ಸಂಘಟನಾತ್ಮಕ ಚಟುವಟಿಕೆಗಳಿಗೆ ಹೆಚ್ಚು ಒತ್ತು ನೀಡಿ

| Published : Aug 27 2024, 01:35 AM IST

ಸಂಘಟನಾತ್ಮಕ ಚಟುವಟಿಕೆಗಳಿಗೆ ಹೆಚ್ಚು ಒತ್ತು ನೀಡಿ
Share this Article
  • FB
  • TW
  • Linkdin
  • Email

ಸಾರಾಂಶ

ಕನ್ನಡಪ್ರಭ ವಾರ್ತೆ ವಿಜಯಪುರ ಜಿಲ್ಲೆಯ ಶಿಕ್ಷಕರ ಸಮಸ್ಯೆಗಳಿಗೆ ಸ್ಪಂದಿಸುತ್ತ ಕ್ರೀಯಾಶೀಲರಾಗಿ ಕಾರ್ಯನಿರ್ವಹಿಸಬೇಕು. ಸಂಘಟನಾತ್ಮಕ ಚಟುವಟಿಕೆಗಳಿಗೆ ಹೆಚ್ಚು ಒತ್ತು ನೀಡಿ ಸಮಾಜಮುಖಿಯಾಗಿ ಕಾರ್ಯಗಳನ್ನು ಹೊತ್ತು ನಿರ್ವಹಿಸಬೇಕು ಎಂದು ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ ನುಗ್ಲಿ ಹೇಳಿದರು.

