, ಕೆ.ಎಂ. ಮಲ್ಲಿಕಾರ್ಜುನ, ಜಿ.ಪಂ. ಎಡಬ್ಲೂಇ ನಂದಿಶ, ವಲಯ ಅರಣ್ಯಾಧಿಕಾರಿ ಸಿದ್ದಮ್ಮ ಕಾರೆ ಹಾಗೂ ಗ್ರಾಪಂ ಅಭಿವೃದ್ಧಿ ಅಧಿಕಾರಿಗಳು ಮತ್ತು ವಿವಿಧ ಇಲಾಖೆಗಳ ಮೇಲಧಿಕಾರಿಗಳು ಇದ್ದರು.ತಹಸೀಲ್ದಾರ್ ಕಚೇರಿಯ ಸಹಾಯಕ ಅಧಿಕಾರಿ ನಾಗರಾಜ ಕಟ್ಟಿಮನಿ ನಿರೂಪಿಸಿದರು.