ಕನ್ನಡಪ್ರಭ ವಾರ್ತೆ ವಿಜಯಪುರ

ಜಿಲ್ಲೆಯ ಶಿಕ್ಷಕರ ಸಮಸ್ಯೆಗಳಿಗೆ ಸ್ಪಂದಿಸುತ್ತ ಕ್ರೀಯಾಶೀಲರಾಗಿ ಕಾರ್ಯನಿರ್ವಹಿಸಬೇಕು. ಸಂಘಟನಾತ್ಮಕ ಚಟುವಟಿಕೆಗಳಿಗೆ ಹೆಚ್ಚು ಒತ್ತು ನೀಡಿ ಸಮಾಜಮುಖಿಯಾಗಿ ಕಾರ್ಯಗಳನ್ನು ಹೊತ್ತು ನಿರ್ವಹಿಸಬೇಕು ಎಂದು ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ ನುಗ್ಲಿ ಹೇಳಿದರು.ನಗರದಲ್ಲಿ ನಡೆದ ಸಮಾರಂಭದಲ್ಲಿ ಇಂಡಿಯ ಶಿಕ್ಷಕ ಸಂಘಟನೆ ಪ್ರಮುಖ ಎಸ್.ವ್ಹಿ.ಹರಳಯ್ಯ ಅವರನ್ನು ಬೆಳಗಾವಿ ವಿಭಾಗೀಯ ಉಪಾಧ್ಯಕ್ಷ ಹಾಗೂ ನಗರ ವಲಯದ ಎಸ್.ಎಸ್.ಬೇನೂರ ಇವರನ್ನು ವಿಭಾಗೀಯ ಮಟ್ಟದ ಸಂಘಟನಾ ಕಾರ್ಯದರ್ಶಿಯನ್ನಾಗಿ ನಾಮನಿದೇರ್ಶನ ಮಾಡಿದ್ದು, ಪ್ರಮಾಣ ಪತ್ರ ನೀಡಿ ಮಾತನಾಡಿದರು. ಸರ್ಕಾರವು ಶಿಕ್ಷಕರ ಪರವಾಗಿದೆ. ಸಾಕಷ್ಟು ಸೌಲಭ್ಯಗಳನ್ನು ನೀಡುತ್ತಿದೆ. ಸರ್ಕಾರಿ ನೀಡಿರುವ ಯೋಜನೆಗಳ ಸದ್ಬಳಕೆಯಾಗಬೇಕು. ವಿದ್ಯಾರ್ಥಿಗಳಿಗೆ ಗುಣಾತ್ಮಕ ಶಿಕ್ಷಣದ ಜೊತೆಗೆ ಸಂಸ್ಕಾರಯುತ ಶಿಕ್ಷಣವನ್ನು ನೀಡಿ ಸಮಾಜಕ್ಕೆ ಏನಾದರೂ ಕೊಡುಗೆ ನೀಡಬೇಕಿದೆ. ಇದರ ಜೊತೆಯಲ್ಲಿ ಶಿಕ್ಷಕರ ಸಮಸ್ಯೆಗೆ ಧ್ವನಿಯಾಗುತ್ತ ಸಂಘಟನೆಯನ್ನು ಬಲ ಪಡಿಸೋಣ. ನಮ್ಮ ಬೇಕು ಬೇಡಿಕೆಗಳಿಗೆ ಸರ್ಕಾರದ ಮೇಲೆ ಒತ್ತಡ ಹೇರೋಣ, ಸಂಘಟನಾತ್ಮಕ ಶಕ್ತಿಯೊಂದಿಗೆ ನಮ್ಮ ಕಾರ್ಯ ಸಾಧನೆ ಮಾಡೋಣ ಎಂದು ಕರೆ ನೀಡಿದರು.ಶಿಕ್ಷಕರ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅರ್ಜುನ ಲಮಾಣಿ, ಜಿಒಸಿಸಿ ಬ್ಯಾಂಕಿನ ನಿದೇರ್ಶಕ ಹಣಮಂತ ಕೊಣದಿ, ಕಬೂಲ್ ಕೊಕಟನೂರ ಮಾತನಾಡಿ ಜಿಲ್ಲೆಯ ಇಬ್ಬರು ಶಿಕ್ಷಕರನ್ನು ನಾಮನಿದೇರ್ಶನ ಮಾಡಿದ ರಾಜ್ಯ ಸಂಘದ ಅಧ್ಯಕ್ಷ ನಾಗೇಶ ಹಾಗೂ ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ ನುಗ್ಲಿ ಇವರಿಗೆ ಅಭಿನಂದನೆಗಳನ್ನು ತಿಳಿಸಿದರು.ಇದೇ ಸಂದರ್ಭದಲ್ಲಿ ನಾಮನಿರ್ದೇಶನಗೊಂಡ ಶಿಕ್ಷಕರಿಗೆ ಪ್ರಮಾಣ ಪತ್ರ ನೀಡಿ, ಸನ್ಮಾನ ಮಾಡಿ ಗೌರವಿಸಲಾಯಿತು. ಜಿಒಸಿಸಿ ಬ್ಯಾಂಕಿನ ಉಪಾಧ್ಯಕ್ಷ ಅಶೋಕ ಚನಬಸಗೋಳ, ಅಲ್ಲಾಬಕ್ಷ ವಾಲೀಕಾರ, ಎಂ.ಎಸ್.ಟಕ್ಕಳಕಿ, ಎಂ.ಎಂ.ವಾಲೀಕಾರ, ಸಲೀಮ ದಡೇದ, ವೈ.ಟಿ.ಪಾಟೀಲ, ಎಂ.ಎಂ.ಮುಲ್ಲಾ, ಪರಮಾನಂದ ಚಾಂದಕವಟೆ, ಎ.ಬಿ.ದಡಕೆ, ಕಾಂತು ಇಂಡಿ, ಸಿ.ಜಿ.ಹಾರಿವಾಳ, ಅಶೋಕ ಭಜಂತ್ರಿ, ಸಾಬು ಗಗನಮಾಲಿ, ಸುನೀಲ್ ಬಿರಾದಾರ, ಆನಂದ ಪವಾರ, ಎಸ್.ಎಲ್.ಮಾನೆ, ಟಿ.ಕೆ.ಜಂಬಗಿ, ಮುತ್ತು ಹೆಬ್ಬಾಳ ಸೇರಿದಂತೆ ತಿಕೋಟಾ, ಗ್ರಾಮೀಣ, ಇಂಡಿ ಹಾಗೂ ನಗರ ವಲಯದ ಶಿಕ್ಷಕ ಸಂಘಟನೆ ಪದಾಧಿಕಾರಿಗಳು, ಪ್ರಮುಖರು ಪಾಲ್ಗೊಂಡಿದ್ದರು.